Friday, October 31, 2008

ಬಂಗಾರ ನಾಯ್ಕರ ಕೌರ­ವನೂ ಸಿಐಡಿ ನಾಯಿಯೂ

ನನಗೆ ಯಾಕೆ ಅಂತ ಗೊತ್ತಿಲ್ಲಾ ಯಕ್ಷ­ಗಾನ ಅಂದರೆ ಪಂಚ­ಪ್ರಾಣ. ನನ­ಗಿನ್ನೂ ಮಾತು ಬರದ ಸಮ­ಯ­ದ­ಲ್ಲಿಯೇ ದೊಡ್ಡ­ಪ್ಪನ ಜೊತೆ ಯಕ್ಷ­ಗಾನ ನೋಡ­ಲಿಕ್ಕೆ ಹೋಗು­ತ್ತಿದ್ದೆ.ಅ­ದ­ರಲ್ಲೂ ಶಾಸ್ತ್ರೀ­ಯ­ವಾಗಿ ಕುಣಿತ ಕಲಿತು ಆಟ ಆಡು­ವ­ವ­ರಿ­ಗಿಂತ ಹಳ್ಳಿ­ಯ­ಲ್ಲಿಯೇ ಒಂದು ತಿಂಗಳ ಯಕ್ಷ­ಗಾನ ಕಲಿತು ಕುಣಿ­ಯುವ ಹಳ್ಳಿ­ಗರ ಆಟ­ವೆಂ­ದರೆ ಖುಷಿಯೋ ಖುಷಿ.

ಹಳ್ಳಿ ಆಟ­ದಲ್ಲಿ ಆಟದ ಜೊತೆ ಅಪ­ಭ್ರಂ­ಶತೆ ಹೆಚ್ಚು ಕೂಡಿ­ರು­ವುದೇ ಇದಕ್ಕೆ ಕಾರ­ಣ­ವಾ­ಗಿತ್ತೋ ಏನೋ. ಎಪ್ರಿಲ್‌, ಮೇ ತಿಂಗಳು ಹಳ್ಳಿ ಆಟ­ಗ­ಳಿಗೆ ಸುಗ್ಗಿ ಕಾಲ. ಸಮಾ­ರಾ­ಧನೆ, ಶನಿ­ಕತೆ, ಊರಿನ ವಾರ್ಷಿ­ಕೋ­ತ್ಸವ ಏನೇ ಆದರೂ ಆಟ ಮಾತ್ರ ಗ್ಯಾರಂಟಿ. ಇದ­ರಲ್ಲಿ ಮುಖ್ಯ­ಪಾ­ತ್ರ­ಧಾ­ರಿ­ಯಾಗಿ ಸ್ವಲ್ಪ ಹೆಸ­ರಿ­ರುವ ಕಲಾ­ವಿದ ಭಾಗ­ವ­ಹಿ­ಸಿ­ದರೇ ಊಳಿದ ಪಾತ್ರ­ಗ­ಳಿಗೆ ಹಳ್ಳಿಯ ಹೈದರೆ ಇರು­ತ್ತಿ­ದ್ದರು.

ನಮ್ಮೂರ ಹತ್ತಿರ ಹಳಿ­ಯಾಳ ಎನ್ನುವ ಊರಿದೆ. ಆ ಊರಿ­ನಲ್ಲಿ ಬಂಗಾರ್ಯ ನಾಯ್ಕ ಎನ್ನುವ ಹಿರಿಯ ವ್ಯಕ್ತಿ­ಯೊ­ಬ್ಬ­ರಿ­ದ್ದಾರೆ. ಅವರು ಆ ಊರಿನ ಮಾರಿ ದೇವ­ಸ್ಥಾ­ನದ ಪೂಜಾ­ರಿಯು ಹೌದು. ಇವ­ರಿಗೆ ಯಕ್ಷ­ಗಾ­ನ­ದಲ್ಲಿ ಪಾತ್ರ ಮಾಡುವ ಚಟ ಜೋರು. ತಮ್ಮ ಮನೆಯ ಸಮಾ­ರ­ಧಾ­ನೆ­ಯಲ್ಲಿ ಒಂದು ಯಕ್ಷ­ಗಾನ ಏರ್ಪ­ಡಿಸಿ ಅಲ್ಲಿ ತಾವೊಂದು ಮುಖ್ಯ ಪಾತ್ರ­ವನ್ನು ಮಾಡು­ತ್ತಿ­ದ್ದರು. ಸಾಮಾ­ನ್ಯ­ವಾಗಿ ಪ್ರತಿ­ವ­ರ್ಷವೂ ಗದಾ­ಯುದ್ಧ ಪ್ರಸಂ­ಗವೇ ಇರು­ತ್ತಿತ್ತು. ಕಾರ­ಣ­ವೆಂ­ದರೆ ಇವ­ರಿಗೆ ಕೌರ­ವನ ಪಾತ್ರ ಮಾಡು­ವು­ದ­ರಲ್ಲಿ ಬಹಳ ಆಸಕ್ತಿ. ಪ್ರತಿ ಬಾರಿಯೂ ಇದು ನನ್ನ 101ನೇ ಕೌರವ ಎನ್ನು­ತ್ತಿ­ದ್ದರು.

ಇವರ ಸಯೋಂ­ಜ­ನೆ­ಯಲ್ಲಿ ಆದ ಯಕ್ಷ­ಗಾ­ನ­ದಲ್ಲಿ ಇವರ ಸಮ­ಪ್ರಾ­ಯ­ದ­ವರೆ ಪಾತ್ರ­ವನ್ನು ಮಾಡ­ಬೇ­ಕಿತ್ತು. ನನ್ನ ದೊಡ್ಡ­ಪ್ಪ­ನಿಗೂ ಒಂದು ಪಾತ್ರ ಗ್ಯಾರಂಟಿ. ಮತ್ತಿ­ಗಾರ ಶಣ್ಣ ಹೆಗಡೆ( ದೊಡ್ಡಪ್ಪ)ರು ಸಂಜ­ಯನ ಪಾತ್ರ­ವನ್ನು, ಹೊಸ­ಗದ್ದೆ ಪಿ.ವಿ ಹೆಗ­ಡೆರು ಭೀಮನ ಪಾತ್ರ­ವನ್ನು ಮಾಡ­ಲೇ­ಬೇಕು. ದಂಟ­ಕಲ್‌ ಸತೀಶ್‌ ಹೆಗ­ಡೆಯ ಭಾಗ­ವ­ತಿಕೆ ಇಲ್ಲ­ದಿ­ದ್ದರೆ ಬಂಗಾರ ನಾಯ್ಕರ ಪಾತ್ರ ಹೊರ ಬೀಳು­ತ್ತಿ­ರ­ಲಿಲ್ಲ.

ಆಟ ಪ್ರಾರಂ­ಭ­ದಿಂ­ದಲೇ ಅಪ­ಭ್ರಂ­ಶ­ತೆಯು ಪ್ರಾರಂಭ. `ಕು­ರು­ರಾಯ ಅದ­ನೆಲ್ಲ ಕಂಡು ಸಂತಾ­ಪದಿ ತನ್ನೇಯ ಭಾಗ್ಯ­ವೆ­ನುತ' ಎನ್ನುವ ಪದ್ಯ­ದೊಂ­ದಿಗೆ ಕೌರ­ವನ ಪ್ರವೇಶ ಎಲ್ಲಾ ಯಕ್ಷ­ಗಾ­ನ­ದಲ್ಲೂ ಆಗು­ತ್ತದೆ. ಆದರೆ ಬಂಗಾರ್ಯ ಅವರ ಕೌರ­ವನ ಪಾತ್ರ ಪ್ರವೇ­ಶ­ವಾ­ಗು­ವುದೇ `ಕು­ರು­ರಾಯ ಅದ­ನೆಲ್ಲ ಕಂಡು ಸಂತೋ­ಷದಿ' ಎಂದು. ಅದಕ್ಕೆ ಕಾರ­ಣವು ಉಂಟು`ತೊಂ­ತ್ತೊಂ­ಬತ್ತು ಜನ ತಮ್ಮಂ­ದಿ­ರನ್ನು ಪಾಮ­ಡ­ವರು ಕೊಂದರು ತನ್ನನ್ನು ಮಾತ್ರ ಕೊಲ್ಲ­ಲಿಕ್ಕೆ ಆಗ­ಲಿ­ಲ್ಲ­ವಲ್ಲ ಎನ್ನು ಸಂತೋಷ. ಪ್ರೇಕ್ಷ­ಕರು ಚಪ್ಪಾಳೆ ಹೊಡೆ­ದಂತೆ ಕೌರ­ವನ ಕುಣಿ­ತವು ಜೋರಾಗಿ ಸಾಗು­ತ್ತಿತ್ತು. ಕೃಷ್ಣನ ಕಂಡಾಗ ಕೌರವ ಹೇಳುವ ಅರ್ಥವು ಅಷ್ಟೇ ಸೊಗಸು ` ಏನಾ ಕಪಟಿ ನೀನು ವಿದು­ರನ ಮನೆ ಕಡ­ವಾ­ರ­ದ­ಲೆಲ್ಲ ಹಾಲು ಹರ್ಸಿ­ಯಂತೆ ಹೌದನಾ. ಎಂದು ತನ್ನ ಲೋಕಲ್‌ ಲಾಂಗ್ವೇ­ಜ್‌­ನ­ಲ್ಲಿಯೇ ಅರ್ತ­ವನ್ನು ಹೇಳು­ವುದು ವಿಶೇಷ. ನೀರಿ­ನಲ್ಲಿ ಅಡ­ಗಿ­ರುವ ಕೌರ­ವ­ನನ್ನು `ಛೀಂ­ದ್ರ­ಪ­ಕುಲ ಕುನ್ನಿ' ಎಂದು ಬೈದು ಕರೆ­ದಾಗ ನೀರಿಂದ ಮೇಲೆದ್ದು ಬಂದ ಕೌರವ ತಡ­ಮಾ­ಡದೇ `ನಾನು ಛೀಂದ್ರ­ಪ­ಕುಲ ಕುನ್ನಿ­ಯಾ­ದರೆ ನೀನೇನು ಸಿಐಡಿ ನಾಯನಾ' ಎಂದು ಇಂಗ್ಲಿಷ್‌ ಬಳಕೆ ಮಾಡಿ ಯಕ್ಷ­ಗಾ­ನದ ಕೊಲೆ­ಯಾ­ಗು­ತ್ತದೆ. ಆದರೆ ಇದು ಹಳ್ಳಿ ಆಟ­ವೆಂಬ ವಿನಾ­ಯತಿ ಇದ­ಕ್ಕಿ­ರು­ತ್ತದೆ.

ಹಳ್ಳಿ ಆಟದ ಬಗ್ಗೆ ಯಥೇಚ್ಛ ಬರೆ­ಯ­ಬ­ಹುದು. ಮುಂದಿನ ಕಂತಿ­ನಲ್ಲಿ ಮತ್ತಷ್ಟು ಸೊಗ­ಸಾದ ಹಳ್ಳಿ­ಗರ ಅರ್ಥ ವೈಭ­ವದ ಬಗ್ಗೆ ಹೇಳು­ತ್ತೇನೆ.

Saturday, October 25, 2008

ಮತಾಂತರ ಮಣ್ಣೆರಚಾಟ


ಚರ್ಚ್‌ ಮೇಲಾದ ದಾಳಿಯಿಂದ ಪ್ರಾರಂಭಿಸಿ ಇಂದಿನವರೆಗೆ ಮತಾಂತರದ ಬಗ್ಗೆ ಬಹಳಷ್ಟು ಜನರು ನಾನಾ ನಮುನಿ ಮಾತನಾಡುತ್ತಿದ್ದಾರೆ. ಕಮ್ಯೂನಿಷ್ಟರು ಒಂದು ರೀತಿ ಮಾತನಾಡಿದರೆ, ಬುದಿಜೀವಿಗಳು ಮತ್ತೊಂದು ರೀತಿ ಹಲಬುತ್ತಾರೆ. ಹಿಂದೂಗಳೂ ನಮ್ಮ ಸುದ್ದಿಗೆ ಬಂದರೆ ಯಾರನ್ನೂ ಬೀಡುವುದಿಲ್ಲವೆಂದು ಗುಟುರು ಹಾಕುತ್ತಿದ್ದಾರೆ. ನಿಜವಾಗಿ ಮಾತಡಬೇಕಾದವರು ಬಾಯಿಮುಚ್ಚಿ ಕುಳಿತಿದ್ದಾರೆ.

ಮಾತಾಂತರ ಎನ್ನುವುದು ಒಂದು ಸಮಸ್ಯೆ ಎಂದು ಅನ್ನಿಸಿದರೆ ಅದನ್ನು ಬಗೆಹರಿಸಲು ಹಲವಾರು ರೀತಿಯ ಮಾರ್ಗಗಳೆಂತು ಇವೆ. ಅದರ ಬದಲು ಹೊಡೆದಾಟ ಬಡಿದಾಟ ಯಾಕೆ ಬೇಕು. ಇನ್ನು ಮತಾಂತರ ಗೊಳ್ಳುತ್ತಿರುವವವರು ಯಾರು? ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಬಡವರು. ಅವರಿಗೆ ಬೇಕಾಗಿರುವುದು ಹೊಟ್ಟೆಗೆ ಹಿಟ್ಟೆ ಹೊರತು. ಯಾವ ಮತವು ಬೇಡ, ದೇವರು ಬೇಡ ಎನ್ನುವ ಸ್ಥಿತಿಯಲ್ಲಿರುವವರು. ಇಂತಹ ದುರ್ಬಲರು ಕ್ರಿಶ್ಚನ್‌ರಿಗೆ ದೊರೆತು, ಅವರನ್ನು ಮತಾಂತರ ಗೊಳಿಸಿದರೆ ತಪ್ಪೇನು? ಹಿಂದೂ ಧರ್ಮೀಯರಾದ ನಾವು ಅವರನ್ನು ಮೇಲ್ಮಟ್ಟಕ್ಕೆ ತರಲು ಯಾವ ರೀತಿ ಪ್ರಯತ್ನಿಸಿದ್ದೇವೆ?

ಇನ್ನೂ ನಮ್ಮ ಮಠ ಮಾನ್ಯಗಳೂ ತಮ್ಮ ತಮ್ಮ ಸ್ವಂತ ಕೆಲಸದಲ್ಲಿ ಬ್ಯುಸಿಯಾಗಿವೆ. ಅವರ ಧರ್ಮ ಯಾವುದು ಎಂದು ಮರೆತು ಬಿಟ್ಟಿದ್ದಾರೆ. ಹಾಗೇ ಒಂದೊಂದು ಒಳ ಪಂಗಡಗಳಿಗೂ ಒಂದೊಂದು ಮಠ. ಈ ಸ್ವಾಮಿಗೆ ಹೆಚ್ಚಿಗೆ ಆಸ್ತಿಯಿದೆ ಎಂದು ಆ ಸ್ವಾಮಿಜಿ ಮತ್ತು ಆಸ್ತಿ ಮಾಡುವ ಪೈಪೋಟಿಯಲ್ಲಿಯೇ ಕಾಲಹರಣ ಮಾಡಿದ ಹಾಗೇ ಕಾಣುತ್ತಿದೆ.ಇವರು ಹಿಂದೂಳಿದ ವರ್ಗಗಳ ಅಭಿವೃದಿಯಲ್ಲಿ ತೊಡಗಿದರೆ ಮತಾಂತರ ಪ್ರಕರಣಗಳು ನಿಲ್ಲಬಹುದೇನೋ.

ಅಷ್ಟೇ ಅಲ್ಲದೆ ಬುದಿಯಿದೆ ಎಂದು ತಮ್ಮ ಬಳಗದವರಿಂದದಲೇ ಹೇಳಿಸಿಕೊಳ್ಳುತ್ತಿರುವ ಬುದಿಜೀವಿ ಮಂದಿಗಳು ಸ್ವಲ್ಪ ವಿಸ್ತಾರವಾಗಿ ನೋಡಬೇಕು. ತಮ್ಮವವರಿಗೆ ಏನೇ ಆದರು ಬಾಯಲ್ಲಿ ಕಡಬು ಹಾಕಿಕೊಳ್ಳುವವರಂತೆ ಕುಳಿತು ಕೊಳ್ಳುವ ಇವರು. ದೊಡ್ಡ ಮಾನವತಾವಾದಿಗಳಂತೆ ಆಡುತ್ತಾರೆ. ನಿಜವಾಗಿಯೂ ಜಾತಿ, ಧರ್ಮದ ಬಗ್ಗೆ ಹೆಚ್ಚಿಗೆ ಒಲವು ಇರುವವರು ಇವರೇ. ಹೆಸರಿಗೆ ಮಾತ್ರ ಇವರು ಸಮಾಜವಾಗಳು.

ಇವರದ್ದು ಒಂದು ಸಂಸ್ಥೆಯಿದ್ದರೆ ಅಲ್ಲಿರುವವರು ಇವರ ಬಳಗದವರೆ ಆಗಿರುವುದು ವಿಶೇಷ. ಯಾರಾದರು ಹೀಗೆ ಹೇಳಿಯಾರು ಎಂದು ತೋರ್ಪಡಿಕೆಗೆ ಒಂದೊಂದು ಧರ್ಮೀಯರ ಒಬ್ಬರನ್ನು ದೋಸ್ತಿ ಮಾಡಿಕೊಂಡು ಬಿಡುತ್ತಾರೆ.ಇದರ ಬಗ್ಗೆ ಮಾತನಾಡುತ್ತಾ ಹೋದರೆ ನನ್ನನ್ನು ಆರ್‌ ಎಸ್‌ಸದ್‌ ಅವನು ಅಂದ್ಕೊಬಿಡ್ತಾರೆ. ನಾನ್ಯಾವತ್ತು ದೋಗಲೆ ಚಡ್ಡಿಯನ್ನು ಹಾಕಿ `ನಮಸ್ತೆ ಸದಾ ವತ್ಸಲೆ' ಎಂದು ಲಾಟಿಯನ್ನು ತಿರುಗಿಸಿಲ್ಲ. ಆದರೆ ಈ ಕೊಟ್ಟಿ ಸಮಾಜವಾದಿಗಳನ್ನ, ಬುದ್ದಿಜೀವಿ ಎನ್ನುವ ಪಂಗಡದವರನ್ನು ಕಂಡರೆ ರೋಸಿ ಹೋಗುತ್ತದೆ. ನಮ್ಮ ಧರ್ಮದಲ್ಲೂ ಮುಸ್ಲಿಂ, ಕ್ರಿಶ್ಚನ್‌ ಅಂತೆ ಪತ್ವಾ ಹೊರಡಿಸುವ ಅಥವಾ ತಪ್ಪು ಕಾಣಿಕೆಯನ್ನು ನೀಡುವ ಕಠೋರ ಪದತಿ ಇರಬೇಕಿತ್ತು ಅನ್ನಿಸುತ್ತದೆ.

Thursday, October 23, 2008

ಊರಿ­ಗೊಂದು ಕಟ್ಟೆ: ಅಲ್ಲೊಂ­ದಿಷ್ಟು ಕತೆ



ಊರೆಂದರೆ ಅಲ್ಲೊಂದು ಅರಳಿ ಕಟ್ಟೆ ಇರುವುದು ಸಾಮಾನ್ಯ. ಇದು ಹತ್ತಾರು ಹಳ್ಳಿಯವರು ಸಂಜೆ ಹೊತ್ತು ಕಾಲ ಕಳೆಯುವ ತಾಣ. ಇಂತಹ ಸ್ಥಳ ಇಲ್ಲದೆ ಇರುವ ಊರು ಅದು ಊರೇ ಅಲ್ಲ ಅನ್ನಬಹುದು.
ಹತ್ತಾರು ವರ್ಷಗಳ ಹಿಂದೆ ಈ `ಕಟ್ಟೆಕತೆ' ಬಹುತೇಕ ಊರುಗಳಲ್ಲಿ ಚಾಲ್ತಿಯಲ್ಲತ್ತು. ಇಂದು ಬಹಳಷ್ಟು ಊರುಗಳಲ್ಲಿ ಇದು ಬರಕಸ್ತಾಗಿದೆ. ಇದಕ್ಕೆ ಕಾರಣವು ಇದೆ. ಹಳ್ಳಿಗಳಲ್ಲಿ ಯುವಕರ ಸಂಖ್ಯೆ ಕಡಿಮೆಯಾಗಿರುವುದು. ಅಂದಿನ ಯುವಕರೆಲ್ಲ ಇಂದು ಮುದುಕರಾಗಿದ್ದಾರೆ. ಹತ್ತು ವರ್ಷದ ಹಿಂದೆ ಹಳ್ಳಿಗಳಲ್ಲಿ ಇದ್ದ ಕಟ್ಟಯ ಕಳೆ ಇಂದು ಕುಂದಿದೆ.
ಕಟ್ಟೆ, ಪ್ರಪಂಚದ ಎಲ್ಲಾ ವಿಷಯಗಳನ್ನು ವಿಸ್ತ್ರತವಾಗಿ, ಕುಲಂಕೂಷವಾಗಿ, ವಿಮರ್ಶಾತ್ಮಕವಾಗಿ, ವ್ಯಂಗ್ಯವಾಗಿ ಚರ್ಚೆ ಮಾಡುವ, ಹೊತ್ತು ಹೋಗದೆ, ಮನೆಯಲ್ಲಿ ಕೆಲಸ ಮಾಡದೆ ಇರುವವರೆ ಹೆಚ್ಚು ಮಂದಿ ಇರುವ ಸ್ಥಳ ಎಂದು ವ್ಯಾಖ್ಯಾನಿಸ ಬಹುದು.
ಹಬ್ಬ ಹರಿದಿನಗಳು ಬಂದರೆ ಕಟ್ಟೆಗೊಂದಷ್ಟು ಮೆರಗು ಬರುತ್ತದೆ. ಊರಿಂದ ಪರ ಊರಿಗೆ ಹೋದ ವಿದ್ಯಾವಂತ ದಡ್ಡರೆಲ್ಲ ಅಲ್ಲಿ ಸೇರುತ್ತಾರೆ. ಊರಿಗೆ ಬಂದವ ಕಟ್ಟೆಗೆ ಬರದೆ ಇರುತ್ತಾನೆಯೇ? ಬಂದೆ ಬರುತ್ತಾನೆ. ಕಟ್ಟೆಯ ಆಕರ್ಷಣೆಯೇ ಅಂದದ್ದು. ಸುತ್ತ ಹತ್ತು ಊರುಗಳ ಗಾಸಿಪ್‌ ಗೊತ್ತಾಗುವುದು ಅಲ್ಲಿಯೇ.
ಕಟ್ಟೆ ಪಂಚಾಯ್ತಿಯಲ್ಲಿ ಬರುವ ಕತೆಗಳ ಭಿನ್ನತೆ ಹೀಗಿರುತ್ತದೆ ಎನ್ನಬಹುದು. ಜಾರ್ಜ ಬುಷ್‌ ಏನೂ ಪ್ರಯೋಜನಕ್ಕೆ ಬರದೆ ಇರುವವನು. ಕ್ಲಿಂಟನ್‌ ಆದ್ರೆ ಮನೆಯಲ್ಲಿ ಹೆಂಡ್ತಿ ಇದ್ರು ಮೋನಿಕಾ ಗೀನಿಕಾ ಅಂತ ಮಜಾ ಮಾಡಿ ಕೊಂಡು ಇದ್ದ. ಇವನಿಗೆ ಯಾವಾಗಲೂ ಮತ್ತೊಂದು ದೇಶಕ್ಕೆ ತಾಪತ್ರಯ ಮಾಡುವ ಚಿಂತೆಯಲ್ಲಿಯೇ ಇರುತ್ತಾನೆ. ರಸಿಕತನ ಇಲ್ಲದೆ ಇರುವ ಮುಂಡೆದು. ಅದೇ ನಮ್ಮ ಪಾಟೀಲ್ರು ಅದೇ ಜೆ. ಹೆಚ್‌. ಪಾಟೀಲ್ರು ಹೆಣ್ಣು, ಹೆಂಡ ಇದ್ರೆ ಸಾಕಾಗಿತ್ತು ದೇಶ ಏನೇ ಆದ್ರು ತಮ್ಮ ರಸಿಕತನ ಬಿಟ್ಟವರಲ್ಲ.
ಅಲ್ಲ ಕಣಲೇ ನಮ್ಮೂರು ಎಂಎಲ್‌ಎ ಸಾಧಾರಣದವನಾ ಬೆಂಗಳೂರಲ್ಲಿ ಒಂದು ಹೆಣ್ಣು ಇಟ್ಟು ಕೊಂಡಿದಾನಂತೆ?
ಅದೆಲ್ಲಾ ಸಾಯ್ಲಿ ನಮ್ಮ ಪಂಚಾಯ್ತಿ ಅಧ್ಯಕ್ಷನಿಗೆ ಒಂದು ಸ್ಟೆಪ್ಣಿ ಇಟ್ಟು ಕೊಂಡಿದ್ದಾನೆ. ಕ್ಲಿಂಟನ್‌ ಒಂದು ನಾಲ್ಕು ಜನರನ್ನು ಇಟ್ಕೊಂಡರನು ಹೆಚ್ಚಲ್ಲ.
ಅಮೆರಿಕಾದಿಂದ ಪ್ರಾರಂಭವಾದ ಗಾಸಿಪ್‌ ಕತೆ ಪಂಚಾಯ್ತಿ ಅಧ್ಯಕ್ಷನವರೆಗೆ ಬರುತ್ತದೆ. ಅಲ್ಲಿಂದ ಕತೆಯ ಹಂದರ ಇಂದಿನ ವಿದ್ಯಮಾನಕ್ಕೆ ಬರುತ್ತದೆ.
ನಿನ್ನೆ ಯಕ್ಷಗಾನಕ್ಕೆ ನೀನು ಹೋಗಿದ್ಯಾ? ಹಾಳಬಿದ್ಹೊಗ್ಲಿ ಕಣ್ಣಿದೆಂತ ಸರ್ಕಸ್ಸು. ಚಿಟ್ಟಾಣಿ ಮೀರಸಲೆ ಯಾರಿಗೂ ಸಾಧ್ಯ ಇಲ್ಲ. ಆದರೆ ಸಾತ್ವಿಕ ಪಾತ್ರಕ್ಕೆ ಶಂಭುನೇ ಸೈ. ನಿನಾಸಂ ನಾಟಕ ಇದೆಯಂತೆ? ಯಾರಿಗೂ ಅರ್ಥ ಆಗದ ನಾಟಕಕ್ಕಿಂತ ಹಳ್ಳಿ ನಾಟಕನೇ ಅಡ್ಡಲ್ಲಾ.
ವಿಷಯ ಕೃಷಿಕಡೆ ಹೋರಳುತ್ತದೆ, ಅಲ್ಲಿಂದ ಕಾಲೇಜು ಹೋಗುವ ಹೆಣ್ಣು ಮಕ್ಕಳಿಂದ ಪ್ರಾರಂಭಗೊಂಡು, ಯಾವ ಹುಡುಗರ ಹಿಂದೆ ಅವಳಿದ್ದಾಳೆ ಅಥವಾ ಅವಳ ಹಿಂದೆ ಯಾವ ಜಾತಿಯ ಹುಡುಗ ಇದ್ದಾನೆ ಎನ್ನುವ ಎನ್ಕ್ವಾಯಿರಿ ನಡೆದು, ಸಾಬ್ರ ಪೈಕಿಯವನು ಇದ್ರೆ ಅವನಿಗೆ ನಾಲ್ಕು ತದಕಬೇಕು ಎನ್ನುವಲ್ಲಿಗೆ ಒಂದು ಹಂತ ಮಾತುಕತೆ ನಿಲ್ಲುತ್ತದೆ. ಅಲ್ಲಿಂದ ಒಬ್ಬೊಬ್ಬರೆ ಮನೆಕಡೆ ದಾರಿ ಹಿಡಿಯುತ್ತಾರೆ.
ಮರುದಿನ ಯಾಥಾ ಪ್ರಕಾರ ಸುದ್ದಿ, ಕತೆ, ಗಾಸಿಪ್‌. ಆದರೆ ಈ ಕಟ್ಟೆಯ ಆಕರ್ಷಣೆ ಮಾತ್ರ ಯಾರನ್ನು ಬಿಡುವುದಿಲ್ಲ. ಊರಿನ ಏಲ್ಲಾ ರಾಜಿಕೀಯ ಕ್ಷೇತ್ರ ಇದು. ಕಟ್ಟೆ ಸಂಸ್ಕೃತಿಯನ್ನು ಕಳೆದು ಕೊಂಡರೆ ಹಳ್ಳಿಯ ಸಂಸ್ಕೃತಿಯೇ ಕಳೆದಂತೆ ಎನ್ನಬಹುದು.

FEEDJIT Live Traffic Feed