ಚರ್ಚ್ ಮೇಲಾದ ದಾಳಿಯಿಂದ ಪ್ರಾರಂಭಿಸಿ ಇಂದಿನವರೆಗೆ ಮತಾಂತರದ ಬಗ್ಗೆ ಬಹಳಷ್ಟು ಜನರು ನಾನಾ ನಮುನಿ ಮಾತನಾಡುತ್ತಿದ್ದಾರೆ. ಕಮ್ಯೂನಿಷ್ಟರು ಒಂದು ರೀತಿ ಮಾತನಾಡಿದರೆ, ಬುದಿಜೀವಿಗಳು ಮತ್ತೊಂದು ರೀತಿ ಹಲಬುತ್ತಾರೆ. ಹಿಂದೂಗಳೂ ನಮ್ಮ ಸುದ್ದಿಗೆ ಬಂದರೆ ಯಾರನ್ನೂ ಬೀಡುವುದಿಲ್ಲವೆಂದು ಗುಟುರು ಹಾಕುತ್ತಿದ್ದಾರೆ. ನಿಜವಾಗಿ ಮಾತಡಬೇಕಾದವರು ಬಾಯಿಮುಚ್ಚಿ ಕುಳಿತಿದ್ದಾರೆ.
ಮಾತಾಂತರ ಎನ್ನುವುದು ಒಂದು ಸಮಸ್ಯೆ ಎಂದು ಅನ್ನಿಸಿದರೆ ಅದನ್ನು ಬಗೆಹರಿಸಲು ಹಲವಾರು ರೀತಿಯ ಮಾರ್ಗಗಳೆಂತು ಇವೆ. ಅದರ ಬದಲು ಹೊಡೆದಾಟ ಬಡಿದಾಟ ಯಾಕೆ ಬೇಕು. ಇನ್ನು ಮತಾಂತರ ಗೊಳ್ಳುತ್ತಿರುವವವರು ಯಾರು? ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಬಡವರು. ಅವರಿಗೆ ಬೇಕಾಗಿರುವುದು ಹೊಟ್ಟೆಗೆ ಹಿಟ್ಟೆ ಹೊರತು. ಯಾವ ಮತವು ಬೇಡ, ದೇವರು ಬೇಡ ಎನ್ನುವ ಸ್ಥಿತಿಯಲ್ಲಿರುವವರು. ಇಂತಹ ದುರ್ಬಲರು ಕ್ರಿಶ್ಚನ್‌ರಿಗೆ ದೊರೆತು, ಅವರನ್ನು ಮತಾಂತರ ಗೊಳಿಸಿದರೆ ತಪ್ಪೇನು? ಹಿಂದೂ ಧರ್ಮೀಯರಾದ ನಾವು ಅವರನ್ನು ಮೇಲ್ಮಟ್ಟಕ್ಕೆ ತರಲು ಯಾವ ರೀತಿ ಪ್ರಯತ್ನಿಸಿದ್ದೇವೆ?
ಇನ್ನೂ ನಮ್ಮ ಮಠ ಮಾನ್ಯಗಳೂ ತಮ್ಮ ತಮ್ಮ ಸ್ವಂತ ಕೆಲಸದಲ್ಲಿ ಬ್ಯುಸಿಯಾಗಿವೆ. ಅವರ ಧರ್ಮ ಯಾವುದು ಎಂದು ಮರೆತು ಬಿಟ್ಟಿದ್ದಾರೆ. ಹಾಗೇ ಒಂದೊಂದು ಒಳ ಪಂಗಡಗಳಿಗೂ ಒಂದೊಂದು ಮಠ. ಈ ಸ್ವಾಮಿಗೆ ಹೆಚ್ಚಿಗೆ ಆಸ್ತಿಯಿದೆ ಎಂದು ಆ ಸ್ವಾಮಿಜಿ ಮತ್ತು ಆಸ್ತಿ ಮಾಡುವ ಪೈಪೋಟಿಯಲ್ಲಿಯೇ ಕಾಲಹರಣ ಮಾಡಿದ ಹಾಗೇ ಕಾಣುತ್ತಿದೆ.ಇವರು ಹಿಂದೂಳಿದ ವರ್ಗಗಳ ಅಭಿವೃದಿಯಲ್ಲಿ ತೊಡಗಿದರೆ ಮತಾಂತರ ಪ್ರಕರಣಗಳು ನಿಲ್ಲಬಹುದೇನೋ.
ಅಷ್ಟೇ ಅಲ್ಲದೆ ಬುದಿಯಿದೆ ಎಂದು ತಮ್ಮ ಬಳಗದವರಿಂದದಲೇ ಹೇಳಿಸಿಕೊಳ್ಳುತ್ತಿರುವ ಬುದಿಜೀವಿ ಮಂದಿಗಳು ಸ್ವಲ್ಪ ವಿಸ್ತಾರವಾಗಿ ನೋಡಬೇಕು. ತಮ್ಮವವರಿಗೆ ಏನೇ ಆದರು ಬಾಯಲ್ಲಿ ಕಡಬು ಹಾಕಿಕೊಳ್ಳುವವರಂತೆ ಕುಳಿತು ಕೊಳ್ಳುವ ಇವರು. ದೊಡ್ಡ ಮಾನವತಾವಾದಿಗಳಂತೆ ಆಡುತ್ತಾರೆ. ನಿಜವಾಗಿಯೂ ಜಾತಿ, ಧರ್ಮದ ಬಗ್ಗೆ ಹೆಚ್ಚಿಗೆ ಒಲವು ಇರುವವರು ಇವರೇ. ಹೆಸರಿಗೆ ಮಾತ್ರ ಇವರು ಸಮಾಜವಾಗಳು.
ಇವರದ್ದು ಒಂದು ಸಂಸ್ಥೆಯಿದ್ದರೆ ಅಲ್ಲಿರುವವರು ಇವರ ಬಳಗದವರೆ ಆಗಿರುವುದು ವಿಶೇಷ. ಯಾರಾದರು ಹೀಗೆ ಹೇಳಿಯಾರು ಎಂದು ತೋರ್ಪಡಿಕೆಗೆ ಒಂದೊಂದು ಧರ್ಮೀಯರ ಒಬ್ಬರನ್ನು ದೋಸ್ತಿ ಮಾಡಿಕೊಂಡು ಬಿಡುತ್ತಾರೆ.ಇದರ ಬಗ್ಗೆ ಮಾತನಾಡುತ್ತಾ ಹೋದರೆ ನನ್ನನ್ನು ಆರ್ ಎಸ್‌ಸದ್ ಅವನು ಅಂದ್ಕೊಬಿಡ್ತಾರೆ. ನಾನ್ಯಾವತ್ತು ದೋಗಲೆ ಚಡ್ಡಿಯನ್ನು ಹಾಕಿ `ನಮಸ್ತೆ ಸದಾ ವತ್ಸಲೆ' ಎಂದು ಲಾಟಿಯನ್ನು ತಿರುಗಿಸಿಲ್ಲ. ಆದರೆ ಈ ಕೊಟ್ಟಿ ಸಮಾಜವಾದಿಗಳನ್ನ, ಬುದ್ದಿಜೀವಿ ಎನ್ನುವ ಪಂಗಡದವರನ್ನು ಕಂಡರೆ ರೋಸಿ ಹೋಗುತ್ತದೆ. ನಮ್ಮ ಧರ್ಮದಲ್ಲೂ ಮುಸ್ಲಿಂ, ಕ್ರಿಶ್ಚನ್ ಅಂತೆ ಪತ್ವಾ ಹೊರಡಿಸುವ ಅಥವಾ ತಪ್ಪು ಕಾಣಿಕೆಯನ್ನು ನೀಡುವ ಕಠೋರ ಪದತಿ ಇರಬೇಕಿತ್ತು ಅನ್ನಿಸುತ್ತದೆ.
1 comment:
olle blog writing
keep it up
Post a Comment