Wednesday, December 28, 2011

ಬೆಂಗಳೂರಿಗೆ ವಿದಾಯ

ಬದಲಾವಣೆಯ ಸೆಳತಕ್ಕೆ ಸಿಗುವವರಲ್ಲಿ ನಾನು ಹೊರತಲ್ಲ. ಈ ಟಿವಿ ಅನ್ನದಾತ, ಉದಯವಾಣಿ, ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಮಾಡಿದ ಕೆಲಸ, ಅಲ್ಲಿನ ಅನುಭವ ಜೀವನವನ್ನು ಕಟ್ಟಿಕೊಡುತ್ತಿದೆ. ಈಗ ರಾಜಧಾನಿ ಬೆಂಗಳೂರಿಗೆ ವಿದಾಯ ಹೇಳುತ್ತಿದ್ದೇನೆ...ಹುಬ್ಬಳ್ಳಿಗೆ ಪಯಣ ಮಾಡುತ್ತಿದ್ದೇನೆ.....
------
ಯಾವ ಊರಿಂದ ಯಾರೇ ಬರಲಿ ತನ್ನ ಒಡಲಿನಲ್ಲಿ ಬಚ್ಚಿಟ್ಟು ಸಾಕುವ ಬೆಂಗಳೂರಿಗೆ ನನ್ನ ಮನಃ ಪೂವ೯ಕ ವಂದನೆ ಮತ್ತು ಧನ್ಯವಾದ.
ಇರಲಿ ಎಂದು ಒಂದು ಮೆಲಕು....
ಬರೆಯುವ ಹವ್ಯಾಸವಿತ್ತು. ಅಚಾನಕ್ಕಾಗಿ ಈ ಟಿವಿಯ ಅನ್ನದಾತ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಬಂತು. ಬಗಲಲ್ಲಿ ಜೋಳಿಗೆ ಬಾಯಲ್ಲಿ ಕವಳ ಹಾಕಿ ಏಳು ಜಿಲ್ಲೆಯ ಬೇಸಾಯ ಮಾಹಿತಿ ಹುಡುಕುವ ಕೆಲಸದಲ್ಲಿ ತೊಡಗಿದೆ. ಎರಡು ವಷ೯, ಅದ್ಭುತ ಅನುಭವ. ಈ ಸಂದಭ೯ದಲ್ಲಿ ರಾಧಣ್ಣ(ಭಡ್ತಿ), ರಾಜಣ್ಣ( ರಾಜಶೇಖರ ಹೆಗಡೆ ಜೋಗಿನ್ಮನೆ), ವೈ.ಗ. ಜಗದೀಶ್ ಪರಿಚಯವಾಯ್ತು, ಸ್ನೇಹ ಬೆಳೆಯಿತು. ಈ ಮೂವರು ಮುಖ್ಯವಾಹಿನಿಗೆ ಬಾ ಎನ್ನುವ ಆಗ್ರಹ ಪೂವ೯ಕ ಸಲಹೆ ನೀಡಿದರು. ಆ ಸಮಯದಲ್ಲಿ ವಿಕೆ ಗೆ ಹೋದರೆ ಕೆಲಸ ಸಿಗುತ್ತಿರಲಿಲ್ಲ. ಕಾರಣ ಎಲ್ಲಿ ಕೆಲಸ ಖಾಲಿ ಇರಲಿಲ್ಲ. ಉದಯವಾಣಿಯಲ್ಲಿ ತಗೊತಾ ಇದ್ದಾರೆ ಒಂದು ಅಜಿ೯ ಹಾಕು ಎನ್ನುವುದಾಗಿ ರಾಜಣ್ಣ ಒತ್ತಾಯಿಸಿದರು. ಹಾಕಿದೆ, ಆಗ ಅಲ್ಲಿ ಡಾ. ಆರ್. ಪೂಣಿ೯ಮಾ ಸಂಪಾದಕರಾಗಿದ್ದರು. ಕೆಲಸ ಕೊಟ್ಟರು. ಅಕ್ಷರಲೋಕ ಹ್ಯಾಗಿರುತ್ತದೆ ಎಂಬ ಕಲ್ಪನೆ ಇಲ್ಲದಿರುವ ನನಗೆ ಕೆಲ್ಸ ಕೊಟ್ಟವರು ಮೇಡಂ. ಕೆಲ್ಸ ಕಲಿಸಿದರು. ಪ್ರಾಥಮಿಕ ಶಾಲೆಯಲ್ಲಿ ಹೇಳಿಕೊಡುವಂತೆ ಹೇಳಿಕೊಟ್ಟರು. ಮೇಡಂ ಅಲ್ಲೊಂದು ವಿಷಯ ಇದೆಯಂತೆ ಎಂದರೆ ಸಾಕು, ಮತ್ಯಾಕೆ ತಡ ಮಾಡ್ತೀರಿ ಹೋಗಿ ಬನ್ನಿ, ಓಡಾಟದ ಖಚು೯ ಕೊಡುತ್ತಿದ್ದರು. ಸಿನೇಮಾ ವರದಿ ಮಾಡಲು ಕಳುಹಿಸಿದರು. ಬರೆದ ಕಾಪಿ ತಿದ್ದಿದರು. ಎಲ್ಲ ತರಹದ ಕೆಲಸ ಕಲಿಸಿದರು. ಅಲ್ಲಿ ಮುಖ್ಯಸ್ಥರಾಗಿದ್ದ ಪ್ರಭುದೇವ್ ಶಾಸ್ತ್ರೀಮಠ, ಇಸ್ಮಾಯಲ್, ರಾಜಣ್ಣ, ಸಹೋದ್ಯೋಗಿಗಳಾದ ಮಲ್ಲಿಕಾಚರಣ್ ವಾಡಿ, ಗುರುಮೂತಿ೯, ರುದ್ರಣ್ಣ, ಕಂಕ ಮೂತಿ೯, ಎಚ್. ಮೂತಿ೯, ಪರಮೇಶ್ವರ್ ಗುಂಡ್ಕಲ್, ಸುರೇಶ್.ಕೆ, ರಾಜಶೇಖರಮೂತಿ೯, ಧರಣೀಶ್ ಬೂಕನಕೆರೆ, ವೀರೇಶ್ , ಮಣಿಪಾಲದಲ್ಲಿದ್ದ (ಈಗ ಹುಬ್ಬಳ್ಳಿ) ವೆಂಕಟೇಶ್ ಪ್ರಭು.....ತುಂಬಾ ಜನರಿದ್ದಾರೆ ಇವರೆಲ್ಲರಿಂದಲೂ ಕಲಿತೆ. ನನಗೆ ಗೊತ್ತಿಲ್ಲದ್ದನ್ನು ಕೇಳಿದೆ ಹೇಳಿಕೊಟ್ಟರು. ಉದಯವಾಣಿ ನನ್ನ ಪಾಲಿಗೆ ಒಂದು ರೀತಿ ಪ್ರಾಥಮಿಕ ಶಾಲೆ ತರಹ ಆಗಿತ್ತು. ಇಲ್ಲಿನ ಪ್ರತಿಯೊಂದು ವಿಭಾಗದವರು ಉತ್ತಮ ದೋಸ್ತಿಗಳಾಗಿದ್ದರು.
ಯಾವುದೋ ಸಂದಭ೯ ಬದಲಾವಣೆಗೆ ಅವಕಾಶ ಬಂತು ಕನ್ನಡಪ್ರಭಕ್ಕೆ ಸೇರಿದೆ. ಕನ್ನಡಪ್ರಭದಿಂದ ನಾನು ತುಂಬಾ ಕಲಿತೆ. ತುಂಬಾ ಬರೆದೆ. ಅಂದಿನ ಸಂಪಾದಕ ಶಿವಸುಬ್ರಹ್ಮಣ್ಯ ನನಗೆ ತುಂಬಾ ಅವಕಾಶ ಕಲ್ಪಸಿಕೊಟ್ಟರು. ಬರೆಸಿದರು..ನಾನು ಬರೆದೆ. ಮುಖಬೆಲೆ ತಂದು ಕೊಟ್ಟರು. ಎಲ್ಲಾ ತರಹದ ಕೆಲಸವನ್ನು ಮಾಡಿಸಿದರು. ಗೆಳೆಯರಾದ ರಾಮಚಂದ್ರ, ಅಜಿತ್, ಸದಾಶಿವ, ಸಿ.ಜೆ ಸೋಮಶೇಖರ್ ಸಹಕರಿಸಿದರು. ನನ್ನ ಬರವಣಿಗೆಯನ್ನು ತಿದ್ದಿದ್ದರು. ಇದು ಒಂದು ಕಡೆಯಾದರೆ ಮ್ಯಾಗಜಿನ್ ವಿಭಾಗದಲ್ಲಿದ್ದ ಡಾ. ವೆಂಕಟೇಶ್ ರಾವ್, ಚೇತನಾ ತೀಥ೯ಹಳ್ಳಿ ಅವರು ಬರಿ ಎಂದು ಬರೆಸಿದರು. ಕನ್ನಡಪ್ರಭದಲ್ಲಿ ಮತ್ತೊಮ್ಮೆ ಬದಲಾವಣೆಯಾಯಿತು. ವಿಶ್ವೇಶ್ವರ ಭಟ್ಟರು ಪ್ರಧಾನ ಸಂಪಾದಕರಾದರು. ನನ್ನ ಬರವಣಿಗೆ ಮೊದಲಿನಂತೆ ಸಾಗಿತು. ತ್ಯಾಗರಾಜ್, ರಾಧಾಕೖಷ್ಣ ಭಡ್ತಿ ನನ್ನ ಬರವಣಿಗೆಗೆ ಸಹಕರಿಸಿದರು. ಕೖಷಿಪ್ರಭದಲ್ಲಿ ನನಗೊಂದು ಅಂಕಣ ಬರೆಯಲು ಅವಕಾಶ ನೀಡಿದರು.
ಕನ್ನಡಪ್ರಭ ನನಗೆ ತುಂಬ ಕೆಲಸ ಕಲಿಸಿತು..ಇಲ್ಲಿ ತುಂಬಾ ಜನ ಗೆಳೆಯರಾದರು.ಹಿತೈಷಿಗಳಾದರು, ಸಲಹೆ ನೀಡಿದರು, ಬೈದರು, ಹೀಗಲ್ಲ ಹಾಗೇ ಎಂದರು, ಬೆನ್ನು ತಟ್ಟದರು..ಡಾ. ವಾಸುದೇವ ಶೆಟ್ಟಿ, ನಟರಾಜ್, ರೇಣುಕಾಪ್ರಸಾದ್ ಹಾಡ್ಯ,ರವಿಮಾಳೇನಳ್ಳಿ, ಗಿರೀಶ್ ಬಾಬು, ವಿಜಯಮಲಗಿಹಾಳ, ಸುಧಾಕರ್ ದಬೆ೯, ಸಂತೋಷ್ ಸಸಿಹಿತ್ಲು, ಪ್ರವೀಣ್, ಎಸ್. ವಿ. ಪದ್ಮನಾಭ, ಗಣೇಶಪ್ರಸಾದ್, ಬ್ರಹ್ಮಾನಂದ, ಕೀತಿ೯ಕೋಲ್ಗಾರ್, ಸಾಅದೀಯಾ, ಚಿತ್ರ, ಅನುರಾಧಾ, ಮೂಲಿಮನಿ, ಡಿ. ಎಂ. ಭಟ್, ಶಿವಮಾದು, ದೇವರಾಜ್, ಪ್ರಕಾಶ್, ಕೆ.ವಿ. ಪ್ರಭಾಕರ್, ರಾಘವೇಂದ್ರಭಟ್, ಪ್ರತಾಪ್, ಚೈತನ್ಯ....ತುಂಬ ಜನರಿದ್ದಾರೆ. ಎಲ್ಲರೂ ಪ್ರೀತಿಯಿಂದ ಮಾತಾಡಿದರು ಪ್ರೀತಿಯಿಂದ ಕೆಲಸ ಕಲಿಸಿದರು...
ಸೋಮಶೇಖರ್ ಪಡುಕರೆ, ಗಣಪತಿ ಅಗ್ನಿಹೋತ್ರಿ, ಉಗಮ, ಅಂಶಿ ಪ್ರಸನ್ನಕುಮಾರ್ ನನ್ನ ಲೇಖನ ಬಂದಾಗ ಮೆಚ್ಚಿ ಬೆನ್ನು ತಟ್ಟಿದರು.
ಬೆಂಗಳೂರು ಬದುಕಿನಲ್ಲಿ ಬಂದ ಎಲ್ಲರು ಕೊನೆಯವರೆಗೂ ನನ್ನೊಳಗೆ ಇರುತ್ತಾರೆ. ಉದಯವಾಣಿ, ಕನ್ನಡಪ್ರಭದ ಎಲ್ಲ ಸಿಬ್ಬಂದಿಗೂ ನಾನು ವಂದನೆಗಳು. ಪ್ರೀತಿ ಇರಲಿ.

3 comments:

SWARUPANANDA M KOTTUR said...

ನಿಮ್ಮ ಸಾಧನೆಗೆ ಊರುಗೋಲಾದವರೆನ್ನಾಲ್ಲಾ ಈ ಸಮಯದಲ್ಲಿ ನೆನೆಯುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಸಾರ್, ಬದಲಾವಣೆಯ ಗಾಳಿಗೆ ಸಿಕ್ಕರೂ ನಿಮ್ಮ ಮೂಲವನ್ನು ಮರೆಯದೇ ಮೆಲಕು ಹಾಕಿದ್ದರಿಂದಲೇ ನೀವು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದೀರಿ. ನಿಮ್ಮ ಮುಂದಿನ ಹೆಜ್ಜೆಯಲ್ಲಿಯೂ ಇದೇ ರೀತಿಯ ಯಶಸ್ಸಿನ ಪಯಣ ಅನಂತವಾಗಿ ಸಾಗಲಿ ಎಂಬ ಶುಭ ಹಾರೈಕೆಗಳು. ಆಲ್ ದಿ ಬೆಸ್ಟ್ ಸರ್.

ಯಿಂದ ಸ್ವರೂಪಾನಂದ.ಎಂ.ಕೊಟ್ಟೂರು

Ittigecement said...

ನಾಗರಾಜ್...

ಏರಿದ ಮೆಟ್ಟಿಲುಗಳನ್ನು ನೆನಪಿಸಿಕೊಳ್ಳುವದು ಒಳ್ಳೆಯ ಸಂಪ್ರಾದಾಯ..
ಇನ್ನೂ ಮೇಲಕ್ಕೆ ಏರಿ..

ನಮ್ಮೆಲ್ಲರ ಆಶಯ,,..
ಶುಭ ಹಾರೈಕೆಗಳು..

Hosmane Muthu said...

Hattida eniyanne odeyuva janare sutta kaanuva yee hottinalli neevu swalpa beereyaagiye kandiri. Nimma olletana baalike barali.

FEEDJIT Live Traffic Feed