ನನಗೆ ಯಾಕೆ ಅಂತ ಗೊತ್ತಿಲ್ಲಾ ಯಕ್ಷಗಾನ ಅಂದರೆ ಪಂಚಪ್ರಾಣ. ನನಗಿನ್ನೂ ಮಾತು ಬರದ ಸಮಯದಲ್ಲಿಯೇ ದೊಡ್ಡಪ್ಪನ ಜೊತೆ ಯಕ್ಷಗಾನ ನೋಡಲಿಕ್ಕೆ ಹೋಗುತ್ತಿದ್ದೆ.ಅದರಲ್ಲೂ ಶಾಸ್ತ್ರೀಯವಾಗಿ ಕುಣಿತ ಕಲಿತು ಆಟ ಆಡುವವರಿಗಿಂತ ಹಳ್ಳಿಯಲ್ಲಿಯೇ ಒಂದು ತಿಂಗಳ ಯಕ್ಷಗಾನ ಕಲಿತು ಕುಣಿಯುವ ಹಳ್ಳಿಗರ ಆಟವೆಂದರೆ ಖುಷಿಯೋ ಖುಷಿ.
ಹಳ್ಳಿ ಆಟದಲ್ಲಿ ಆಟದ ಜೊತೆ ಅಪಭ್ರಂಶತೆ ಹೆಚ್ಚು ಕೂಡಿರುವುದೇ ಇದಕ್ಕೆ ಕಾರಣವಾಗಿತ್ತೋ ಏನೋ. ಎಪ್ರಿಲ್, ಮೇ ತಿಂಗಳು ಹಳ್ಳಿ ಆಟಗಳಿಗೆ ಸುಗ್ಗಿ ಕಾಲ. ಸಮಾರಾಧನೆ, ಶನಿಕತೆ, ಊರಿನ ವಾರ್ಷಿಕೋತ್ಸವ ಏನೇ ಆದರೂ ಆಟ ಮಾತ್ರ ಗ್ಯಾರಂಟಿ. ಇದರಲ್ಲಿ ಮುಖ್ಯಪಾತ್ರಧಾರಿಯಾಗಿ ಸ್ವಲ್ಪ ಹೆಸರಿರುವ ಕಲಾವಿದ ಭಾಗವಹಿಸಿದರೇ ಊಳಿದ ಪಾತ್ರಗಳಿಗೆ ಹಳ್ಳಿಯ ಹೈದರೆ ಇರುತ್ತಿದ್ದರು.
ನಮ್ಮೂರ ಹತ್ತಿರ ಹಳಿಯಾಳ ಎನ್ನುವ ಊರಿದೆ. ಆ ಊರಿನಲ್ಲಿ ಬಂಗಾರ್ಯ ನಾಯ್ಕ ಎನ್ನುವ ಹಿರಿಯ ವ್ಯಕ್ತಿಯೊಬ್ಬರಿದ್ದಾರೆ. ಅವರು ಆ ಊರಿನ ಮಾರಿ ದೇವಸ್ಥಾನದ ಪೂಜಾರಿಯು ಹೌದು. ಇವರಿಗೆ ಯಕ್ಷಗಾನದಲ್ಲಿ ಪಾತ್ರ ಮಾಡುವ ಚಟ ಜೋರು. ತಮ್ಮ ಮನೆಯ ಸಮಾರಧಾನೆಯಲ್ಲಿ ಒಂದು ಯಕ್ಷಗಾನ ಏರ್ಪಡಿಸಿ ಅಲ್ಲಿ ತಾವೊಂದು ಮುಖ್ಯ ಪಾತ್ರವನ್ನು ಮಾಡುತ್ತಿದ್ದರು. ಸಾಮಾನ್ಯವಾಗಿ ಪ್ರತಿವರ್ಷವೂ ಗದಾಯುದ್ಧ ಪ್ರಸಂಗವೇ ಇರುತ್ತಿತ್ತು. ಕಾರಣವೆಂದರೆ ಇವರಿಗೆ ಕೌರವನ ಪಾತ್ರ ಮಾಡುವುದರಲ್ಲಿ ಬಹಳ ಆಸಕ್ತಿ. ಪ್ರತಿ ಬಾರಿಯೂ ಇದು ನನ್ನ 101ನೇ ಕೌರವ ಎನ್ನುತ್ತಿದ್ದರು.
ಇವರ ಸಯೋಂಜನೆಯಲ್ಲಿ ಆದ ಯಕ್ಷಗಾನದಲ್ಲಿ ಇವರ ಸಮಪ್ರಾಯದವರೆ ಪಾತ್ರವನ್ನು ಮಾಡಬೇಕಿತ್ತು. ನನ್ನ ದೊಡ್ಡಪ್ಪನಿಗೂ ಒಂದು ಪಾತ್ರ ಗ್ಯಾರಂಟಿ. ಮತ್ತಿಗಾರ ಶಣ್ಣ ಹೆಗಡೆ( ದೊಡ್ಡಪ್ಪ)ರು ಸಂಜಯನ ಪಾತ್ರವನ್ನು, ಹೊಸಗದ್ದೆ ಪಿ.ವಿ ಹೆಗಡೆರು ಭೀಮನ ಪಾತ್ರವನ್ನು ಮಾಡಲೇಬೇಕು. ದಂಟಕಲ್ ಸತೀಶ್ ಹೆಗಡೆಯ ಭಾಗವತಿಕೆ ಇಲ್ಲದಿದ್ದರೆ ಬಂಗಾರ ನಾಯ್ಕರ ಪಾತ್ರ ಹೊರ ಬೀಳುತ್ತಿರಲಿಲ್ಲ.
ಆಟ ಪ್ರಾರಂಭದಿಂದಲೇ ಅಪಭ್ರಂಶತೆಯು ಪ್ರಾರಂಭ. `ಕುರುರಾಯ ಅದನೆಲ್ಲ ಕಂಡು ಸಂತಾಪದಿ ತನ್ನೇಯ ಭಾಗ್ಯವೆನುತ' ಎನ್ನುವ ಪದ್ಯದೊಂದಿಗೆ ಕೌರವನ ಪ್ರವೇಶ ಎಲ್ಲಾ ಯಕ್ಷಗಾನದಲ್ಲೂ ಆಗುತ್ತದೆ. ಆದರೆ ಬಂಗಾರ್ಯ ಅವರ ಕೌರವನ ಪಾತ್ರ ಪ್ರವೇಶವಾಗುವುದೇ `ಕುರುರಾಯ ಅದನೆಲ್ಲ ಕಂಡು ಸಂತೋಷದಿ' ಎಂದು. ಅದಕ್ಕೆ ಕಾರಣವು ಉಂಟು`ತೊಂತ್ತೊಂಬತ್ತು ಜನ ತಮ್ಮಂದಿರನ್ನು ಪಾಮಡವರು ಕೊಂದರು ತನ್ನನ್ನು ಮಾತ್ರ ಕೊಲ್ಲಲಿಕ್ಕೆ ಆಗಲಿಲ್ಲವಲ್ಲ ಎನ್ನು ಸಂತೋಷ. ಪ್ರೇಕ್ಷಕರು ಚಪ್ಪಾಳೆ ಹೊಡೆದಂತೆ ಕೌರವನ ಕುಣಿತವು ಜೋರಾಗಿ ಸಾಗುತ್ತಿತ್ತು. ಕೃಷ್ಣನ ಕಂಡಾಗ ಕೌರವ ಹೇಳುವ ಅರ್ಥವು ಅಷ್ಟೇ ಸೊಗಸು ` ಏನಾ ಕಪಟಿ ನೀನು ವಿದುರನ ಮನೆ ಕಡವಾರದಲೆಲ್ಲ ಹಾಲು ಹರ್ಸಿಯಂತೆ ಹೌದನಾ. ಎಂದು ತನ್ನ ಲೋಕಲ್ ಲಾಂಗ್ವೇಜ್ನಲ್ಲಿಯೇ ಅರ್ತವನ್ನು ಹೇಳುವುದು ವಿಶೇಷ. ನೀರಿನಲ್ಲಿ ಅಡಗಿರುವ ಕೌರವನನ್ನು `ಛೀಂದ್ರಪಕುಲ ಕುನ್ನಿ' ಎಂದು ಬೈದು ಕರೆದಾಗ ನೀರಿಂದ ಮೇಲೆದ್ದು ಬಂದ ಕೌರವ ತಡಮಾಡದೇ `ನಾನು ಛೀಂದ್ರಪಕುಲ ಕುನ್ನಿಯಾದರೆ ನೀನೇನು ಸಿಐಡಿ ನಾಯನಾ' ಎಂದು ಇಂಗ್ಲಿಷ್ ಬಳಕೆ ಮಾಡಿ ಯಕ್ಷಗಾನದ ಕೊಲೆಯಾಗುತ್ತದೆ. ಆದರೆ ಇದು ಹಳ್ಳಿ ಆಟವೆಂಬ ವಿನಾಯತಿ ಇದಕ್ಕಿರುತ್ತದೆ.
ಹಳ್ಳಿ ಆಟದ ಬಗ್ಗೆ ಯಥೇಚ್ಛ ಬರೆಯಬಹುದು. ಮುಂದಿನ ಕಂತಿನಲ್ಲಿ ಮತ್ತಷ್ಟು ಸೊಗಸಾದ ಹಳ್ಳಿಗರ ಅರ್ಥ ವೈಭವದ ಬಗ್ಗೆ ಹೇಳುತ್ತೇನೆ.
7 comments:
ಹ ಹ ಹ
ಕೊಳಗಿ ಕೇಶವ ಹೆಗಡೆ ಈ ನಿನ್ನ ಬಂಗಾರು ನಾಯ್ಕರ ಕಥೆಯನ್ನು ಹೇಳುತ್ತಿದ್ದ. ನಕ್ಕು ನಕ್ಕು ಸುಸ್ತಾಯಿತು. ಚೆನ್ನಾಗಿದೆ ಸಿ.ಐಡಿ ನಾಯಿಯ ಕಥೆ. ಜತೆಗೆ ಹಲವಾರು ತಪ್ಪಕ್ಷರಗಳೂ ನುಸುಳಿವೆ .
ನಾಗರಾಜಣ್ಣ,
ಇದನ್ನ ಓದುವಾಗ ನನಗೆ ಬಂಗಾರ ನಾಯ್ಕರ ಕೆಲವು ಅ(ನ)ರ್ಥ ವೈಖರಿ ಗಳು ಸ್ವಲ್ಪ ಸ್ವಲ್ಪ ನೆನಪಾಗುತ್ತವೆ.
.........................
ವಿದ್ಯುದ್ದ್ದೀಪಂ ಸುಬಂ
ಸ್ತ್ರೀಹತ್ಯಂ ಹೆಣ್ಣು ಪಾಪಂ......ಎಂದು ಮುಂದುವರೆವುತ್ತದೆ.
ಟೇಜು ಅಂದ್ರ್ ಆಂ ಟೇಜು ಎಂತಾ ಟೇಜು ಆಂ...........
ನಂಗೆ ಪದ್ಯ ದಂಟ್ಲೋರೆ (ದಂಟ್ಕಲ್ ಸತೀಶಣ್ಣ)ಆಬೋಕ್ ಆಂ.
ಕೊಳಗಿ ಮಾಣೀ ಸಾಕಾಗ್ವಲ್ದು ಆಂ...........
ಎನ್ನುವುದು ಅವರೇ ಹೇಳುವಂತೆ ಅವರ ಆಟದ ಜನಪ್ರೀಯತೆ ಯ ಗುಟ್ಟು
ನಾನೂ ಇದನ್ನೆಲ್ಲ ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದುಂಟು.
innu ittu bareyuvudu jasti agtana heli nilsidi. mattu apartada matugala jote halliya natakagala bagge bariti enaru nenapadre heli.
bari yee yakshagana nodiddeve...
ಸಾಧ್ಯವಾದರೆ ಒಂದು ಫೋಟೊನೂ ಸೇರಿಸು..
Post a Comment