ಅವತ್ತು ನಾನು ಕೆಲಸವಿಲ್ಲದೆ ತಾರತ್ತೆ ಮನೆಯಲ್ಲಿ ಕುಳಿತಿದ್ದೆ. ನಾಲ್ಕು ಮಕ್ಕಳು ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದರು.ಸಡನ್ ನಿಂತರು. ಎನ್ ಮಾಡ್ತಾರೆ ಇವರು, ಕಾಲಡಿಗೆ ಹಾವು ಎನಾದ್ರು ಬಂತಾ ? ಎಲ್ಲಾ ಮಕ್ಳು ಕೆಳಗೆ ನೋಡಲಿಲ್ಲ. ಏಕ್‌ದಮ್ ಮೇಲೆ ನೋಡಲಿಕ್ಕೆ ತೋಡಗಿದರು. ಇವರೇನು ನೋಡ್ತಾರಪ್ಪ ಎಂದು ನಾನು ಮೇಲೆ ನೋಡಿದೆ ನನಗೆ ಕಂಡಿದ್ದು ಮನೆಯ ಮಾಳಿಗೆ ಹೊರತು ಬೇರೆನು ಕಾಣಲಿಲ್ಲ. ಹೊತ್ತು ಹೋಗದೆ ಕುಳಿತಿದ್ದ ನನ್ನ ಕೈಲಿ ಕ್ಯಾಮರಾ ಇತ್ತು ತಡ ಮಾಡಲಿಲ್ಲ. ಕ್ಲಿಕ್ ಮಾಡಿದೆ ಒಬ್ಬರು ಒಂದೊಂದು ಸ್ಟೈಲಲ್ಲಿ ನಿಂತಿದ್ರು. ನಾವು ಚಿಕ್ಕವರಿರುವಾಗ ಹೀಗೆ, ಕಂಡ ಕಂಡದ್ದನ್ನು ಕುತೂಹಲದಿಂದ ನೋಡ್ತಾ ಇದ್ದದ್ದು ನೆನಪಾಯ್ತು. ಆಗಿನ ಕೂತುಹಲ ಮತ್ತೊಂದನ್ನು ನೋಡುವ ಆಸಕ್ತಿಯ ಕಣ್ಣಿಗೆ ಇಂದು ಪರೆ ಬರುತ್ತಿದೆಯಲ್ಲ ಎಂದು ಬೇಸರವಾಯಿತು.
1 comment:
ಈ ಚಿತ್ರ ಮಸ್ತ್ ಲಾಯ್ಕಿತ್ತ್
Post a Comment