ಯಾಕೋ ಏನೋ ಇಂಗ್ಲಿಷ್ ಥೀಯಟರ್ ಪದ್ಧತಿ ಬಂದ ಮೇಲೆ ನಮ್ಮ ಹಳ್ಳಿ ನಾಟಕಕ್ಕೆ ಕುತ್ತು ಬಂದಿರಿವುದೆಂತು ಸತ್ಯ. ಉತ್ತರ ಕರ್ನಾಟಕ, ಮತ್ತು ಬೆಂಗಳೂರು, ಚಿರ್ತದುರ್ಗ ಭಾಗದಲ್ಲಿ ಇನ್ನೂ ಪರದೆ ನಾಟಕದ ಸಂಸ್ಕತಿಯಿರುವುದು ಸಂತಸದ ವಿಚಾರ. ಪರದೆ ನಾಟಕಗಳೆಂದರೆ ಚಂದೋಡಿ ಲೀಲಾ ಅವರ ಕಂಪನಿಯಲ್ಲ. ಹಳ್ಳಿಯಲ್ಲಿ ಕಡಿಮೆ ಓದು ಬರಹ ಕಲಿತು, ಕೃಷಿ ಕೆಲಸದಲ್ಲಿ ನಿರತರಾಗಿದ್ದು ಬೇಸಿಗೆಯ ಸಮಯ ಇರುವ ಅವಧಿಯಲ್ಲಿ ಸ್ವಲ್ಪ ಓದಿ, ಆರೆಂಟು ನಾಟಕಗಳನ್ನು ಆಡಿಸಿದ ಅನುಭವವಿರುವ ಬುದ್ಧಿವಂತನೊಬ್ಬ ನಾಟಕದ ನಿರ್ದೇಶಕನಾಗುತ್ತಾನೆ. ಇಂತಹ ನಾಟಕದ ಗಮ್ಮತ್ತೆ ಬೇರೆ.
ಅದರ ಕೆಲವು ಜಲಕ್ ಇಲ್ಲಿದೆ.
ಟ್ರೈಲೆಲ್ಲಾ ಆಗಿ ನಾಟಕ ಪ್ರಾರಂಭವಾಗಿದೆ. ಖಳ ನಾಯಕನ ಪ್ರವೇಶ.ರಂಗದಲ್ಲಿ ಯಾವ ಲೈಟು ಇಲ್ಲಾ. ವಿಕಟ ನಗೆಯನ್ನು ಆಡಿ`ಹ್ಹಾ ಹ್ಹಾ' ಎಂದು ಸಿಗರೇಟನ್ನು ಜೇಜಿಂದ ಸೋಗೆದು ತುಟಿಗೆ ಅಂಟಿಸಿ ಚಕಮುಕಿಯನ್ನು ಹಚ್ಚಲು ಪ್ರಯತ್ನ ಮಾಡುತ್ತಾನೆ ಆಗುವುದಿಲ್ಲ ಯಾಕೆಂದರೆ ಅದರಲ್ಲಿರುವ ಗ್ಯಾಸ್ ಖಾಲಿಯಾಗಿದೆ. ರಂಗದಲ್ಲಿ ಲೈಟ್ ಇಲ್ಲದ ಕಾರಣ ಪ್ರೇಕ್ಷಕನೋರ್ವನಿಗೆ ಖಳನಾಯಕ ಯಾರೆಂದು ತಿಳಿಯುವ ಕುತೂಹಲ. ತನ್ನಹತ್ರ ಇರುವ ಟಾರ್ಚ್‌ನ್ನು ನೇರವಾಗಿ ಅವನಿಗೆ ಬಿಟ್ಟಿದ್ದಾನೆ. ಖಳನಾಯಕ ಯಾರೆಂದು ಗೊತ್ತಾಯಿತು. ತಕ್ಷಣವೇ ತಡಮಾಡದೇ.`ಏ ಗೋಪಾಲಹುಡ್ಗ ಪ್ಯಾಂಟಿನ ಜೀಪ್ ಹಾಕ್ಯುಂಡು ಸಾಯಲೇ' ಎಂದುಕೂಗಿದ. ಖಳನಾಯಕನ ಗಾಂಭೀರ್ಯವನ್ನೆ ನಾಶವಾಗಿ ಹೋಯಿತು.
ಎರಡನೇ ನಾಟಕ, ಪೌರಾಣಿಕ ಕಥಾನಕ. ಭೀಷ್ಮಪರ್ವ. ಭೀಷ್ಮ ಕುಳಿತಿದ್ದಾನೆ. ಹತ್ತಿರ ಬಂದ ಅರ್ಜುನ ಮಾತು ಮಾತಿಗೆ ` ಹೇತಾತಾ...ಹೇತಾತಾ' ಎಂದು ಸಂಭೋದಿಸುತ್ತಾನೆ. ಆಗ ಭೀಷ್ಮನ ಪಾತ್ರದಾರಿ ತಡಪಡ ಮಾಡದೇ` ಬೋಸುಡಿ ಮಗನೇ ಎಷ್ಟ ಸರ್ತಿ ಅನ್ಬಕು. ಹೇತಾತಾ ಹೇತಾತಾ ಅನ್ಬಡ. ಜನ ನಂಗೆ ಮೂಲವ್ಯಾದಿ ಅಂತ ತಿಳ್ಕಬುಟಾರು' ಎಂದ.
ಮತ್ತೊಂದು ಪೌರಾಣಿಕ ನಾಟಕ ನಾರದರ ಆಗಮನ ವಾಗುತ್ತದೆ. ಎದುರಿನ ಪಾತ್ರದಾರಿ ಏನು ಮಾತಾಡಬೇಕೆಂದು ತಿಳಿಯದೆ `ನಾರದರೇ ನಿಮ್ಮ ಹೆಸರೇನು?' ಎಂದು ಕೇಳಿದ ಅದಕ್ಕೆ ನಾರದರು`ವಸ್ತ ನನ್ನ ಹೆಸರು ನಾರದ ಮುನಿ' ಅನ್ನೋದೆ.
ಇದೊಂದು ಸಾಮಾಜಿಕ ನಾಟಕ` ತಾಳಿ ಕಟ್ಟಿದರು ಗಂಡನಲ್ಲ' ಅರ್ಥಾತ್ `ಕಾಲು ಕೆದರಿದ ಹುಲಿ' ನಾಟಕದ ದೃಶ್ಯ ಅಂದುಕೊಳ್ಳಬಹುದು. ನಾಯಕ ತುಂಬ ಭಾವುಕನಾಗಿದ್ದಾನೆ ` ಪ್ರಿಯೆ ಒಡಹುಟ್ಟಿದ ಗಂಡನಿಗೆ ಇಸ ಇಕ್ಕದೆಯಾ?'
ಖಳನಾಯಕ ಹುಡುಗಿಯೊಬ್ಬಳನ್ನು ನೋಡಿ` ಹೇ ಬಾಲೆ, ಎಂದು ನೀ ಕಾಲೇಜಿಗೆ ಕಣ್ಣಿಟ್ಟೇಯೋ ಅಂದೆ ನಿನ್ನ ಮೇಲೆ ಕಾಲಿಟ್ಟೆ' ಅದು`ಎಂದು ಕಾಲೇಜಿಗೆ ಕಾಲಿಟ್ಟೇಯೋ ಅಂದೆ ನಿನ್ನ ಮೇಲೆ ಕಣ್ಣಿಟ್ಟೆ 'ಎನ್ನ ಬೇಕಾಗಿತ್ತು . ಮತ್ತೊಂದು ದೃಶ್ಯದಲ್ಲಿ ` ಪ್ರಿಯೇ ನಾನು ನಿನ್ನ ಸೌಂಧರ್ಯವನ್ನು ಪ್ರಾಕಿನೊಳಗೆ ಕಂಡೆನು' ಅದು `ಪ್ರಯೆ ನಿನ್ನಸೌಂಧರ್ಯವನ್ನು ಪಾರ್ಕಿನೊಳಗೆ ಕಂಡೆನು' ಎನ್ನ ಬೇಕಿತ್ತು.
ಯಾವುದೋ ಓಡಿ ಹೋಗುವ ಸನ್ನಿವೇಶ. ಆಗ ಬರುವ ಭಾವನಾತ್ಮಕ ಡೈಲಾಗ್` ಶಂಕುತಲಾ( ಶಕುಂತಲಾ) ನೀನು ಗರ್ಭಣವೇ. ಇನ್ನು ನಾವು ತಡ ಮಾಡಬಾರದು. ನಿನ್ನ ಬಟ್ಟೆಬರೆಯನ್ನು ಕುಟೆಕ್ಷಿನಲ್ಲಿ (ಸೂಟ್ಕೇಸ್)ನಲ್ಲಿ ತುಂಬಿಬಿಡು. ನಾಳೆ ಮುಂಜಾಲೆ ನಾನು ಹೋರಟು ಹೋಗಾಣ.
ಇಂತಹ ಸಾವಿರಾರು ಅಪಭ್ರಂಶಗಳು ಹಳ್ಳಿ ನಾಟಕದಲ್ಲಿ ಸಿಗುತ್ತದೆ.
ಕೊನೆಯಲ್ಲಿ ನಗರದಲ್ಲಿರುವವರು ಊರಿಗೆ ಹೋಗಿ. ಮಾರ್ಚ್- ಏಪ್ರಿಲ್ ಟೈಮ್ನಲ್ಲೆ ಹೋಗಿ. ಹತ್ತಿರದಲ್ಲೆಲ್ಲಾದರು ನಾಟಕವಾದರೆ ನೋಡಲು ಮರೆಯಬೇಡಿ. ಮರೆತು ನಗೆ ಅಮೃತವನ್ನು ಕಳೆದುಕೊಳ್ಳಬೇಡಿ.
4 comments:
HA HA HA very good. Nice Article. NOw i also want to see of this kind.
ಯಪ್ಪಾ...ನಕ್ಕು ನಕ್ಕೂ ಸಾಕಾಯ್ತು.
ನಾನು ಇವಾಗ ಇರೋದು ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ.
ಟೈಮ್ ಇದೆ ಅಂತ ನಿಮ್ಮ ಬ್ಲಾಗ್ ಓದುತ್ತಾ ಇದ್ದೆ. ಈ ಬರಹ ನೋಡಿ ನಗು ತಡೆಯಲಾಗಲಿಲ್ಲ. ಎಷ್ಟು ಜೋರಾಗಿ ನಕ್ಕೆನೆಂದರೆ, ಅಕ್ಕ ಪಕ್ಕ ಇದ್ದ ಜರ್ಮನ್ ಸಹೋದ್ಯೋಗಿಗಳೆಲ್ಲಾ "ಈ ನನ್ ಮಗಂಗೆ ಏನಾಯ್ತಪ್ಪ" ಅಂತಾ ನೋಡ್ತಾ ಇದ್ರೂ.ಇನ್ನೊಬ್ಲಂತೂ,ಕಣ್ಣೀರು ಒರುಸ್ಕೊಳೋದಕ್ಕೆ ಟಿಶ್ಯೂ ತಂದು ಕೊಟ್ಳು. ಬಹಳ ದಿನ ಆಗಿತ್ತು ಈ ರೀತಿ ನಕ್ಕಿ.
ಮುಂದುವರಿಸಿ ಹೀಗೆಯೇ.
ಕಟ್ಟೆ ಶಂಕ್ರ
http://somari-katte.blogspot.com
baredakke sartakavayitu. thanks. nanna battalikeyalliruva jokegalannu blog mulaka prayogisuve.
Post a Comment