Sunday, September 21, 2008
ಏಸುಕ್ರಿಸ್ತನೊಂದಿಗೆ ಮಾತನಾಡಿದ ಗೌಡರು.
ಇತ್ತೀಚೆಗೆ ಮಂಗಳೂರು ಸೇರಿದಂತೆ ಹಲವೆಡೆ ಕ್ರೈಸ್ತರ ಧಾರ್ಮಿಕ ಸ್ಥಳಗಳ ಮೇಲೆ ಬಜರಂಗಿಗಳು ದಾಳಿ ಮಾಡಿದರು. ಹಿಂದೂ ಸಂಸ್ಕೃತಿಯಲ್ಲದ ಮೂರ್ತಿ ಹಾಳು ಮಾಡುವ ಕೆಲಸ ಮಾಡಿರುವುದು ತಪ್ಪು ಎಂದು ಖಂಡಿತವಾಗಿ ಹೇಳಬೇಕು.
ಯಾವ ಘಟನೆಯು ನಮ್ಮ ಮನಸ್ಸಿನಲ್ಲಿ ಬಹಳ ದಿನ ಉಳಿಯುವುದಿಲ್ಲ. ಮರೆತು ಬಿಡುತ್ತೇವೆ. ಹಾಗೇ ಕ್ರೈಸ್ತರು ಕೂಡಾ ಕಹಿ ಘಟನೆಯನ್ನು ಮರೆಯುವ ಪ್ರಯತ್ನದಲ್ಲಿರುವಾಗ ನಮ್ಮ ರಾಜಕೀಯ ಮುಖಂಡರು ಬಿಡಲಿಕ್ಕುಂಟೆ? ಕೆದಕುತ್ತಾರೆ. ನುಸಿ ಕಚ್ಚಿದ ಮರುದಿನ ನಂಜಿನ ಮೈಯವರಿಗೆ ಇಡೀ ದಿನ ಕೆರೆತವಾಗುವಂತೆ ಇವರಿಗೂ ಅದು ತುರಿಸುತ್ತದೆ.
ವರ್ಷಕ್ಕೆ ಹದಿನೈದು ಚಂಡಿಯಾಗ, 40 ಸತ್ಯನಾರಾಯಣ ಕತೆ, 25 ದೇವಿಮಹಾತ್ಮೆ, ಎನ್ನುತ್ತಾ ಸದಾ ದೇವರ ಧ್ಯಾನದಲ್ಲಿರುವ ದೇವೆಗೌಡರಿಗೆ ಇಂತಹ ಕೆರತ ಹೆಚ್ಚಿಗೆ. ಕುಮಾರಣ್ಣನಿಗೆ ಏನಾದ್ರೂ ಸಹಿಸಕೊಬಹುದು ಬೇರೆ ಯಾರಿಗಾದ್ರೂ ಏನಾದ್ರೂ ಆದ್ರೆ ಈ ಗೌಡರಿಗೆ ತಡೆದು ಕೊಳ್ಳಲಿಕ್ಕೆ ಆಗಲ್ಲ. ಪಂಜುರ್ಲಿ ದೆವ್ವ ಇವರ ಮೈ ಮೇಲೆ ಬಂದು ಬಿಡುತ್ತದೆ.
ಮೊನ್ನೆ ಇವರು ಮಂಗಳೂರಿನ ಪ್ರಾರ್ಥನ ಮಂದಿರಕ್ಕೆ ತೆರಳಿ ಏಸು ಕ್ರಿಸ್ತನ ಹತ್ತಿರ ಆತ್ಮೀಯವಾಗಿ ಮಾತಾಡಿ ಬಂದರು ಅಂತ ಸುದ್ದಿ. ಏನಾದ್ರೂ ಏಸು ಬದುಕಿದ್ದರೆ ದೇವರಾಣೆಗೂ ಹೇಳ್ತಿದ್ದ ಗೌಡ್ರೆ ನಾಟಕ ಮಾಡಬೇಡಿ. ಇನ್ನೊಂದೆರಡು ಚಂಡಿಯಾಗ ಮಾಡಿ ಅಂತ.
ದೇವೇಗೌಡ್ರೆ ಹಾಗೆ ಎಲ್ಲದನ್ನು ಮೈಮೇಲೆ ತಗೋತಾರೆ ನಂತರ ಕೊಡುವಿ ಹಾಕುತ್ತಾರೆ. ಏಲ್ಲೋ ಓದಿದ ನೆನಪು, ಒಬ್ಬ ವಿಧವೆ ತನ್ನ ಕಷ್ಟ ತೋಡಿ ಕೊಳ್ಳಲು ವಿಧಾನಸೌಧಕ್ಕೆ ಬಂದಿದ್ದಳಂತೆ, ಮೊದಲು ಜೆ.ಎಚ್. ಪಟೇಲರು ಸಿಕ್ಕರಂತೆ, ಹೀಗಾಗಿದೆ ನನ್ನ ಸ್ಥಿತಿ ಸಹಾಯ ಮಾಡಿ ಎಂದರಂತೆ ಅವರು ಆಗಲಿ ಸುಧಾರಿಕೋ ಸಹಾಯ ಮಾಡ್ತೇನೆ ಎಂದರಂತೆ. ನಂತರ ನಿಧಾನಕ್ಕೆ ದೇವೇಗೌಡರು ನಿದ್ರೆಗಣ್ಣಿನಿಂದ ಕಲಾಪ ಮುಗಿಸಿ ಸೌಧದ ಮೆಟ್ಟಿಲು ಇಳಿತಾ ಇದ್ದರಂತೆ. ಎದುರಿಗೆ ಬಡ ವಿಧವೆ ಸಿಕ್ಕಳಂತೆ. ಗೌಡರ ಹತ್ತಿರ ತನ್ನ ಕಷ್ಟವನ್ನು ಹೇಳಿಕೊಂಡಳಂತೆ. ಗೌಡರು ತಡ ಮಾಡದೆ ಆ ವಿಧವೆಯ ಕೈ ಹಿಡಿದು ಗೋಳೋ ಅಂತ ಅಳಲಿಕ್ಕೆ ಪ್ರಾರಂಭ ಮಾಡಿದರಂತೆ . ಬಹಳ ದಿನದಿಂದ ತೊಳೆಯದ ಸೌಧದ ಮೆಟ್ಟಿಲು ಗೌಡರ ಕಣ್ಣಿರಿಂದ ತೊಯ್ದು ಕ್ಲೀನ್ ಆಯಿತಂತೆ. ಕೊನೆಗೆ ಆ ಹೆಣ್ಣು ಮಗಳೆ `ಇಲ್ಲ ಗೌಡರೆ ನೀವಿಷ್ಟು ದುಃಖಿಸ ಬೇಡಿ ನನ್ನ ಸಮಸ್ಯೆಯನ್ನು ನಾನೇ ಪರಿಹಾರ ಮಾಡಿಕೊಳ್ಳುತ್ತೇನೆ ಅಂದಳಂತೆ.
ಅಂದರೆ ಗೌಡರದ್ದು ಎಲ್ಲಾ ಕೆಲಸವು ಹೀಗೆ ಏಕ್‌ದಂ ಅಳೋದು ಕೊನೆಗೆ ಇವರನ್ನೇ ಬೇರೆಯವರು ಸಮಾಧಾನ ಮಾಡಬೇಕಾಗುತ್ತದೆ. ಏಸುನೊಂದಿಗೆ ಮಾತನಾಡಿದ್ದು ಹಾಗೇ.
Subscribe to:
Post Comments (Atom)
1 comment:
Tumba chennagide saar.. !
Post a Comment