ಹಾಸ್ಯ ಸನ್ನಿವೇಶಗಳು ಎಲ್ಲಿ ಹ್ಯಾಗೆ ಹುಟ್ಟುತ್ತವೆ ಎನ್ನಲು ಸಾಧ್ಯವಿಲ್ಲ. ಪ್ರತಿಕ್ಷಣದಲ್ಲೂ ಹಾಸ್ಯವಿರುತ್ತದೆ. ದ್ವಿಅರ್ಥ ಮಾತುಗಳು ಹಾಗೇ ಬೇಗನೆ ನಗೆ ಬರುತ್ತದೆ.
ಹಳ್ಳಿಯಲ್ಲಿ ಗೊತ್ತಿಲ್ಲದೇ ಬಹಳಷ್ಟು ಹಾಸ್ಯ ಘಟನೆಗಳು ನಡೆಯುತ್ತದೆ.
ಘಟನೆ ಒಂದು...
ಸನ್ನಿವೇಶ ಶ್ರಾದ್ಧದ ಮನೆ..
ಶ್ರಾದ್ಧದ ಮನೆಯಲ್ಲಿ ಸಂಜೆ ಊಟದ ನಂತರ ಆ ಮನೆಯ ಅತ್ತಿಗೆಯ ಹತ್ತಿರ ಬಂದ ನೆಂಟ `ಅತ್ತಿಗೆ ಒಳ್ಳೆಯ ಬೋಳಕಾಳು ಕಷಾಯ ಮಾಡ್ಕೊಡು. ಎಂತಕೋ ತಲೆ ನೋವು ಬಂಜು' ಎಂದ.
ಅತ್ತಿಗೆ `ಪಾಪ ತಲೆ ನೋವು ಬಂಜು ಹೇಳ್ತ' ಅಂದು ಕೊಳ್ಳುತ್ತಾ ಕಷಾಯ ಮಾಡಿ ಕೊಟ್ಟಳು.
ಆದ್ರೆ ಈ ಬಾವ ಕಷಾಯ ಕುಡಿದವನೇ ಇಸ್ಪೀಟ್ ಆಡಲಿಕ್ಕೆ ಮಾಳಿಗೆಯನ್ನು ಎರಿದ. ಅತ್ತಿಗೆ ಮಲಗುವ ಮೊದಲು ಇಸ್ಪೀಟ್ ಆಡುತ್ತಿರುವ ಕ್ರೀಡಾಪಟ್ಟುಗಳಿಗೆ ಚಹಾ ಕೊಡಲು ಹೋದಳು. ಅಲ್ಲಿ ನೋಡುತ್ತಾಳೆ ಕಷಾಯ ಕುಡಿದ ಬಾವ ಇಸ್ಪೀಟ್ ಆಡುತ್ತಿದ್ದಾನೆ. ಆಶ್ಚರ್ಯವಾಯಿತು.. ಸಹಜವಾಗಿಯೇ ಅವಳು ಕೇಳಿದಳು
`ಅರೇ ಬಾವ ಎನ್ನ ಹತ್ತಿರ ಮಲಗಿಕೊಳ್ಳತಿ ಹೇಳಿದ್ಯಲಾ.! ಇಸ್ಪೀಟ್ ಆಡ್ತಾ ಇದ್ಯಲಾ ಮಾರಾಯಾ?'
ಘಟನೆ ಎರಡು....
ಮದುವೆಯ ಮನೆ ರಾತ್ರಿ ಸಮಯ...
ನಾಳೇ ಬೆಳಗಾದರೆ ಮದುವೆ . ಸಮಯ ಮೀರಿದೆ. ಎಲ್ಲರು ಮಲುಗುವ ಗಡಬಿಡಿಯಲ್ಲಿದ್ದಾರೆ. ನಾಲ್ಕೈದು ಮಂದಿ ಹೆಂಗಸರಿಗೆ ಮಲುಗಲು ಜಾಗ ಸಿಕ್ಕುತ್ತಾ ಇಲ್ಲ.
ಸಿಟ್ಟಿನಿಂದ ಗೊಣಗುತ್ತಿದ್ದಾರೆ `ಎಲ್ಲಿ ನೋಡಿದರು ಮಲಗುವ ಆಟವೇ ಇಲ್ಲೆ' ಎಂದು. ಹೀಗೆ ಹೇಳುತ್ತಾ ಅಡುಗೆ ಮನೆಗೆ ಹೋದರು. ಅಲ್ಲಿದ್ದ ಅಡುಗೆ ಭಟ್ಟನಿಗೆ ಇವರ ಮಾತು ಕೇಳಿಸಿತು. `ಅವನೆಂದ ಮಲಗುವ ಆಟ ಆದ್ರೆ ಇಲ್ಲಿ ಜಾಗ ಇದ್ದು ಬನ್ನಿ' ಎಂದು.
ಘಟನೆ ಮೂರು..
ಚಲಿಸುತ್ತಿರುವ ಬಸ್...
ತಾಯಿ, ಮಗು, ಅಪ್ಪ ಮೂರು ಜನ ತಿರುಗಾಟಕ್ಕೆ ಹೊರಟಿದ್ದರು. ಮಗುವಿಗೆ ಮೂತ್ರಶಂಕೆ ಬಂಧು ತಾಯಿ ಮಗುವಿನ ಆರೈಕೆಯಲ್ಲಿದ್ದಳು. ಅದೆ ಸಮಯಕ್ಕೆ ಬಸ್ಸು ಬಂದು ಬಿಟ್ಟಿತು. ಅಪ್ಪ ಮುಂದಿ ಬಾಗಿಲಲ್ಲಿ ಬಸ್ಸು ಹತ್ತಿದ ತಾಯಿ ಮಗು ಹಿಂದಿನ ಬಾಗಿಲಲ್ಲಿ ಹತ್ತಿದರು.
ಹಳ್ಳಿ ಬಸ್ಸು ತುಂಬಾ ರಷ್ ಇತ್ತು. ಅಪ್ಪ ಎನ್ನುವವನು ಟಿಕೆಟ್ ತಗೊಂಡ. ಸ್ವಲ್ಪ ದೂರ ಹೋದ ಮೇಲೆ ಎನೋ ನೆನಪಾಗಿ ದೊಡ್ಡದಾಗಿ ಕೂಗಿದ
`ಏ ಚೆಡ್ಡಿ ಹಾಕಿಯೇನೆ' ಎಂದು ಹೆಂಡ್ತಿ ತಡ ಮಾಡಲಿಲ್ಲ ನಿಮ್ಮ ಎದುರಿಗೆ ಹಾಕಿನಲ್ರೋ' ಎಂದಳು
ಬಸ್ನಲ್ಲಿದ್ದವರಿಗೆ ಆಶ್ಚರ್ಯ.. ಎನಿದು ಚೆಡ್ಡಿ ವಿಚಾರವನ್ನು ಹೀಗೆ ಮಾತಾಡುತ್ತಾರಲ್ಲ ಎಂದು ಕೊನೆಗೆ ನೋಡಿದರೆ, ಮೂತ್ರ ಮಾಡಿಸಲು ಮಗುವನ್ನು ಕರೆದು ಕೊಂಡು ಹೋಗಿದ್ದರಲ್ಲ ಮಗುವಿಗೆ ಚೆಡ್ಡಿ ಹಾಕಿದಿಯಾ? ಎಂಬುದು ಅವರ ಮಾತಿನ ಹಿಂದಿರುವ ಭಾವ.
ನಮ್ಮ ಪತ್ರಿಕಾ ವೃತ್ತಿಯಲ್ಲಿ ಇಂತಹ ಹಾಸ್ಯಗಳು ಬಹಳ. ಮೊದಲು ನಾನು ಪತ್ರಿಕಾ ವೃತ್ತಿಯಲ್ಲಿ ಕಂಡ ಕೆಲವು ಜೋಕುಗಳನ್ನು ಇಲ್ಲಿ ಬರೆಯುತ್ತೇನೆ.
ಘಟನೆ ನಾಲ್ಕು......
ನಾನು ನೋಡಿಕೊಳ್ಳುವ ಜಿಲ್ಲೆಯ ಒಂದು ವರದಿಗಾರ ಒಂದು ಪೋಟೋಕ್ಕೆ ಕ್ಯಾಪ್ಷನ್ ಬರೆದಿದ್ದ` ಈ ಊರಿನ ರೈತರ ದ್ರಾಕ್ಷಿಬಿದ್ದು ಕೊಳೆತುಹೋಗಿವೆ.
ಘಟನೆ ಐದು....
ಒಂದು ಪತ್ರಿಕೆಯಲ್ಲಿ ಉಪಸಂಪಾದಕ ಕೊಟ್ಟ ಹೆಡ್ಡಿಂಗ್ ಹೀಗಿತ್ತು `ಪತಿಯನ್ನು ಕೊಂದವಳಗೆ ಒಂಬತ್ತು ತಿಂಗಳು ಸಜೆ'
ಪೇಜ್ ಮಾಡುವವನಿಗೆ ಈ ಹೆಡ್ಡಿಂಗ್ ಸ್ವಲ್ಪ ಉದ್ದಾಗಿತ್ತು ಅದಕ್ಕಾಗಿ ಅವನು ಹೀಗೆ ಮಾಡಿದ `ಪತಿಯನ್ನು ಕೊಂದವಳಿಗೆ ಒಂಬತ್ತು ತಿಂಗಳು'
ಇಂತಹ ಹಲವಾರು ಬಾಣಗಳ ಸಂಗ್ರಹ ಬತ್ತಳಿಕೆಯಲ್ಲಿದೆ. ಇನ್ನೊಮ್ಮೆ ಸಂದರ್ಭ ಬಂದಾಗ ಹೇಳುತ್ತೇನೆ. ಆದ್ರೆ ಬರೆಯಲಿಕ್ಕೆ ಭಯ . ನಿಮ್ಮ ಅಭಿಪ್ರಾಯ ನೋಡಿ ಯಾರು ಬಯ್ಯದಿದ್ದರೆ ಮುಕ್ತವಾಗಿ ಹೇಳುತ್ತೇನೆ.
3 comments:
ಹ ಹ ಹ ಸೂಪರ್ ಡ್ಯೂಪರ್ ಜೋಕ್
ಮುಂದಿದ್ದು.....! ಬೇಗ ಬರಲಿ
;):):)
Good jokes sir
Post a Comment