Tuesday, February 1, 2011

ಕಾಲದ ರೀಕಾಲ್

ಏನನ್ನು ಯೋಚನೆ ಮಾಡದೆ ಸುಮ್ಮನೆ ಕುಳಿತುಕೊಳ್ಳಬೇಕು ಅನ್ನಿಸುತ್ತದೆ. ಆದರೆ ಅದು ಸಾಧ್ಯವೆ ಆಗುವುದಿಲ್ಲ. ಇಂಥ ಸಮಯದಲ್ಲಿ ಬದುಕು ರೀಕಾಲ್್ ಆಗುತ್ತದೆ. ಈ ಸಮಯದಲ್ಲಿ ನೆನಪಿಗೆ ಬಂದ ಒಂದು ಘಟನೆಯನ್ನು ನೆನಪಿಸಿಕೊಳ್ಳಬೇಕು ಅನ್ನಿಸುತ್ತಿದೆ.
1996-97ನೇ ಇಸವಿ ನಾನು ಎಸ್ಸೆಎಲ್ಸಿ. 97ರ ಜೂನ್ ಮೂವತ್ತು ಫಲಿತಾಂಶದ ದಿನ. ನಾನು ಪಾಸಾಗುತ್ತೇನೆಂದು ನಾನು ಎಂದು ಎಣಿಸಿರಲಿಲ್ಲ. ಪರೀಕ್ಷೆ ಮುಗಿದ ನಂತರ ನಾನು ಮಾಕ್ಸ೯ ಹಾಕಿಕೊಳ್ಳುತ್ತಿದೆ. ಅದು ಶೇ 90 ರಷ್ಟು ಸರಿ ಇರುತ್ತಿತ್ತು. ನಾನು ಓದುವ ಕ್ರಮವೇ ಹಾಗಿತ್ತು. 50 ಮಾಕ್ಸ೯ ಬಂದರೆ ಸಾಕು ಎಂಬಂತೆ. ಆಗಲೂ ಹಾಗೇ ಅಂಕ ಹಾಕಿಕೊಂಡಿದ್ದೆ. ಇನ್ನೊಂದು ಗಮ್ಮತ್ತಾಯಿತು. ನಾನು 10ನೇ ಇಯತ್ತೆ ಪರೀಕ್ಷೆ ಬರೆದ ನಂತರ ಅಂಕ ಹಾಕಿಕೊಂಡೆ. ನನ್ನ ಪ್ರಕಾರ ಗಣಿತದಲ್ಲಿ 100ಕ್ಕೆ 100 ಫೇಲ್ ಆಗುತ್ತೇನೆ ಎನ್ನುವಷ್ಟು ಅಂಕ ಹಾಕಿಕೊಂಡಿದ್ದೆ. ಸರಿಯಾಗಿ 18 ಅಂಕ ಬಿತ್ತು. ನನಗೆ ಅಪ್ಪುಟು ಬೇಜಾರ ಆಗಲಿಲ್ಲ.
ನಮಗೆ ಪರೀಕ್ಷೆ ನಡೆಯುವ ಸಮಯದಲ್ಲಿ ಗುಡಗೇರಿ ನಾಟಕದ ಕಂಪನಿ ಸಿದ್ದಾಪುರದಲ್ಲಿ ಇತ್ತು. ಗಣಿತ ಪರೀಕ್ಷೆಯ ಹಿಂದಿನ ದಿನ ಬಸ್ ಕಂಡಕ್ಟರ್ ನಾಟಕ ನೋಡಲು ಹೋಗಿದ್ದೆ. ಲೆಕ್ಕ ಹಾಕಿ ನನ್ನ ಹುಂಬತನ ಹೇಗಿತ್ತೆಂದು.
ನಪಾಸ್ ಆದ ನಾಗುಮಾಣಿ ಎಂದು ಊರಲ್ಲಿ ಸುದ್ದಿ ಹರಡಲು ಬಹಳ ಸಮಯ ಹಿಡಿಯಲಿಲ್ಲ. ಮನೆಯಲ್ಲಿ ಮಾತ್ರ ನಾನೆನಾದರು ಬೇಜಾರ ಮಾಡಿಕೊಂಡು ಬಿಟ್ಟೇನು ಎಂದು ಸಾಂತ್ವನ ಹೇಳಿದರು. ಅಕ್ಟೋಬರ್ ಪರೀಕ್ಷೆ ಮಾಡುವುದು ನಿನಗಾಯೇ ಮತ್ತು ನಿನ್ನಂಥವರಿಗೆ ಎಂದರು.
ಕಲಿತದ್ದು ಬಹಳ...
ಫೇಲ್ ಆಗಿದ್ದು ಚೋಲೋ ಆಯಿತು ಅಂಥ ಇನ್ನು ಒಮ್ಮೊಮ್ಮೆ ಅನ್ನಿಸುತ್ತದೆ. ಯಾಕೆಂದ್ರೆ ಪುಸ್ತಕ ಓದುವ ರೂಢಿ ಪ್ರಾರಂಭವಾಯಿತು. ನನಗೆ ಮನೆಯಲ್ಲಿ ದನ ಕಾಯುವ ಕೆಲಸಕ್ಕೆ ವಹಿಸಿದರು.ಗೋಪಾಲಕನ ಕೆಲಸ ಕಡಿಮೆಯೇ...ಕೖಷ್ಣನ ಕೆಲಸವನ್ನು ಮಾಡುವ ಭಾಗ್ಯ ನನ್ನದಾಯಿತು.
ಪತ್ತೇದಾರಿ ಕಾದಂಬರಿ ಓದಲಿಕ್ಕೆ ಪ್ರಾರಂಭಿಸಿದೆ. ಹಾಗೇ ಭೈರಪ್ಪ, ಅನಂತಮೂತಿ೯, ತರಾಸು, ದೇವಡು, ತೇಜಸ್ವಿ ಎಲ್ಲರ ಪುಸ್ತಕವನ್ನು ಓದಿದೆ. ಅಕ್ಚೋಬರ್ನಲ್ಲಿ ಪರೀಕ್ಷೆ ಪಾಸು ಆದೆ...
ಅಂದು ಫೇಲ್ ಆದೆ...ಜೀವನಕ್ಕಾಗಿ ಬೇಕಾದ ಕೆಲಸ ಕಲಿತೆ.. ತೋಟ, ಗದ್ದೆ ಕೆಲಸ ಮಾಡಿ ಬದುಕಬಹುದು ಎಂಬುದನ್ನು ತಿಳಿದೆ. ಸಂಗೀತ, ನಾಟಕ, ಯಕ್ಷಗಾನ, ಸಾಹಿತ್ಯ ಆಸಕ್ತಿ ಬೆಳಸಿಕೊಂಡೆ. ದೊಡ್ಡಪ್ಪನ ಜೊತೆ ಓಡಾಡುತ್ತಿದ್ದೆ..ಅವರ ಬೈಕ್ಗೆ ನಾನು ಸಾರಥಿಯಾಗಿ...ಅಡಿಕೆ ವ್ಯಾಪರದ ಮಾಡುವಾಗಿನ ಸೂಕ್ಷ್ಮತೆ ಕಲೆತೆ...ಅಂತೂ ಒಂದು ವಷ೯ ಕಳೆದೆ ಹೋಯಿತು..ಮುಂದೆ ಕಾಲೇಜ್ ಅಭ್ಯಾಸಕ್ಕೆ ಉಡುಪಿಗೆ ಸೇರಿದೆ...ಅಲ್ಲಿನ ಕತೆ ಮುಂದೆ ಯಾವತ್ತಾದರೂ ಪುರುಸೊತ್ತು ಆದಾಗ ಬರೆಯುವೆ...
ಅಲ್ಲಿನ ಕತೆಗಳು ತುಂಬ ಮಜವಾಗಿದೆ...
ಹಳ್ಳಿಯಲ್ಲಿ ಬೆಳೆದು...ಇಲ್ಲಿನ ಕೆಲವಷ್ಟು ಮುಗ್ಧತೆಯನ್ನು ಹೊತ್ತು ನಗರಕ್ಕೆ ಸೇರಿದಾಗ ಆಗುವ ಅನುಭವ ಅದು...ಸಕತ್ ಹಾಟ್ ಆಗಿಯೂ ಅದಿರುವುದು ವಿಶೇಷ....

FEEDJIT Live Traffic Feed