Tuesday, July 14, 2009

ಇಶ್ಶಿಶ್ಯೋ ಎನ್ನಿ ಆದರೆ ಖುಷಿ ಪಡಿ

ಹಾಸ್ಯ ಸನ್ನಿ­ವೇ­ಶ­ಗಳು ಎಲ್ಲಿ ಹ್ಯಾಗೆ ಹುಟ್ಟು­ತ್ತವೆ ಎನ್ನಲು ಸಾಧ್ಯ­ವಿಲ್ಲ. ಪ್ರತಿ­ಕ್ಷ­ಣ­ದಲ್ಲೂ ಹಾಸ್ಯ­ವಿ­ರು­ತ್ತದೆ. ದ್ವಿಅರ್ಥ ಮಾತು­ಗಳು ಹಾಗೇ ಬೇಗನೆ ನಗೆ ಬರು­ತ್ತದೆ.
ಹಳ್ಳಿ­ಯಲ್ಲಿ ಗೊತ್ತಿ­ಲ್ಲದೇ ಬಹ­ಳಷ್ಟು ಹಾಸ್ಯ ಘಟ­ನೆ­ಗಳು ನಡೆ­ಯು­ತ್ತದೆ.
ಘಟನೆ ಒಂದು...
ಸನ್ನಿ­ವೇಶ ಶ್ರಾದ್ಧದ ಮನೆ..
ಶ್ರಾದ್ಧದ ಮನೆ­ಯಲ್ಲಿ ಸಂಜೆ ಊಟದ ನಂತರ ಆ ಮನೆಯ ಅತ್ತಿ­ಗೆಯ ಹತ್ತಿರ ಬಂದ ನೆಂಟ `ಅ­ತ್ತಿಗೆ ಒಳ್ಳೆಯ ಬೋಳ­ಕಾಳು ಕಷಾಯ ಮಾಡ್ಕೊಡು. ಎಂತಕೋ ತಲೆ ನೋವು ಬಂಜು' ಎಂದ.
ಅತ್ತಿಗೆ `ಪಾಪ ತಲೆ ನೋವು ಬಂಜು ಹೇಳ್ತ' ಅಂದು ಕೊಳ್ಳುತ್ತಾ ಕಷಾಯ ಮಾಡಿ ಕೊಟ್ಟಳು.
ಆದ್ರೆ ಈ ಬಾವ ಕಷಾಯ ಕುಡಿ­ದ­ವನೇ ಇಸ್ಪೀಟ್‌ ಆಡ­ಲಿಕ್ಕೆ ಮಾಳಿ­ಗೆ­ಯನ್ನು ಎರಿದ. ಅತ್ತಿಗೆ ಮಲ­ಗುವ ಮೊದಲು ಇಸ್ಪೀಟ್‌ ಆಡು­ತ್ತಿ­ರುವ ಕ್ರೀಡಾ­ಪ­ಟ್ಟು­ಗ­ಳಿಗೆ ಚಹಾ ಕೊಡಲು ಹೋದಳು. ಅಲ್ಲಿ ನೋಡು­ತ್ತಾಳೆ ಕಷಾಯ ಕುಡಿದ ಬಾವ ಇಸ್ಪೀಟ್‌ ಆಡು­ತ್ತಿ­ದ್ದಾನೆ. ಆಶ್ಚ­ರ್ಯ­ವಾ­ಯಿತು.. ಸಹ­ಜ­ವಾ­ಗಿಯೇ ಅವಳು ಕೇಳಿ­ದಳು
`ಅರೇ ಬಾವ ಎನ್ನ ಹತ್ತಿರ ಮಲ­ಗಿ­ಕೊ­ಳ್ಳತಿ ಹೇಳಿ­ದ್ಯಲಾ.! ಇಸ್ಪೀಟ್‌ ಆಡ್ತಾ ಇದ್ಯಲಾ ಮಾರಾಯಾ?'

ಘಟನೆ ಎರಡು....
ಮದು­ವೆಯ ಮನೆ ರಾತ್ರಿ ಸಮಯ
...
ನಾಳೇ ಬೆಳ­ಗಾ­ದರೆ ಮದುವೆ . ಸಮಯ ಮೀರಿದೆ. ಎಲ್ಲರು ಮಲು­ಗುವ ಗಡ­ಬಿ­ಡಿ­ಯ­ಲ್ಲಿ­ದ್ದಾರೆ. ನಾಲ್ಕೈದು ಮಂದಿ ಹೆಂಗ­ಸ­ರಿಗೆ ಮಲು­ಗಲು ಜಾಗ ಸಿಕ್ಕುತ್ತಾ ಇಲ್ಲ.
ಸಿಟ್ಟಿ­ನಿಂದ ಗೊಣ­ಗು­ತ್ತಿ­ದ್ದಾರೆ `ಎಲ್ಲಿ ನೋಡಿ­ದರು ಮಲ­ಗುವ ಆಟವೇ ಇಲ್ಲೆ' ಎಂದು. ಹೀಗೆ ಹೇಳುತ್ತಾ ಅಡುಗೆ ಮನೆಗೆ ಹೋದರು. ಅಲ್ಲಿದ್ದ ಅಡುಗೆ ಭಟ್ಟ­ನಿಗೆ ಇವರ ಮಾತು ಕೇಳಿ­ಸಿತು. `ಅ­ವ­ನೆಂದ ಮಲ­ಗುವ ಆಟ ಆದ್ರೆ ಇಲ್ಲಿ ಜಾಗ ಇದ್ದು ಬನ್ನಿ' ಎಂದು.

ಘಟನೆ ಮೂರು..

ಚಲಿ­ಸು­ತ್ತಿ­ರುವ ಬಸ್‌...
ತಾಯಿ, ಮಗು, ಅಪ್ಪ ಮೂರು ಜನ ತಿರು­ಗಾ­ಟಕ್ಕೆ ಹೊರ­ಟಿ­ದ್ದರು. ಮಗು­ವಿಗೆ ಮೂತ್ರ­ಶಂಕೆ ಬಂಧು ತಾಯಿ ಮಗು­ವಿನ ಆರೈ­ಕೆ­ಯ­ಲ್ಲಿ­ದ್ದಳು. ಅದೆ ಸಮ­ಯಕ್ಕೆ ಬಸ್ಸು ಬಂದು ಬಿಟ್ಟಿತು. ಅಪ್ಪ ಮುಂದಿ ಬಾಗಿ­ಲಲ್ಲಿ ಬಸ್ಸು ಹತ್ತಿದ ತಾಯಿ ಮಗು ಹಿಂದಿನ ಬಾಗಿ­ಲಲ್ಲಿ ಹತ್ತಿ­ದರು.
ಹಳ್ಳಿ ಬಸ್ಸು ತುಂಬಾ ರಷ್‌ ಇತ್ತು. ಅಪ್ಪ ಎನ್ನು­ವ­ವನು ಟಿಕೆಟ್‌ ತಗೊಂಡ. ಸ್ವಲ್ಪ ದೂರ ಹೋದ ಮೇಲೆ ಎನೋ ನೆನ­ಪಾಗಿ ದೊಡ್ಡ­ದಾಗಿ ಕೂಗಿದ
`ಏ ಚೆಡ್ಡಿ ಹಾಕಿ­ಯೇನೆ' ಎಂದು ಹೆಂಡ್ತಿ ತಡ ಮಾಡ­ಲಿಲ್ಲ ನಿಮ್ಮ ಎದು­ರಿಗೆ ಹಾಕಿ­ನಲ್ರೋ' ಎಂದಳು
ಬಸ್‌­ನ­ಲ್ಲಿ­ದ್ದ­ವ­ರಿಗೆ ಆಶ್ಚರ್ಯ.. ಎನಿದು ಚೆಡ್ಡಿ ವಿಚಾ­ರ­ವನ್ನು ಹೀಗೆ ಮಾತಾ­ಡು­ತ್ತಾ­ರಲ್ಲ ಎಂದು ಕೊನೆಗೆ ನೋಡಿ­ದರೆ, ಮೂತ್ರ ಮಾಡಿ­ಸಲು ಮಗು­ವನ್ನು ಕರೆದು ಕೊಂಡು ಹೋಗಿ­ದ್ದ­ರಲ್ಲ ಮಗು­ವಿಗೆ ಚೆಡ್ಡಿ ಹಾಕಿ­ದಿಯಾ? ಎಂಬುದು ಅವರ ಮಾತಿನ ಹಿಂದಿ­ರುವ ಭಾವ.
ನಮ್ಮ ಪತ್ರಿಕಾ ವೃತ್ತಿ­ಯಲ್ಲಿ ಇಂತಹ ಹಾಸ್ಯ­ಗಳು ಬಹಳ. ಮೊದಲು ನಾನು ಪತ್ರಿಕಾ ವೃತ್ತಿ­ಯಲ್ಲಿ ಕಂಡ ಕೆಲವು ಜೋಕು­ಗ­ಳನ್ನು ಇಲ್ಲಿ ಬರೆ­ಯು­ತ್ತೇನೆ.
ಘಟನೆ ನಾಲ್ಕು......
ನಾನು ನೋಡಿ­ಕೊ­ಳ್ಳುವ ಜಿಲ್ಲೆಯ ಒಂದು ವರ­ದಿ­ಗಾರ ಒಂದು ಪೋಟೋಕ್ಕೆ ಕ್ಯಾಪ್ಷನ್‌ ಬರೆ­ದಿದ್ದ` ಈ ಊರಿನ ರೈತರ ದ್ರಾಕ್ಷಿ­ಬಿದ್ದು ಕೊಳೆ­ತು­ಹೋ­ಗಿವೆ.
ಘಟನೆ ಐದು....
ಒಂದು ಪತ್ರಿ­ಕೆ­ಯಲ್ಲಿ ಉಪ­ಸಂ­ಪಾ­ದಕ ಕೊಟ್ಟ ಹೆಡ್ಡಿಂಗ್‌ ಹೀಗಿತ್ತು `ಪ­ತಿ­ಯನ್ನು ಕೊಂದ­ವ­ಳಗೆ ಒಂಬತ್ತು ತಿಂಗಳು ಸಜೆ'
ಪೇಜ್‌ ಮಾಡು­ವ­ವ­ನಿಗೆ ಈ ಹೆಡ್ಡಿಂಗ್‌ ಸ್ವಲ್ಪ ಉದ್ದಾ­ಗಿತ್ತು ಅದ­ಕ್ಕಾಗಿ ಅವನು ಹೀಗೆ ಮಾಡಿದ `ಪ­ತಿ­ಯನ್ನು ಕೊಂದ­ವ­ಳಿಗೆ ಒಂಬತ್ತು ತಿಂಗಳು'

ಇಂತಹ ಹಲ­ವಾರು ಬಾಣ­ಗಳ ಸಂಗ್ರಹ ಬತ್ತ­ಳಿ­ಕೆ­ಯ­ಲ್ಲಿದೆ. ಇನ್ನೊಮ್ಮೆ ಸಂದರ್ಭ ಬಂದಾಗ ಹೇಳು­ತ್ತೇನೆ. ಆದ್ರೆ ಬರೆಯಲಿಕ್ಕೆ ಭಯ . ನಿಮ್ಮ ಅಭಿಪ್ರಾಯ ನೋಡಿ ಯಾರು ಬಯ್ಯದಿದ್ದರೆ ಮುಕ್ತವಾಗಿ ಹೇಳುತ್ತೇನೆ.

3 comments:

shreeshum said...

ಹ ಹ ಹ ಸೂಪರ್ ಡ್ಯೂಪರ್ ಜೋಕ್

ಮುಂದಿದ್ದು.....! ಬೇಗ ಬರಲಿ

ಗೌತಮ್ ಹೆಗಡೆ said...

;):):)

hanamantha said...

Good jokes sir

FEEDJIT Live Traffic Feed