ಲೇಖಕರು: ಟಿ. ಆರ್. ಶಿವಪ್ರಸಾದ್
ಬೆಲೆ: 120/-
ಪ್ರಥಮ ಮುದ್ರಣ: 2008
ಪ್ರಕಾಶಕರು: ಚಿಂತನಗಂಗಾ ಪ್ರಕಾಶನ
ಲಲಿತ ನಿವಾಸ, ನಂ. 2036/3,
ಮಾಗನೂರು ಬಡಾವಣೆ, ವಿದ್ಯಾನಗರ, ದಾವಣಗೆರೆ
ಕೇರಳ ಸಮುದ್ರ ಅಂಚಿನಲ್ಲರುವ ಅಗದಿ ಪುಟ್ಟ ಗ್ರಾಮ ತುಂಬಾ. ಇಲ್ಲಿರುವುದು ಮೀನುಗಾರರ ಗುಡಿಸಲು. ಅಲ್ಲೊಂದು ಚರ್ಚ್. ರಸ್ತೆ ಸಂಪರ್ಕವಿಲ್ಲ. ಯಾವುದೇ ಮೂಲ ಸೌಕರ್ಯವು ಇಲ್ಲ ಇಂತಹ ಕಡೆ ನಮ್ಮದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಮೊದಲ ಹೆಜ್ಜೆಯನ್ನು ಇಲ್ಲಿಂದಲೆ ಪ್ರಾರಂಭಿಸಿತು.
ಭಾರತೀಯ ಬಾಹ್ಯಾಕಾಶ ವಿಜ್ಞಾನದ ಆವಿಷ್ಕಾರದ ಎಳೆ ಎಳೆಯನ್ನು ಸವಿವರವಾಗಿ ತಿಳಿಸುವ ಅಪರೂಪದ ಪುಸ್ತಕ `ಚಂದ್ರಯಾನ'.
ಟಿವಿ 9 ಸುದ್ದಿ ವಾಹಿನಿಯಲ್ಲಿ ದೆಹಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ಆರ್. ಶಿವಪ್ರಸಾದ್ ಸುಂದರವಾಗಿ ಬರೆದಿರುವ ಪುಸ್ತಕವಿದು. ಈ ಹೊತ್ತಿಗೆಯಲ್ಲಿ 5 ಹಂತಗಳಿವೆ. ಮೊದಲನೆ ಹಂತ, ಸಾಧನೆಯ ಹಾದಿಯಲ್ಲಿ. ಇದರಲ್ಲಿ ಮೊದಲ ಹೆಜ್ಜೆ, ತುಂಬಾ ತೀರದಲ್ಲಿ, ಅಮೆರಿಕಾ- ರಷ್ಯಾ ನಡುವೆ ಶೀತಲ ಸಮರ, ಇತಿಹಾಸ ನಿರ್ಮಿಸಿದ ಇಸ್ರೊ ಎನ್ನುವ ಶೀರ್ಷಿಕೆ ಅಡಿಯಲ್ಲಿ ಲೇಖನಗಳು ಇವೆ.
ಎರಡನೇ ಹಂತ ಎಂದೂ ಮುಗಿಯದ ಅನಂತ ಯಾನ. ಇದರಲ್ಲಿ ದೇಶ-ದೇಶಗಳನ್ನು ಬೆಸೆವ ಚಂದ್ರಯಾನ, ಚಂದ್ರಯಾನದ ಪ್ರಯೋಗ ಹಾಗೂ ಉದ್ದೇಶ, ಬ್ಯಾಲಾಳು ಗ್ರಾಮಕ್ಕೆ ಬಂದ ಭಾಗ್ಯ, ಶ್ರೀರಂಗಪಟ್ಟಣದಿಂದ ಚಂದಿರನವರೆಗೆ, ಭಾರತದೆಡೆಗೆ ಅಮೆರಿಕಾ ಅನುಮಾನ, ಝಂಡಾ ಉಂಚಾ ರಹೇ ಹಮಾರಾ, ಚಂದ್ರಯಾನ- ಭಾಗ 2 ಎನ್ನುವ ಲೇಖನಗಳಿವೆ. ಮೂರನೇ ಹಂತದಲ್ಲಿ ನಿಧಿ- ನೀರು- ನೆರಳು. ಇದರಲ್ಲಿ ಚಂದ್ರನ ಜನ್ಮ ರಹಸ್ಯ, ಚಂದ್ರನಲ್ಲಿ ಅಂತಾದೇನೈತಿ ?, ಚಂದ್ರನ ಮೇಲೆ ಹೀಲಿಯಂ ಎಂಬ ನಿಧಿ !, ಚಂದ್ರನಲ್ಲಿ ನೀರಿದೆಯೇ ?, ಚಂದ್ರನ ಮೇಲೊಂದು ಮನೆಯ ಮಾಡಿ, ಚಂದ್ರ, ಗ್ರಹ, ನಕ್ಷತ್ರಗಳು ಯಾರ ಆಸ್ತಿ ? ಎನ್ನುವ ಮಾಹಿತಿಗಳಿವೆ. ನಾಲ್ಕನೇ ಹಂತ ಬಾಹ್ಯಾಕಾಶವೆಂಬ ನಿತ್ಯ ಕೌತುಕ. ಇಲ್ಲಿ ಹೀಗೊಂದು ಚಂದ್ರನ ಪ್ರೇಮ ಪ್ರಸಂಗ, ಚಂದಿರ ತಂದಾ ಹುಣ್ಣಿಮೆ ರಾತ್ರಿ, ಅಂತರಿಕ್ಷದಲ್ಲಿ ಅಪಾಯಕಾರಿ ಕಸ, ಬಾಹ್ಯಾಕಾಶವೆಂಬ ಆಕ್ಸಿಡೆಂಟ್ ಜೋನ್ ಎಂಬ ಅಧ್ಯಾಗಳು ಬರುತ್ತವೆ. ಐದನೇ ಹಂತ ಎಲ್ಲಗೋ ಪಯಣ, ಯಾವುದೋ ದಾರಿ!. ದಿ ಗ್ರೇಟ್ ಮೂನ್ ಹೋಕ್ಸ್‌ಘ- 1835, ಚಂದ್ರನ ಮೇಲೆ ಮಾನವನ ಮಹಾಮೋಸ !?, ಮನುಕುಲ ಮರೆಯಲಾಗದ ಪ್ರಾಣಿ, ಕೀಟಗಳು, ಎಲ್ಲಿಗೋ ಪಯಣ, ಯಾವುದೋ ದಾರಿ ಎಂಬ ಲೆಖನಗಳ ಸಂಗ್ರಹಗಳು ಬರುತ್ತವೆ.
ಈ ಪುಸ್ತಕದಲ್ಲಿರುವ ಪ್ರತಿಯೊಂದು ಹಂತವು ಅತ್ಯಂತ ಕೌತುಕತೆಯಿಂದ ಲೇಖನಗಳನ್ನು ಓದಿಕೊಂಡು ಹೋಗುತ್ತದೆ. ಶಿವಪ್ರಸಾದ್ ಅವರು ತಮ್ಮ ಲೇಖನದ ಜೊತೆಗೆ ಪತ್ರಕರ್ತರಾದ ವಿನಾಯಕ ಭಟ್, ವೀರಣ್ಣ ಕಮ್ಮಾರ, ರಜನಿ ಎಂ. ಜಿ, ಚೀ.ಜ. ರಾಜೀವ್, ವಿಭವ್ ಬರೆದ ಮಾಹಿತಿಪೂರ್ಣ ಬರೆಹಗಳನ್ನು ಇಟ್ಟಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಲೇಖನಗಳು ಕುತೂಹಲವನ್ನು ಕೆರಳಿಸುತ್ತಾ ಸಾಗುತ್ತದೆ. ನಮ್ಮ ದೇಶದ ವಿಜ್ಞಾನಿಗಳು ದನದ ಕೊಟ್ಟಿಗೆಯನ್ನೇ ಪ್ರಯೋಗಾಲವಾಗಿ ಮಾಡಿಕೊಂಡು ಯಶಸ್ವಿಯಾದ ಕತೆಯನ್ನು ಓದುತ್ತ ಹೋದಂತೆ ನಮಗೆ ನಾವೇ ಹೆಮ್ಮೆ ಪಡುತ್ತಾ ಹೋಗುತ್ತೇವೆ. ಪ್ರತಿಯೊಂದು ಲೇಖನದ ಜೊತೆಗೆ ಆಸಕ್ತಿದಾಯಕ ವಿಷಯಗಳನ್ನು ಟಿಪ್ಸ್ ರೀತಿ ನೀಡುತ್ತಾ ಹೋಗಿರುವುದು ಈ ಹೊತ್ತಿಗೆಯ ವಿಶೇಷ.
ಬಾಹ್ಯಾಕಾಶ ಸಂಶೋಧನೆಗಳಲ್ಲಿ ಬಲಿಷ್ಠ ರಾಷ್ಟ್ರಗಳ ತೀವ್ರ ಪೈಪೋಟಿಯನ್ನು ಎದುರಿಸುತ್ತಾ ನಮ್ಮ ಸಾಧನೆಯನ್ನು ಮಾಡುತ್ತಾ ಹೋದ ಭಾರತೀಯ ವಿಜ್ಞಾನಿಗಳ ಸಾಧನೆಯ ಹಾದಿಯನ್ನು ಈ ಪುಸ್ತಕ ಸ್ಪಷ್ಟಪಡಿಸುತ್ತದೆ. ಶಿವಪ್ರಸಾದ್ ಅವರು `ಚಂದ್ರಯಾನ'ದ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದ ವಿಭಿನ್ನ ಮಜಲುಗಳನ್ನು ಸ್ಪಷ್ಟವಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗರಾಜ ಮತ್ತಿಗಾರ
(ಉದಯಾವಾಣಿ ಪುಸ್ತಕಸಂಪದದಲ್ಲಿ ಪ್ರಕಟಗೊಂಡ ಲೇಖನ)