ಯಕ್ಷಗಾನ ಅಂದರೇ ಯಾಕೋ ಏನೋ ಹಾಗೆ ಕಾಲುಗಳು ಕುಣಿಯಲಿಕ್ಕೆ ತೊಡಗುತ್ತವೆ. ಸಾಮಾನ್ಯವಾಗಿ ಎಲ್ಲಿ ಯಕ್ಷಗಾನವಾದರೂ ಹೋಗುವ ಹುಮ್ಮಸ್ಸು ಕೆಲ ಕಾಲದ ಹಿಂದೆ ಇತ್ತು. ಊರನ್ನು ಬಿಟ್ಟು ಯಾವಾಗ ಬೆಂಗಳೂರು ಸೇರಿದೆನೋ ಅಂದಿನಿಂದ ಆ ಮಜಾವೇ ಇಲ್ಲವಾಗಿದೆ. ಬೆಂಗಳೂರಿನಲ್ಲಿ ಊರಿಗಿಂತ ಹೆಚ್ಚಿಗೆ ಯಕ್ಷಗಾನವಾಗಬಹುದು. ಆದರೆ ಊರಿನಲ್ಲಿ ಆಗುವ ಯಕ್ಷಗಾನದ ಗಮ್ಮತ್ತೆ ಬೇರೆ.
ನಮ್ಮದೊಂದು ಟ್ರುಪು. ಇದರಲ್ಲಿ 18 ವರ್ಷದ ಮಾಣಿಯರಿಂದ ಹಿಡಿದು 60ರ ಪ್ರಾಯದ ಯುವಕರು ಇದ್ದರು. ವಯಸ್ಸಾದವರು ಹಳೆ ಹುಲಿಗಳು. ಯಾವುದೇ ಯಕ್ಷಗಾನಕ್ಕೆ ಹೋಗಲಿ ಇವರು ಹೇಳುವುದು ಒಂದೇ ಭಸ್ಮಾಸುರ ತೋಟಿಗಿಂತ ಚಿಟ್ಟಾಣಿನೇ ಬಲ. ಚಿಟ್ಟಣಿ ಕೌರವನ ಪಾತ್ರ ಮಾಡಿದರೆ ` ಆದೋಡೆಲೆ ಸಂಜಯನೇ ನೀ ಕೇಳು' ಪದ್ಯಕ್ಕೆ ಶಿವರಾಮ ಹೆಗಡೆ ಅದ್ಭುತ ಅಭಿನಯ ನೀಡುತ್ತಿದ್ದರು ಎಂದು ಹೇಳುತ್ತಿದ್ದರು. ಇವರು ವರ್ತಮಾನದಲ್ಲಿ ಯಕ್ಷಗಾನವನ್ನು ನೋಡಿ ಭೂತಕಾಲದ ನೆನಪನ್ನು ಮೆಲುಕಾಡುತ್ತಿದ್ದರು. ಅದಕ್ಕಾಗಿಯೇ ಇವರನ್ನೂ ನಮ್ಮ ಬಳಗದಲ್ಲಿ ಸೇರಿಸಿ ಕೊಂಡಿದ್ದೇವು.
ಕುಮಟಾ, ಗೇರುಸೊಪ್ಪಾ, ಉಪ್ಪಳಿ, ಚಂದಾವರ, ಅಂಕೋಲಾ ಎಲ್ಲಿಯೇ ಆಟವಾಟಗಲಿ ನಮ್ಮ ಬಳಗ ಇದ್ದೇ ಇರುತ್ತಿತ್ತು.
ಯಕ್ಷಗಾನಕ್ಕೆ ಹೋದವರು ಬಣ್ಣದ ಮನೆಗೆ ಒಮ್ಮೆಯಾದರು ಭೇಟಿ ನೀಡುತ್ತಾರೆ. ಚೌಕಿಮನೆಗೆ ಹೋದರೆ ತಮಗೆ ಇಷ್ಟವಾದ ಕಲಾವಿದರನ್ನು ಮಾತನಾಡಿಸಿ ಕೊಂಡು ಬರುವುದು ರೂಢಿ. ಕಲಾವಿದನಿಗೂ ತಮ್ಮ ಅಭಿಮಾನಿಗಳು ಎಂಬ ಹೆಮ್ಮೆಯಿಂದ ಮಾತನಾಡಿಸುತ್ತಿದ್ದರು. ಚಿಟ್ಟಾಣಿ ಎದುರಿಗೆ `ನಿಮ್ಮ ಕೀಚಕನ ನೋಡಬೇಕು ಅಂತಾನೇ ನೂರು ಕಿಮೀ ದೂರದಿಂದ ಬಂದಿದ್ದೇವೆ ಬಹಳ ನಿರೀಕ್ಷೆಯನ್ನು ಇಟ್ಟು ಕೊಂಡಿದ್ದೇವೆ' ಎಂದು ಹೇಳುವ ರೂಢಿಯನ್ನು ಯಕ್ಷಗಾನ ಅಭಿಮಾನಿಗಳು ಬೆಳೆಸಿ ಕೊಂಡಿದ್ದಾರೆ.
ಕಲಾವಿದರಿಗೂ ಗೊತ್ತು ಇವರು ತಮ್ಮ ಮುಖ ಸ್ತುತಿಯನ್ನು ಮಾಡುತ್ತಾರೆಂದು. ಆದರೂ ಅಭಿಮಾನಿಗಳ ಮಾತಿಗೆ ಗೌರವ ನೀಡಿ ಅಲ್ಪಸ್ವಲ್ಪ ಕುಣಿಯುತ್ತಿದ್ದರು. ಆಟದ ಬಗ್ಗೆ ಏಷ್ಟು ಹೇಳಿದರೂ ಕಡಿಮೆಯೇ.
3 comments:
sunday ಆಟ ಲೈಕ್ ಇತ್ತು ಅಲ್ದೆನಾ :)
ಬರಹ ಗುಡ್. ಇನ್ನೂ ಸ್ವಲ್ಪ ಸೇರ್ಸ್ಕ್ಕಾಗಿತ್ತಾ!
ಚೊಲೋ ಇದ್ದು ಲೇಖನ. ಹಿಂಗೆ browse ಮಾಡ್ತಾ ನಿಮ್ ಬ್ಲಾಗ್ ನೋಡದ್ದು . ಮೊನ್ನೆ ಅಷ್ಟೇ ಗೆರುಸೋಪ್ಪದಲ್ಲಿ ಚಿಟ್ಟಾಣಿ ಅವರ ಯಕ್ಷಗಾನ ನೋಡ್ಕಂಡು ಬಂದೆ. ಬಣ್ಣದ ಮನೆಗೆ ಹೋಗೋ ಹೇಳಿ ಯೋಚನೆ ಮಾಡಿದ್ದೆ . ನನ್ ಸಂತಿಗೆ ಬಪ್ಪೋರು ಯಾರು ಇಲ್ಯಾಗಿತ್ತು . ಸುಮ್ನೆ ಹೋಗಿ ಬೈಸ್ಕಬಂದ್ರೆ ಎಂತಕಪ್ಪ ಹೇಳಿ ಹೊಯ್ದ್ನೆ ಇಲ್ಲೇ :) .. ನಾನು ಹೋದ ವರ್ಷ ಯಕ್ಷಗಾನ ನೋಡಿದ್ದೆ ಚಿಟ್ಟಾಣಿಯವರದ್ದೆಯ .so ಯಕ್ಷಗಾನಕ್ಕೆ ಹೊಸಬ ನಾನು . ಕಳೆದ ವರ್ಷದಿಂದ ಶುರು ಮಾಡಿದ್ದೆ ಅಷ್ಟೇಯ.ಬರಹದ ಜೊತೆಗೆ ಆ photos ಕೂಡ ಮಸ್ತ್ ಇದ್ದು ಸರ್ . Thsnks for it :)
ಚೊಲೋ ಇದ್ದು ಲೇಖನ. ಹಿಂಗೆ browse ಮಾಡ್ತಾ ನಿಮ್ ಬ್ಲಾಗ್ ನೋಡದ್ದು . ಮೊನ್ನೆ ಅಷ್ಟೇ ಗೆರುಸೋಪ್ಪದಲ್ಲಿ ಚಿಟ್ಟಾಣಿ ಅವರ ಯಕ್ಷಗಾನ ನೋಡ್ಕಂಡು ಬಂದೆ. ಬಣ್ಣದ ಮನೆಗೆ ಹೋಗೋ ಹೇಳಿ ಯೋಚನೆ ಮಾಡಿದ್ದೆ . ನನ್ ಸಂತಿಗೆ ಬಪ್ಪೋರು ಯಾರು ಇಲ್ಯಾಗಿತ್ತು . ಸುಮ್ನೆ ಹೋಗಿ ಬೈಸ್ಕಬಂದ್ರೆ ಎಂತಕಪ್ಪ ಹೇಳಿ ಹೊಯ್ದ್ನೆ ಇಲ್ಲೇ :) .. ನಾನು ಹೋದ ವರ್ಷ ಯಕ್ಷಗಾನ ನೋಡಿದ್ದೆ ಚಿಟ್ಟಾಣಿಯವರದ್ದೆಯ .so ಯಕ್ಷಗಾನಕ್ಕೆ ಹೊಸಬ ನಾನು . ಕಳೆದ ವರ್ಷದಿಂದ ಶುರು ಮಾಡಿದ್ದೆ ಅಷ್ಟೇಯ.ಬರಹದ ಜೊತೆಗೆ ಆ photos ಕೂಡ ಮಸ್ತ್ ಇದ್ದು ಸರ್ . Thanks for it :)
Post a Comment