Friday, October 31, 2008

ಬಂಗಾರ ನಾಯ್ಕರ ಕೌರ­ವನೂ ಸಿಐಡಿ ನಾಯಿಯೂ

ನನಗೆ ಯಾಕೆ ಅಂತ ಗೊತ್ತಿಲ್ಲಾ ಯಕ್ಷ­ಗಾನ ಅಂದರೆ ಪಂಚ­ಪ್ರಾಣ. ನನ­ಗಿನ್ನೂ ಮಾತು ಬರದ ಸಮ­ಯ­ದ­ಲ್ಲಿಯೇ ದೊಡ್ಡ­ಪ್ಪನ ಜೊತೆ ಯಕ್ಷ­ಗಾನ ನೋಡ­ಲಿಕ್ಕೆ ಹೋಗು­ತ್ತಿದ್ದೆ.ಅ­ದ­ರಲ್ಲೂ ಶಾಸ್ತ್ರೀ­ಯ­ವಾಗಿ ಕುಣಿತ ಕಲಿತು ಆಟ ಆಡು­ವ­ವ­ರಿ­ಗಿಂತ ಹಳ್ಳಿ­ಯ­ಲ್ಲಿಯೇ ಒಂದು ತಿಂಗಳ ಯಕ್ಷ­ಗಾನ ಕಲಿತು ಕುಣಿ­ಯುವ ಹಳ್ಳಿ­ಗರ ಆಟ­ವೆಂ­ದರೆ ಖುಷಿಯೋ ಖುಷಿ.

ಹಳ್ಳಿ ಆಟ­ದಲ್ಲಿ ಆಟದ ಜೊತೆ ಅಪ­ಭ್ರಂ­ಶತೆ ಹೆಚ್ಚು ಕೂಡಿ­ರು­ವುದೇ ಇದಕ್ಕೆ ಕಾರ­ಣ­ವಾ­ಗಿತ್ತೋ ಏನೋ. ಎಪ್ರಿಲ್‌, ಮೇ ತಿಂಗಳು ಹಳ್ಳಿ ಆಟ­ಗ­ಳಿಗೆ ಸುಗ್ಗಿ ಕಾಲ. ಸಮಾ­ರಾ­ಧನೆ, ಶನಿ­ಕತೆ, ಊರಿನ ವಾರ್ಷಿ­ಕೋ­ತ್ಸವ ಏನೇ ಆದರೂ ಆಟ ಮಾತ್ರ ಗ್ಯಾರಂಟಿ. ಇದ­ರಲ್ಲಿ ಮುಖ್ಯ­ಪಾ­ತ್ರ­ಧಾ­ರಿ­ಯಾಗಿ ಸ್ವಲ್ಪ ಹೆಸ­ರಿ­ರುವ ಕಲಾ­ವಿದ ಭಾಗ­ವ­ಹಿ­ಸಿ­ದರೇ ಊಳಿದ ಪಾತ್ರ­ಗ­ಳಿಗೆ ಹಳ್ಳಿಯ ಹೈದರೆ ಇರು­ತ್ತಿ­ದ್ದರು.

ನಮ್ಮೂರ ಹತ್ತಿರ ಹಳಿ­ಯಾಳ ಎನ್ನುವ ಊರಿದೆ. ಆ ಊರಿ­ನಲ್ಲಿ ಬಂಗಾರ್ಯ ನಾಯ್ಕ ಎನ್ನುವ ಹಿರಿಯ ವ್ಯಕ್ತಿ­ಯೊ­ಬ್ಬ­ರಿ­ದ್ದಾರೆ. ಅವರು ಆ ಊರಿನ ಮಾರಿ ದೇವ­ಸ್ಥಾ­ನದ ಪೂಜಾ­ರಿಯು ಹೌದು. ಇವ­ರಿಗೆ ಯಕ್ಷ­ಗಾ­ನ­ದಲ್ಲಿ ಪಾತ್ರ ಮಾಡುವ ಚಟ ಜೋರು. ತಮ್ಮ ಮನೆಯ ಸಮಾ­ರ­ಧಾ­ನೆ­ಯಲ್ಲಿ ಒಂದು ಯಕ್ಷ­ಗಾನ ಏರ್ಪ­ಡಿಸಿ ಅಲ್ಲಿ ತಾವೊಂದು ಮುಖ್ಯ ಪಾತ್ರ­ವನ್ನು ಮಾಡು­ತ್ತಿ­ದ್ದರು. ಸಾಮಾ­ನ್ಯ­ವಾಗಿ ಪ್ರತಿ­ವ­ರ್ಷವೂ ಗದಾ­ಯುದ್ಧ ಪ್ರಸಂ­ಗವೇ ಇರು­ತ್ತಿತ್ತು. ಕಾರ­ಣ­ವೆಂ­ದರೆ ಇವ­ರಿಗೆ ಕೌರ­ವನ ಪಾತ್ರ ಮಾಡು­ವು­ದ­ರಲ್ಲಿ ಬಹಳ ಆಸಕ್ತಿ. ಪ್ರತಿ ಬಾರಿಯೂ ಇದು ನನ್ನ 101ನೇ ಕೌರವ ಎನ್ನು­ತ್ತಿ­ದ್ದರು.

ಇವರ ಸಯೋಂ­ಜ­ನೆ­ಯಲ್ಲಿ ಆದ ಯಕ್ಷ­ಗಾ­ನ­ದಲ್ಲಿ ಇವರ ಸಮ­ಪ್ರಾ­ಯ­ದ­ವರೆ ಪಾತ್ರ­ವನ್ನು ಮಾಡ­ಬೇ­ಕಿತ್ತು. ನನ್ನ ದೊಡ್ಡ­ಪ್ಪ­ನಿಗೂ ಒಂದು ಪಾತ್ರ ಗ್ಯಾರಂಟಿ. ಮತ್ತಿ­ಗಾರ ಶಣ್ಣ ಹೆಗಡೆ( ದೊಡ್ಡಪ್ಪ)ರು ಸಂಜ­ಯನ ಪಾತ್ರ­ವನ್ನು, ಹೊಸ­ಗದ್ದೆ ಪಿ.ವಿ ಹೆಗ­ಡೆರು ಭೀಮನ ಪಾತ್ರ­ವನ್ನು ಮಾಡ­ಲೇ­ಬೇಕು. ದಂಟ­ಕಲ್‌ ಸತೀಶ್‌ ಹೆಗ­ಡೆಯ ಭಾಗ­ವ­ತಿಕೆ ಇಲ್ಲ­ದಿ­ದ್ದರೆ ಬಂಗಾರ ನಾಯ್ಕರ ಪಾತ್ರ ಹೊರ ಬೀಳು­ತ್ತಿ­ರ­ಲಿಲ್ಲ.

ಆಟ ಪ್ರಾರಂ­ಭ­ದಿಂ­ದಲೇ ಅಪ­ಭ್ರಂ­ಶ­ತೆಯು ಪ್ರಾರಂಭ. `ಕು­ರು­ರಾಯ ಅದ­ನೆಲ್ಲ ಕಂಡು ಸಂತಾ­ಪದಿ ತನ್ನೇಯ ಭಾಗ್ಯ­ವೆ­ನುತ' ಎನ್ನುವ ಪದ್ಯ­ದೊಂ­ದಿಗೆ ಕೌರ­ವನ ಪ್ರವೇಶ ಎಲ್ಲಾ ಯಕ್ಷ­ಗಾ­ನ­ದಲ್ಲೂ ಆಗು­ತ್ತದೆ. ಆದರೆ ಬಂಗಾರ್ಯ ಅವರ ಕೌರ­ವನ ಪಾತ್ರ ಪ್ರವೇ­ಶ­ವಾ­ಗು­ವುದೇ `ಕು­ರು­ರಾಯ ಅದ­ನೆಲ್ಲ ಕಂಡು ಸಂತೋ­ಷದಿ' ಎಂದು. ಅದಕ್ಕೆ ಕಾರ­ಣವು ಉಂಟು`ತೊಂ­ತ್ತೊಂ­ಬತ್ತು ಜನ ತಮ್ಮಂ­ದಿ­ರನ್ನು ಪಾಮ­ಡ­ವರು ಕೊಂದರು ತನ್ನನ್ನು ಮಾತ್ರ ಕೊಲ್ಲ­ಲಿಕ್ಕೆ ಆಗ­ಲಿ­ಲ್ಲ­ವಲ್ಲ ಎನ್ನು ಸಂತೋಷ. ಪ್ರೇಕ್ಷ­ಕರು ಚಪ್ಪಾಳೆ ಹೊಡೆ­ದಂತೆ ಕೌರ­ವನ ಕುಣಿ­ತವು ಜೋರಾಗಿ ಸಾಗು­ತ್ತಿತ್ತು. ಕೃಷ್ಣನ ಕಂಡಾಗ ಕೌರವ ಹೇಳುವ ಅರ್ಥವು ಅಷ್ಟೇ ಸೊಗಸು ` ಏನಾ ಕಪಟಿ ನೀನು ವಿದು­ರನ ಮನೆ ಕಡ­ವಾ­ರ­ದ­ಲೆಲ್ಲ ಹಾಲು ಹರ್ಸಿ­ಯಂತೆ ಹೌದನಾ. ಎಂದು ತನ್ನ ಲೋಕಲ್‌ ಲಾಂಗ್ವೇ­ಜ್‌­ನ­ಲ್ಲಿಯೇ ಅರ್ತ­ವನ್ನು ಹೇಳು­ವುದು ವಿಶೇಷ. ನೀರಿ­ನಲ್ಲಿ ಅಡ­ಗಿ­ರುವ ಕೌರ­ವ­ನನ್ನು `ಛೀಂ­ದ್ರ­ಪ­ಕುಲ ಕುನ್ನಿ' ಎಂದು ಬೈದು ಕರೆ­ದಾಗ ನೀರಿಂದ ಮೇಲೆದ್ದು ಬಂದ ಕೌರವ ತಡ­ಮಾ­ಡದೇ `ನಾನು ಛೀಂದ್ರ­ಪ­ಕುಲ ಕುನ್ನಿ­ಯಾ­ದರೆ ನೀನೇನು ಸಿಐಡಿ ನಾಯನಾ' ಎಂದು ಇಂಗ್ಲಿಷ್‌ ಬಳಕೆ ಮಾಡಿ ಯಕ್ಷ­ಗಾ­ನದ ಕೊಲೆ­ಯಾ­ಗು­ತ್ತದೆ. ಆದರೆ ಇದು ಹಳ್ಳಿ ಆಟ­ವೆಂಬ ವಿನಾ­ಯತಿ ಇದ­ಕ್ಕಿ­ರು­ತ್ತದೆ.

ಹಳ್ಳಿ ಆಟದ ಬಗ್ಗೆ ಯಥೇಚ್ಛ ಬರೆ­ಯ­ಬ­ಹುದು. ಮುಂದಿನ ಕಂತಿ­ನಲ್ಲಿ ಮತ್ತಷ್ಟು ಸೊಗ­ಸಾದ ಹಳ್ಳಿ­ಗರ ಅರ್ಥ ವೈಭ­ವದ ಬಗ್ಗೆ ಹೇಳು­ತ್ತೇನೆ.

7 comments:

Unknown said...

ಹ ಹ ಹ
ಕೊಳಗಿ ಕೇಶವ ಹೆಗಡೆ ಈ ನಿನ್ನ ಬಂಗಾರು ನಾಯ್ಕರ ಕಥೆಯನ್ನು ಹೇಳುತ್ತಿದ್ದ. ನಕ್ಕು ನಕ್ಕು ಸುಸ್ತಾಯಿತು. ಚೆನ್ನಾಗಿದೆ ಸಿ.ಐಡಿ ನಾಯಿಯ ಕಥೆ. ಜತೆಗೆ ಹಲವಾರು ತಪ್ಪಕ್ಷರಗಳೂ ನುಸುಳಿವೆ .

ಮೂರ್ತಿ ಹೊಸಬಾಳೆ. said...

ನಾಗರಾಜಣ್ಣ,
ಇದನ್ನ ಓದುವಾಗ ನನಗೆ ಬಂಗಾರ ನಾಯ್ಕರ ಕೆಲವು ಅ(ನ)ರ್ಥ ವೈಖರಿ ಗಳು ಸ್ವಲ್ಪ ಸ್ವಲ್ಪ ನೆನಪಾಗುತ್ತವೆ.
.........................
ವಿದ್ಯುದ್ದ್ದೀಪಂ ಸುಬಂ
ಸ್ತ್ರೀಹತ್ಯಂ ಹೆಣ್ಣು ಪಾಪಂ......ಎಂದು ಮುಂದುವರೆವುತ್ತದೆ.
ಟೇಜು ಅಂದ್ರ್ ಆಂ ಟೇಜು ಎಂತಾ ಟೇಜು ಆಂ...........
ನಂಗೆ ಪದ್ಯ ದಂಟ್ಲೋರೆ (ದಂಟ್ಕಲ್ ಸತೀಶಣ್ಣ)ಆಬೋಕ್ ಆಂ.
ಕೊಳಗಿ ಮಾಣೀ ಸಾಕಾಗ್ವಲ್ದು ಆಂ...........
ಎನ್ನುವುದು ಅವರೇ ಹೇಳುವಂತೆ ಅವರ ಆಟದ ಜನಪ್ರೀಯತೆ ಯ ಗುಟ್ಟು
ನಾನೂ ಇದನ್ನೆಲ್ಲ ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದುಂಟು.

thandacool said...

innu ittu bareyuvudu jasti agtana heli nilsidi. mattu apartada matugala jote halliya natakagala bagge bariti enaru nenapadre heli.

ಮೂರ್ತಿ ಹೊಸಬಾಳೆ. said...
This comment has been removed by the author.
Janani said...

bari yee yakshagana nodiddeve...

Pramod P T said...
This comment has been removed by the author.
Pramod P T said...

ಸಾಧ್ಯವಾದರೆ ಒಂದು ಫೋಟೊನೂ ಸೇರಿಸು..

FEEDJIT Live Traffic Feed