Friday, November 21, 2008

ಪ್ರಮೋದನ ಕುಂಚದ ಕಲೆ.....

`ಕಲೆ' ಎಂಬುದು ಹುಟ್ಟಿನಿಂದಲೇ ಬಂದಿರಬೇಕು. ಆಸಕ್ತಿ ಇದ್ದರೂ ಸಿದ್ಧಿಸಿಕೊಳ್ಳುವುದಕ್ಕೆ ಕಷ್ಟ. ನಾನೂ ಚಿತ್ರಕಲೆ ಆಸಕ್ತಿ ಇರುವವನೇ. ಆದರೆನೇನು ಗಣಪತಿ ಬಿಡಿಸಿದರೆ ಹನುಮಂತ ಆಗುತ್ತದೆ ಅಷ್ಟೇ. ನನ್ನ ಓದುಗ ಜೊತೆಗಾರ ಪ್ರಮೋದ್‌ ಒಬ್ಬ ಒಳ್ಳೆಯ ಕಲಾವಿದ. ಈತ ಹೈಸ್ಕೂಲ್‌ ಓದುತ್ತಿರುವಾಗಲೇ ಉತ್ತಮ ಚಿತ್ರಗಳನ್ನು ಬಿಡಿಸುತ್ತಿದ್ದ. ನಮಗೆಲ್ಲ ಆಶ್ಚರ್ಯ `ಎಂತಹ ಚಿತ್ರಗಳು' ಎಂದು. ನಾವು ಪ್ರಯತ್ನ ಮಾಡುತ್ತಿದ್ದೆವು. ಪರಿಣಾಮ ಮಾತ್ರ ಶೂನ್ಯವಾಗಿತ್ತು.
ಪ್ರಮೋದ್‌ ಓದಿನಲ್ಲೂ ಮುಂದೆ ಇದ್ದವನು. ಇಂಜನಿಯರಿಂಗ್‌ ಕಲಿತು ಒಳ್ಳೆ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಒತ್ತಡದ ಬದುಕಿಗೆ ಹೋದಾಗ ಹವ್ಯಾಸಗಳು ಹಿಂದೆ ಬೀಳುತ್ತವೆ. ಆದರೆ ಪ್ರಮೋದ್‌ ಮಾತ್ರ ಹವ್ಯಾಸವನೇ ವೃತ್ತಿಯಂತೆ ಸ್ವೀಕರಿಸಿದವನು. ನಮ್ಮ ಹಿರಿಯರೊಬ್ಬರು ಕೇಳಿದ ಮಾತು `ಏನು ಮಾಡ್ಕೊಂಡಿದಿಯಪ್ಪಾ?' ಅದಕ್ಕೆ ಉತ್ತರ `ಕಲಾವಿದನಾಗಿದ್ದೇನೆ ಸಾರ್‌' ಅದಕ್ಕವರು `ಸರಿ ಹೊಟ್ಟೆಗೆ ಏನು ಮಾಡ್ತೀಯಾ?' ಎಂದು. ಮಿತ್ರ ಪ್ರಮೋದ್‌ ಹಾಗಲ್ಲ. ಹೊಟ್ಟೆಗೆ ಕಂಪನಿಯಲ್ಲಿ ಕೆಲಸ. ಮನಸ್ಸಿನ ಹಸಿವನ್ನು ನಿಗಿಸಿಕೊಳ್ಳಲು ಕುಂಚ ಪ್ರಪಂಚಕ್ಕೆ ಹೋಗುತ್ತಾರೆ.
ಪ್ರಮೋದ್‌ ಒಟ್ಟುವರೆ ಚಿತ್ರ ಬರೆಯಲು ಹೋಗಲಿಲ್ಲ. ಕುಂಚಕ್ಕೊಂದು ವಿಷಯವನ್ನು ಕೊಟ್ಟುಕೊಂಡಿದ್ದಾನೆ. ಇದು ಗಮನಾರ್ಹವಾದದ್ದು.
`ಕಾನಿನ' ಮಿತ್ರನ ಕುಂಚ ಈ ವಿಷಯದ ಕುರಿತು ಕ್ಯಾನವಾಸ್‌ ಮೇಲೆ ಚಿತ್ರ ಬಿಡಿಸುತ್ತದೆ. ಕುಲಹೀನ, ವಿವಾಹ ಪೂರ್ವದ ಸಂಬಂಧದಲ್ಲಿ ಹುಟ್ಟಿದ ಮಕ್ಕಳ ಬದುಕಿನ ಚಿತ್ರಣ ಇದರಲ್ಲಿ ಇರುತ್ತದೆ. ಉದಾಹರಣೆಗೆ ಕರ್ಣನ ಬದುಕುನ್ನು ಗಮನಿಸಿದರೆ ಗೊತ್ತಾಗುತ್ತದೆ. ಒಳ್ಳೆಯದ್ದಾಗಿದ್ದರೆ ತನ್ನ ಮಗ. ಕೆಟ್ಟವನಾದರೆ ಬೀಜ ಬಿತ್ತಿದಂತೆ ಬೆಳೆ. ಎನ್ನುವ ನುಡಿ ಸಮಾಜದಲ್ಲಿ ಕೇಳಿಬರುತ್ತದೆ. ಇಂತಹ ಅದ್ಭುತ ವಿಚಾರಗಳನ್ನು ಇಟ್ಟುಕೊಂಡು ಪ್ರಮೋದ್‌ ಚಿತ್ರ ಬಿಡಿಸುತ್ತಿದ್ದಾನೆ. ಇವನ ಪ್ರತಿಯೊಂದು ಚಿತ್ರಕ್ಕೂ ಪುಟಗಟ್ಟಲೆ ವ್ಯಾಖ್ಯಾನವನ್ನು ನೀಡಬಹುದು.
ಇವನು ತನ್ನ ಮೂಲ ಗುರು, ಕಲೆಯ ಬಗ್ಗೆ ಉತ್ಕಟ ಆಸಕ್ತಿಯನ್ನು ಮೂಡಿಸಿದ ಸತೀಶ್‌ ಯಲ್ಲಾಪುರ ಅವರನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ.
ಪ್ರಮೋದನ ಚಿತ್ರಗಳು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಗೊಂಡಿದೆ. ಸಧ್ಯ ತುಮಕೂರಿನ ದೇವದುರ್ಗದಲ್ಲಿ ನಡೆದ `ಕಾಸರವಳ್ಳಿ ಗೌರವ' ಕಾರ್ಯಕ್ರಮದಲೂ ಪ್ರದರ್ಶನಗೊಂಡಿದೆ. ಇವನು ಬರೆದ ಚಿತ್ರಗಳನ್ನು ನೋಡುತ್ತಿದ್ದರೆ ನೋಡುತ್ತಲೇ ನಿಲ್ಲಬೇಕೆಂಬಷ್ಟು ಖುಶಿಯಾಗುತ್ತದೆ.
ಮಿತ್ರನ ಕುಂಚ ಪ್ರಪಂಚಕ್ಕೆ ಹ್ಯಾಟ್ಸ್‌ ಅಪ್‌ ಹೇಳುವುದಷ್ಟೇ ನಮ್ಮ ಕೆಲಸ.
kunchaprapanca.blogspot.com
ಇದು ಇವನ ಬ್ಲಾಗ್‌. ನೋಡಿ.

1 comment:

Unknown said...

chitra super kananno

FEEDJIT Live Traffic Feed