Tuesday, November 11, 2008

ಇಲ್ಲಿರಲಾರೆ. . . . . . ಅಲ್ಲಿಗೆ ಹೋಗಲಾರೆ

ಕೈಲ್ಲೊಂದು ಸೂಟ್‌ಕೇಸ್‌. ತಲೆಯ ತುಂಬ ಆಕಾಶದಷ್ಟು ವಿಸ್ತಾರವಾದ ಕನಸು. ಮನೆಯಿಂದ ಬೆಂಗಳೂರಿಗೆ ಹೊರಟಾಗ ಒಂದಷ್ಟು ಕಣ್ಣೀರು. ಮತ್ತೆ ಮನೆಗೆ ನಾವು ಖಾಯಂ ಆಗಿ ಇರಲು ಬರುವುದಿಲ್ಲಾ ಎನ್ನುವ ಭಯ. ಮನೆಯ ಹಿರಿಯರಿಗೆ ಕಾಲ;ಇಗೆ ಬಿದ್ದು ಗಟ್ಟಿ ಮನಸ್ಸು ಮಾಡಿ ಹೊರಟು ಬಿಡುತ್ತೇವೆ. ಹಳ್ಳಿಯಿಂದ ಹೊರಡುವ ಪ್ರತಿಯೊಬ್ಭನ ಮುಗ್ದ ಗುಣ ಇದು.
ಹಳ್ಳಿಯಲ್ಲಿಯೇ ಹುಟ್ಟಿ ಹತ್ತನೇ ತರಗತಿಯವರೆಗೂ ಮನೆಯವರ ಒತ್ತಾಯಕ್ಕೆ ಓದಿ ಅಂತೂ ಇಂತೂ ಪಾಸಾಗಿ ಊರು ಬಿಟ್ಟು ಶಿಕ್ಷಣಕ್ಕಾಗಿ ಬೇರೆ ಊರನ್ನು ಸೇರಿದ ಮೇಲೆ ಡಿಗ್ರಿ, ಡಿಪ್ಲೊಮೊ ಹಾಳು ಮೂಳು ಓದುತ್ತೇವೆ.
ಹತ್ತನೇ ತರಗತಿಯವರೆಗೂ ಗುಡ್ಡೆ ಗೇರಣ್ಣು, ಹಲಿಗೆ ಹಣ್ಣಿನ ಮಟ್ಟಿ, ಸಂಪಿಗೆ ಮರ, ಹೊಳೆದಾಸವಾಳ ಹಣ್ಣು , ಹೊಳೆಗುಂಡಿ, ಬಾಳೆಮರದ ತೆಪ್ಪ, ಗುಡ್ಡ ಅಣೇಯ ಚೌಕದಲ್ಲಿ ಆಡುವ ಕ್ರಿಕೆಟ್‌, ನವರಾತ್ರಿಯ ಟೈಮಿನಲ್ಲಿ ಚಿನ್ನಿದಾಂಡು, ಹುಡುಗಿಯರ ಕೀಟಲೆಗಾಗಿ ಆಡುವ ಲಗೋರಿ ಇವಿಷ್ಟೇ ಪ್ರಪಂಚವಾಗಿತ್ತು.
ಎಂದು ನಾಲ್ಕು ಅಕ್ಷರ ಕಲಿತು ಹೊರ ಬಿದ್ದೇವೋ ಅಮದೆ ನಮ್ಮ ಪ್ರಪಂಚ ವಿಸ್ತಾರವಾಗಿ ಕಾಣ ತೊಡಗಿತು. ಬೆಂಗಳೂರು ಸೇರಿ ನೌಕರಿ ಮಾಡು ಎನ್ನುವ ಬಯಕೆಯು ಪ್ರಾರಂಭವಾಗತ್ತದೆ. (ಮನೆಯಲ್ಲೆ ಇದ್ದು ಜಮೀನು ನೋಡಿ ಕೊಂಡಿರುವ ಎಂದರೆ, ಮನೆಯಲ್ಲಿದ್ದು ಸೆಗಣಿ ತೆಗೆಯುವವನಿ ಹೆಣ್ಣು ಮಕ್ಕಳನ್ನು ಕೊಡುವ ಮಂದಿ ಇಲ್ಲಾ. ಅಂದರೆ ಅವನಿಗೆ ಮದುವೆನು ಇಲ್ಲಾ. ಅನಿವಾಯದ ಬ್ರಹ್ಮಚಾರಿತ್ವದ ಕರ್ಮ) . ಬೆಂಗಳೂರಿಗೆ ಬಂದು ಇಳಿಯುವಾಗಲೇ ನಾವು ಸಾವಿರ ಸಾವಿರ ಜನರ ಮಧ್ಯೆ ಕಳೆದು ಹೋಗಿರುತ್ತೇವೆ. ಬಂದ ಹೊಸತರಲ್ಲಿ ನೆಂಟರ ಮನೆಯಲ್ಲಿ ಆಶ್ರಯ ಪಡೆದು ಎರಡು ತಿಂಗಲ ನಂತರ ಸ್ವಂತ ರೂಮ್‌ ಮಾಡಿ ಯಾವುದೋ ಮುಲೆಯಲ್ಲಿ ಮತ್ತೆ ಕಾಣೆ ಯಾಗಿರುತ್ತೇವೆ.
ದಿನ ಪ್ರಾರಂಭವಾಗುವುದೇ ಓಟದಿಂದ. ಆಂದ್ರದ ಹೊಟೇಲ್‌ನಲ್ಲಿ ತಿಂಡಿ ತಿಂದು, ಮಧ್ಯಾಹ್ನ ಪಾಸ್ಟ್‌ಪುಡ್‌ನಲ್ಲಿ ಮೊಸರನ್ನ ತಿಂದು, ಮನೆಗೆ ಬರುವಾಗ ಸುಸ್ತು. ಹತ್ತಿರದ ಬೇಕರಿಯ ಬನ್ನು. ಗ್ಯಾಸ್‌ ಆಗುತ್ತದೆ ಎಂದು ಒಂದು ಸೋಡಾ ಕುಡಿದು ಮಲಗಿದರೆ , ಮರುದಿನ ಮತ್ತದೇ ಜಂಜಾಟ. ಬಸ್ಸಿನಲ್ಲಿಯೇ ಅರ್ಧ ಆಯುಷ್ಯ ಬರ್ಬಾದ್‌.
ಮನೆಯ ನೆನಪು ಕಾಡುತ್ತದೆ. ಎದ್ದು ಊರಿಗೆ ಹೊರಟು ಬಿಡೋಣ ವೆನಿಸುತ್ತದೆ. ಸಾಧ್ಯವಾಗುವುದಿಲ್ಲ. ಅಪ್ಪ, ಅಮ್ಮ ಮನೆ ಮಂದಿಯೆಲ್ಲ ನೆನಪಾಗುತ್ತಾರೆ. ಆದರೆ ಸುಡಗಾಡು ಪ್ರೇಸ್ಟಿಜ್‌ ನಮ್ಮನ್ನು ಬಿಡೊದಿಲ್ಲ. ಊರಿಗೆ ಹೋದರು, ಏನೋ ಬಾನಗಡಿ ಮಾಡಿಯೇ ಊರಿಗೆ ಸೇರಿದ್ದಾನೆ ಎಂದು ಊರವರ ಎದು ನಾವೊಬ್ಬ ಕ್ರೀಮಿನಲ್‌ ಆಗಿ ಕ್ರೀಮಿ ಆಗಿಬಿಡುತ್ತೇವೆ ಎನ್ನುವ ಭಯ.
ಮಹಾನಗರಕ್ಕೆ ಸೇರಿದ ಮೇಲೆ ನಮ್ಮ ಟ್ಯಾಲೆಂಟ್‌ ಅಂದ್ರ ನಾಟಕ, ಯಕ್ಷಗಾನ, ಸಂಗೀತ ಯಾವಯಾವದು ಇರುತ್ತೋ ಅದನ್ನೇಲ್ಲ ಒಂದು ಹಾಳೆಯಲ್ಲಿ ಬರೆದು ಉರುಟ ಉಂಡೆ ಮಾಡಿ ಮೂಲೆಯಲ್ಲಿರುವ ಕಸದ ಟಬ್‌ಗೆ ಹಾಕ ಬೇಕಾಗುತ್ತದೆ. ಅವುಗಳ ನೆನಪಿನಲ್ಲಿ ಯೇ ವರ್ತಮಾನದ ಬದುಕನ್ನು ಕಳೆಯುತ್ತ ಇರಬೇಕಾಗುತ್ತದೆ.
ಝಿ ಕನ್ನ ವಾಹಿಯಲ್ಲಿ ಒಂದು ಧಾರವಾಹಿ ಬರುತ್ತೀದೆ ಇಲ್ಲಿ ಬಂದೆ ಸುಮ್ಮನೆ ಎಂದು ಅದನ್ನು ನೋಡಿ ಹಳ್ಳಿ ಬಿಟ್ಟು ಬಂದ ನಮ್ಮ ಕತೆಯಂತೆ ಇದೆ. ಅದನ್ನು ನೋಡಿ ನನಗೆಂತು ತುಂಬಾ ಬೇಸರವಾಯಿತು. ಮನೆಯ ನೆನಪು ಕಾಡ ತೊಡದೆ. ಆದರೆ ಪ್ರೇಸ್ಟೆಜು. ಇಲ್ಲಿರಲಾರೇ ಅಲ್ಲಿಗೆ ಹೋಗಲಾರೇ ಎನ್ನುವ ಸ್ಥಿತಿ.

4 comments:

Unknown said...

ಅಲ್ಲಿರಲಾರೆ ಇಲ್ಲಿಗೆ ಓಡಿಬರುವ ಆಲೋಚನೆ ಸಿನಿಕತನದ್ದು. ಅನುಷ್ಠಾನಕ್ಕೆ ತಂದರೆ ನಂತರ ಹಳ್ಳಿಯಲ್ಲಿರಲಾರದೆ ಮೇಲೆ ಹೋಗುವ ಆಲೋಚನೆ ಮಾಡಬೇಕಾದೀತು. ಹಾಗಾಗಿ ಅಂತಹ ಯೋಚನೆಗಳಲ್ಲು ಬ್ಲಾಗ್ ಬರೆಯುವಷ್ಟರ ಮಟ್ಟಿಗೆ ಇರಲಿ. ಅದು ನಿಜವಾದ ಮಜ.

thandacool said...

raganna adakke heliddu. enadru illinda urige hodre nammanobba aparaadiyannagi nodale hattubudta. heliddu.

thandacool said...
This comment has been removed by the author.
Pramod P T said...

ಏನಾತ ನಿಂಗೆ!
ಆದ್ರೆ ಹೈಸ್ಕೂಲ್ ನಲ್ಲಿ ಎಂತ ಬಾನ್ಗಡಿ ಮಾಡಿದ್ದಿ ಅಂತ ಎಂಗೊತ್ತು!!:) :)

FEEDJIT Live Traffic Feed