Wednesday, November 4, 2009

ವೈವಾ­ಹಿಕ ಅಂಕ­ಣವು.. ಅವಿ­ವಾ­ಹಿತ ಹುಡು­ಗರು

ನನಗೆ ಇತ್ತೀ­ಚೆಗೆ ವೈವಾ­ಹಿಕ ಅಂಕಣ ನೋಡು­ವುದು ಒಂದು ಹವ್ಯಾ­ಸ­ವಾ­ಗಿದೆ. ಅಲ್ಲಲ್ಲ ಚಟವೇ ಆಗಿದೆ. ನೀವು ಉಹಿ­ಸ­ಬ­ಹುದು ಇವ­ನೇನು ಮದುವೆ ಗಂಡೇ? ನಿಜ, ಮದುವೆ ಯಾಗುವ ಹೊಸ್ತಿ­ಲ­ಲ್ಲಿ­ರುವ ಹಲ­ವಾರು ಗಂಡು ಮಕ್ಕ­ಳಲ್ಲಿ ನಾನೂ ಒಬ್ಬ. ಮುಂಚೂ­ಣಿ­ಯಲ್ಲಿ ಇಲ್ಲ­ದಿ­ದ್ದರೂ, ಸರದಿ ಸಾಲಿ­ನಲ್ಲಿ ನಿಂತಿ­ದ್ದೇನೆ. ಆದರೆ ಹೆಣ್ಣು ಸಿಗು­ವು­ದೆಂ­ದರೆ ಮಾಯಾ­ಜಿಂಕೆ ಹಿಡಿದ ಹಾಗೆ ಎನ್ನು­ವುದು ಮದು­ವೆ­ಯಾ­ಗ­ಬೇ­ಕೆಂ­ದಿ­ರುವ ಬಹು­ತೇಕ ಗಂಡು ಮಕ್ಕಳ ಅನು­ಭವ.
ಹಿಂದೊಂದು ಕಾಲ ಇತ್ತಂತೆ, ಯಾವ ಗಂಡು ಎಷ್ಟು ಮನೆಯ ಸಿರಾ (ರವೆ­ಯಿಂದ ಮಾಡುವ ಸ್ವೀಟ್‌) ತಿನ್ನು­ತ್ತಾ­ನೆಂದು. ಒಂದು ಗಂಡಗೆ ಐವತ್ತು ಜಾತ­ಕ­ದ­ವ­ರೆಗೆ ಬರು­ತ್ತಿ­ತ್ತಂತೆ. ಅಶ್ವ­ಮೇಧ ಯಾಗದ ಕುದು­ರೆಯ ಬೆನ್ನು ಹತ್ತಿ ಹೊರಟ ಯೋಧ­ನಂತೆ ಒಂದು ದಿನಕ್ಕೆ ಹತ್ತು ಹೆಣ್ಣು ಮಕ್ಕ­ಳನ್ನು ನೋಡಿ, ಹತ್ತು ಮನೆಯ ಸಿರಾ ತಿಂದು ಬರು­ತ್ತಿ­ದ್ದ­ರಂತೆ. ಆದರೆ ಕಾಲ ಬದ­ಲಾ­ಗಿದೆ. ಎಷ್ಟೋ ಜನ ಗಂಡು ಮಕ್ಕಳು ಹೆಣ್ಣು ಸಿಗದೇ ಅನಿ­ವಾ­ರ್ಯದ ಬ್ರಹ್ಮ­ಚರ್ಯ ಪಾಲಿ­ಸಿ­ದ್ದಾರೆ. ಮದುವೆ ಎಂದರೆ ಆಸೆ­ಯಾ­ದರೂ ಬೆಚ್ಚಿ­ಬೀ­ಳುವ ಸ್ಥಿತಿಗೆ ತಲು­ಪಿ­ದ್ದಾರೆ.
ನಾನೂ ಇವರ ಸಾಲಿಗೆ ಸೇರು­ವುದು ಬೇಡ ಎಂದು ಎಲ್ಲಿ­ಯಾ­ದರೂ ನನಗೆ ಹೊಂದಾ­ಣಿ­ಕೆ­ಯಾ­ಗುವ ಅಲ್ಲಲ್ಲ ಯಾವು­ದಾ­ದರೂ ಹೆಣ್ಣಿಗೆ ನಾನು ಹೊಂದಾ­ಣಿಕೆ ಯಾಗ­ಬ­ಹು­ದೆಂದು ಪ್ರತಿ ಪತ್ರಿ­ಕೆಯ ವೈವಾ­ಹಿಕ ಅಂಕಣ ನೋಡು­ತ್ತೇನೆ. ನೋಡುತ್ತಾ ಇದ್ದೇನೆ. ನನ್ನಂತೆ ಬಹಳ ಹುಡು­ಗರು ವೈವಾ­ಹಿಕ ಅಂಕಣ ನೋಡು­ತ್ತಾಂತೆ. ಕೆಲಸ ಹುಡು­ಕುವ ಮಂದಿ ಕ್ಲಾಸಿ­ಫೈಡ್‌ ನೋಡಿ­ದಂತೆ.
ಅದ­ರಲ್ಲೂ ಹವ್ಯಕ ಹುಡು­ಗರು ಒಂದು ಪತ್ರಿ­ಕೆ­ಯನ್ನು ಬಿಡದೆ ವೈವಾ­ಹಿಕ ಅಂಕಣ ನೋಡು­ತ್ತಾ­ರಂತೆ. `ಹು' ಅಥವಾ `ಕೂ' ಎಂದರೆ ಹುಡುಗಿ/ ಕೂಸು ಎಂದು ನೇರ ಜಾತಕ ಕೇಳಿ, ವಿಳಾಸ ವಿಚಾ­ರಿ­ಸುವ ಹಪ­ಹ­ಪಿ­ಕೆಗೆ ಪಾಪ ಮಾಣಿ­ಗಳು ತಲು­ಪಿ­ದ್ದಾರೆ. ಅದಕ್ಕೆ ಕಾರ­ಣವೂ ಇದೆ. ಹವ್ಯ­ಕ­ರಲ್ಲಿ ಹೆಣ್ಣು ಮಕ್ಕಳ ತೀವ್ರ ಕೊರತೆ. ಮರು­ಭೂ­ಮಿ­ಯಲ್ಲಿ ನೀರಿನ ಕೊರತೆ ಇದ್ದಂತೆ. ಅದಕ್ಕೆ ಸಿಕ್ಕಿ­ದನ್ನು ಬಿಡ­ಬಾ­ರದು ಎಂಬ ದೂ(ದು)ರಾಲೋ­ಚನೆ.
ಹಾಗಂತ ಹೆಣ್ಣು ಮಕ್ಕಳು ಇಲ್ಲ ಎಂದಲ್ಲ. ಇದ್ದ ಹೆಣ್ಣು ಮಕ್ಕಳ ಕೊರ­ತೆಯ ಸೃಷ್ಠಿ­ಯಾ­ಗಿದೆ. ಅರ್ಥ­ಶಾ­ಸ್ತ್ರದ ಪ್ರಕಾರ ಡಿಮ್ಯಾಂಡ್‌ ಹೆಚ್ಚು ಮಾಡ­ಲಿಕ್ಕೆ ವಸ್ತು­ಗ­ಳನ್ನು ಉದ್ದೇಶ ಪೂರ್ವ­ಕ­ವಾಗಿ ತಡೆ ಹಿಡಿ­ಯು­ವಂತೆ ಹವ್ಯ­ಕ­ರಲ್ಲೂ ಉದ್ದೇಶ ಪೂರ್ವ­ಕ­ವಾಗಿ ಹೆಣ್ಣು ಮಕ್ಕಳ ಕೊರ­ತೆ­ಯಾ­ಗಿದೆ.
ಈಗ ವೈವಾ­ಹಿಕ ಅಂಕಣ ವಿಚಾ­ರಕ್ಕೆ ಬರುವ...
ಬಿ.ಇ ಓದಿ­ರುವ ಸುಸಂ­ಸ್ಕೃತ ಕನ್ಯೆಗೆ ಬಿ. ಇ, ಎಂಟೆಕ್‌ ಮಾಡಿ­ರುವ ಯೋಗ್ಯ ವರ ಬೇಕಾ­ಗಿ­ದ್ದಾರೆ. ಬೆಂಗ­ಳೂ­ರಿ­ನಲ್ಲಿ ಸ್ವಂತ ಮನೆ, ಕೈತುಂಬ ಸಂಬಳ, ವಯಸ್ಸು 28 ಮೀರಿ­ರ­ಬಾ­ರದು. ಆಸ­ಕ್ತರು 94482.... ಸಂಪ­ರ್ಕ­ಸ­ಬ­ಹುದು.
ಅಲ್ಲ ಕಣ್ರಿ, 28 ನೇ ವರ್ಷಕ್ಕೆ ಎಲ್ಲ­ವನ್ನು ಸಂಪಾ­ದನೆ ಮಾಡಿ­ರುವ ಯುವಕ ಬೇಕು ಎಂದರೆ ಹ್ಯಾಗೆ ಸಾಧ್ಯ. ಯುವ­ಕ­ರಿ­ರು­ವಾ­ಗಲೇ ಸುಖದ ಸುಪ್ಪ­ತ್ತಿ­ಗೆ­ಯ­ಲ್ಲಿ­ದ್ದರೆ ಜೀವನ ಎಂಬುದು ಅಂತ್ಯ ಅಲ್ವೇನ್ರಿ? ಇರಲಿ ಬಿಡಿ. ಇದ­ಕ್ಕಿಂತ ಮಜಾ­ವೆಂ­ದರೆ ಹಳ್ಳಿ­ಯಿಂದ ಬಂದ ಒಂದು ವೈವಾ­ಹಿಕ ಮಾಹಿತಿ...ಪಿಯು­ಸಿ­ಯನ್ನು ಮೊದಲ ದರ್ಜೆ­ಯಲ್ಲಿ ಪಾಸಾದ ಕನ್ಯೆಗೆ ಯೋಗ್ಯ ವರ­ಬೇ­ಕಾ­ಗಿ­ದ್ದಾರೆ. ಮುಂದೆ ಕಲಿ­ಯುವ ಆಸಕ್ತಿ ಹೊಂದಿ­ರುವ ಈ ಕನ್ಯೆ ಮುಂದೆ ಕಲಿ­ಸುವ ಮನ­ಸ್ಸು­ಳ್ಳ­ವರು ಬೇಕು. ವರ­ನಿಗೆ ಉತ್ತಮ ಆದಾ­ಯ­ವಿ­ರ­ಬೇಕು. ಬೆಂಗ­ಳೂ­ರಿ­ನಲ್ಲಿ ಸ್ವಂತ ಮನೆ.... ಹೀಗೆ ಸಾಗು­ತ್ತದೆ ಜಾಹೀ­ರಾತು. ಎಲ್ಲ ಹೆಣ್ಣು ಮಕ್ಕ­ಳಿಗೂ ಇಂತ­ಹದೇ ವರ ಬೇಕೆಂ­ದಾರೆ ನಮ್ಮಂ­ತ­ವರ ಕತೆ ಗೋವಿಂದಾ....ಗೋವಿಂದಾ.
ಇದು ಹೆಣ್ಣು­ಮ­ಕ್ಕಳ ಒತ್ತಾ­ಯ­ವಲ್ಲ. ಅವರ ಪಾಲ­ಕ­ರಿಗೆ ಬೆಂಗ­ಳೂ­ರಿನ ಹುಚ್ಚು ಹಿಡಿದು ಬಿಟ್ಟಿದೆ. ಎಂಬ ಮಾತು ಕೇಳಿ ಬರು­ತ್ತಿದೆ. ಅಲ್ರಿ ಎಲ್ಲರೂ ಬೆಂಗ­ಳೂರು, ವಿದೇಶ ಅಂತಿದ್ರೆ ಹಳ್ಳಿ­ಗಳು ಮುದು­ಕರ ಸಂತೆ­ಯಾ­ಗು­ವು­ದ­ರಲ್ಲಿ ಸಂದೇ­ಹ­ವಿಲ್ಲ. ಇದೇ ಜಾಹೀ­ರಾತು ನೀಡಿದ ಪಾಲ­ಕರು ಕೊನೆ­ಗಾ­ಲ­ದಲ್ಲಿ ಹತ್ತಿ­ರ­ದಲ್ಲಿ ಯಾರೂ ಇಲ್ಲದೇ ಅನಾ­ಥ­ರಾ­ಗು­ವು­ದ­ರಲ್ಲಿ ಸಂದೇ­ಹವೆ ಇಲ್ಲ.
ಗಂಡು ಮಕ್ಕಳೋ ಇದೆ ಅಪ್ಪ ಅಮ್ಮನ ಒತ್ತಾ­ಯಕ್ಕೆ ನಗರ ಸೇರಿ­ರು­ತ್ತಾರೆ. ಬೆಂಗ­ಳೂ­ರಿ­ನಲ್ಲಿ ಇರುವ ಕಾರ­ಣಕ್ಕೆ ಒಂದು ಮದು­ವೆ­ಯಾ­ದರೂ ಆಶ್ಚ­ರ್ಯ­ವಿಲ್ಲ. ಮದುವೆ ಆದ ಮೇಲೆ ಮನೆ ಕಡೆ ಮುಖ ಹಾಕುವ ಮನಸ್ಸು ಇಲ್ಲದೆ ಇಲ್ಲೆ ಸೆಟ್ಲಾಗಿ ಬಿಡು­ತ್ತಾರೆ. ಮದು­ವೆಯ ಕಷ್ಟ ಏನೆಲ್ಲಾ ಬಾನ­ಗಡಿ ಮಾಡು­ತ್ತದೆ. ಮುಂದೊಂದು ದಿನ `ನಮ್ಮ ಮನೆ' ಎಂಬುದು ಇಲ್ಲದೆ ಪರಿ­ತ­ಪಿಸ ಬೇಕಾ­ಬ­ಹುದು ಅನ್ನಿ­ಸು­ತ್ತಿದೆ.
ಇಲ್ಲಿ ಯಾರ ತಪ್ಪು ಎಂದು ಹೇಳ­ಲಿಕ್ಕೆ ಆಗು­ವು­ದಿಲ್ಲ. ತಮ್ಮ ಹೆಣ್ಣು ಮಕ್ಕಳು ಸುಖ­ವಾ­ಗಿ­ರಲಿ ಎಂಬುದು ಹೆಣ್ಣು ಮಕ್ಕಳ ತಂದೆ ತಾಯಿ­ಗಳ ಆಶ­ಯ­ವಾ­ದರೆ, ತಮ್ಮ ಗಂಡು ಮಕ್ಕ­ಳಿಗೆ ಮದು­ವೆ­ಯಾಗಿ ವಂಶ ವೃದ್ಧಿ­ಯಾ­ಗಲಿ ಎಂಬುದು ಗಂಡು ಮಕ್ಕಳ ತಂದೆ ತಾಯಿ­ಗಳ ಆಶಯ. ಅಪ್ಪ- ಅಮ್ಮಂ­ದಿರ ಆಶ­ಯಕ್ಕೆ ವಿರು­ದ್ಧ­ವಾ­ಗ­ಬಾ­ರ­ದೆಂದು ಸಹಿ­ಸು­ತ್ತಿ­ರುವ ಸ್ಥಿತಿ ಮಕ್ಕ­ಳ­ದಾ­ಗಿದೆ.

8 comments:

ಮಾವೆಂಸ said...

ಇದೂ ಒಂದು ರೀತಿಯಲ್ಲಿ ‘ವಧು ಬೇಕು’ ಎಂಬ ಜಾಹೀರಾತಿನಂತಿದೆಯಲ್ಲ......

Mruthyu said...

ಪಾಲಕರಿಗೆ ಬೆಂಗಳೂರಿನ ಹುಚ್ಚೋ ಅಥವಾ ಬಾಲಿಕೆಯರಿಗೋ ಹೇಳುವುದು ಕಷ್ಟ. ಬಿ.ಎ. ಓದಿದ್ದ ತಮ್ಮ ಮಗಳನ್ನು ಕೇಳಿಬಂದ ಎಲ್ಲ ಗ್ರಾಮೀಣಸಂಬಂಧಗಳನ್ನೂ ಒಂದಲ್ಲ ಒಂದು ನೆವಹೇಳಿ ತಿರಸ್ಕರಿಸಿ ಕೊನೆಗೂ ಬೆಂಗಳೂರಿನ ಸಂಬಂಧ ಹುಡುಕಿದ ಮಹನೀಯರೊಬ್ಬರು ಈಗ ಹಳ್ಳಿಯಲ್ಲಿರುವ ತಮ್ಮ ಮಗನಿಗೆ ಹೆಣ್ಣು ಹುಡುಕುತ್ತಿದ್ದಾರೆ.ಈಗ ಅವರ ಹೇಳಿಕೆ ಏನು ಗೊತ್ತಾ?"ಅಲ್ಲಾ..ಎಲ್ಲರೂ ಪೇಟೆ ಹುಡುಗನೇ ಬೇಕು ಅಂದ್ರೆ ಹಳ್ಳಿ ಹುಡುಗರು ಏನ್ಮಾಡ್ಬೇಕು? ಯಾರೂ ಹಳ್ಳೀಯೋರನ್ನು ಕೇಳೋರೆ ಇಲ್ಲ...ಕಾಲ ಕೆಟ್ಟಿದೆಯಪ್ಪ!"

ಗೌತಮ್ ಹೆಗಡೆ said...

naagu maav mast baradde:)

ಸಾಗರದಾಚೆಯ ಇಂಚರ said...

ವಧು ಸಿಗುತ್ತಾಳೆ, ತಾಳ್ಮೆ ವಹಿಸಿ,
ಸಮಯೋಚಿತ ಲೇಖನ,
ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ

ಬಾಲು said...

ಏನ್ರಿ ಇದು ಹಿಂಗಾ ಬರೆಯೋದು, ಇದನ್ನು ಹಳ್ಳಿ ಹುಡುಗಿ ಓದಿದರೆ ಆಮೇಲೆ ನಿಮ್ಮನ್ನು ಒಪ್ಪದೇ ಹೋದರೆ?

ಆದರೆ ಇದು ಭಯಂಕರ ಸತ್ಯ ಒಳಗೊಂಡಿದೆ. ಡಿಮ್ಯಾಂಡ್ ಜಾಸ್ತಿ ಇದೆ ಅನ್ನುವ ಮಾತು ನಾನು ಒಪ್ಪೋಲ್ಲ, ನಾನೇ ನೋಡಿರುವ ಹಾಗೆ sslc ಪಾಸಾದ ಹುಡುಗಿ ಕೂಡ ಇಂಜಿನಿಯರ್ ಹುಡುಗ ಬೇಕು ಅಂತ ಕೇಳುತ್ತಾಳೆ. ಇನ್ನು ಕೆಲವು ಸಲ ಹುಡುಗನಿಗೆ "ರಾಹು - ಕೇತು" ಕಾಟ ಇರಬಾರದು ಅನ್ನುತ್ತಾರೆ. (ಅದರ ಅರ್ಥ ಅಪ್ಪ ಅಮ್ಮ ಇರಬಾರದು) ಇದು ಹೆಣ್ಣು ಹೆತ್ತವರ ದುರಾಸೆಯೋ ಅಥವಾ ಮಕ್ಕಳು ಅತ್ತೆ ಕೈಗೆ ಸಿಕ್ಕಿ naraladirali ಎನ್ನುವ ತೀವ್ರ ಕಾಳಜಿಯೂ ತಿಳಿಯದು.

ಇರಲಿ ನಿಮಗೆ ಒಳ್ಳೆಯ ವಧು ಸಿಗಲೆಂದು ಹಾರೈಸುವೆ.

Pramod P T said...

ಹ್ಹ ಹ್ಹ.. ಮಾರ್ಕೇಟ್ ಬಿದ್ರೆ ಮತ್ತೆ ಉಲ್ಟಾ ಆಗುತ್ತೆ ಮತ್ತಿ :)
(ಕೆ. ಆರ್. ಮಾರ್ಕೇಟ್ ಅಲ್ಲಾ:)

ಅರವಿಂದ್ said...

ನಾಗರಾಜ್
ಲೇಖನ ಸಮಯೋಚಿತವೋ, ನಿಮ್ಮ ಕಳಕಳಿಯೋ, ಅಥವಾ ಜಾಹಿರಾತೋ, ಅದು ನಗಣ್ಯ, ಆದರೆ ನಿಮ್ಮ ತುಡಿತ ಅಧ್ಬುತ :) :)

ಅರವಿಂದ್
http://chirate.blogspot.com

Mangala Bhat said...

ha ha ..!cholo baradyoo! heheheh

FEEDJIT Live Traffic Feed