blag ಬಗ್ಗೆ ನನ್ನ ಮಿತ್ರರೊಬ್ಬರು ಗಮ್ಮತ್ತಾಗಿ ಬೈದರು. ನನಗೆಂತು ಯದ್ವಾತದ್ವಾ ಖುಷಿಯಾಯಿತು. ಅವರು ಬೈದಿರುವ ವ್ಯಂಗ್ಯ ಮಾಡಿರುವುದನ್ನು ಹಾಗೇಯೆ ಬರೆದಿದ್ದೇನೆ. ಓದಿ ಮಜಾ ತೆಗೆದುಕೊಳ್ಳುವವರು ತೆಗೆದುಕೊಳ್ಳಬಹುದು. ಬಯ್ಯುವವರು ಬಯ್ಯಲು ಬಹುದು. ನಾನು ಅನ್ಕೋತಿನಿ ಕೆಲವರಾದರು ಇಲ್ಲಿರುವ ವಿಚಾರಗಳನ್ನು ಒಪ್ಪಿಕೊಳ್ಳಬಹುದು ಎಂದು.....
ಮೊನ್ನೆ ನನ್ನ ಪತ್ರಕರ್ತ ಮಿತ್ರರೊಬ್ಬರೊಂದಿಗೆ ಮಾತಾನುಡುತ್ತಾ ಇದ್ದೆ. ಮಿತ್ರಇರುವುದುತ್ತರ ಕರ್ನಾಟಕದಲ್ಲಿ . ನನಗೆ ನೆರೆಯ ಬಗ್ಗೆ ಮಾಹಿತಿ ಕೆಳಬೇಕಿತ್ತು. ಫೋನ್ ಮಾಡಿದ್ದೆ. ಮೊದಲು ನಮ್ಮ ಮಾತು ನೆರೆಯ ಬಗ್ಗೆ ಇತ್ತು. ಮಾತು ಹಾಗೇ ಸಾಗುತ್ತಾ ಬ್ಲಾಗ್ಗಳ ಬಗ್ಗೆ ಬಂತು. ಆಗ ನನ್ನ ಮಿತ್ರನ ಧಾಟಿ ವ್ಯಂಗ್ಯದ ಕಡೆ ತಿರುಗಿತು.
ಎನ್ರಪ್ಪಾ ನಿಮ್ಮ ಬ್ಲಾಗ್ ಲೋಕ ಹ್ಯಾಂಗಿದೆ ಎಂದ. ಏನೋಪ್ಪಾ ಏನೋ ನಡಿತಿದೆ ಮತ್ತು ಏನೀನೋ ನಡಿತಿದೆ ಎಂದೆ. ಅಲ್ರಪ್ಪಾ ಇಲ್ಲಿ ಈ ರೀತಿ ನೆರೆ ಬಂದು ಜನಗಳು ಗೋನ್ಯಾಗೆ ಒದ್ದಾಡತ್ತಾ ಇದಾರ. ಒಂದು ಬ್ಲಾಗ್ನರು ಬರ್ದೆ ಇಲ್ಲಾ. ಅದ್ಯಾರೋ ತನ್ನ ಬ್ಲಾಗ್ ನಿಲ್ಸಿದಕ್ಕೆ ಆಕಾಶನೇ ಕೆಳಕ್ಕ ಬಿತ್ತು ಅನ್ನಾಂಗ ಹೊಯ್ಯಕ್ಯಂಡ್ರಿ. ಅನ್ನ ನೀಡೋರು ನೆಲ ಕಚ್ಚಿ ಹೋದರೆ ಒಬ್ಬರು ಬರಯಾಂಗ್ ಇಲ್ಲ.
ನನಗೆ ನಿಮ್ಮ ಬ್ಲಾಗಿಗಳನ್ನು ನೋಡಿದರೆ ಬಾಳಾ ಹಾಸ್ಯ ಅನ್ಸುತ್ತೆ. ಪತ್ರಿಕೋದ್ಯಮದಲ್ಲಿ ಒಳ್ಳೆ ಹೆಸರು ಮಾಡಿರೋ ಮಿತ್ರರು ಯಾರ್ಯಾರೋ ಕಮೆಂಟ್ ಹಾಕಿದಕ್ಕೆ ಬೇಸರ ಮಾಡಿಕೊಂಡು ಬ್ಲಾಗ್ ನಿಲ್ಲಿಸಿದರು ಎಂದು ಮತ್ತೊಂದು ಬ್ಲಾಗನ್ಯಾಗ ಬರೆದ್ರು. ಅಪಾಪಾ...ಬ್ಲಾಗ್ ಓದುಗರು ಹೋಯ್ಯಕೊಂಡ್ರು. ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಬರೆದುಕೊಟ್ಟ ಹಾಗೇ ಆಡಿದ್ರಪ್ಪಾ. ಯಾವುದೋ ಹೆಣ್ಣ ಮಗಳು ಬಾಳಾ ಚೋಲೋ ಬರಿತಿದ್ಲಂತೆ. ನನ್ನ ಬೆಂಗಳೂರು ಇತರ ಮಿತ್ರರು ಅವಳನ್ನು ಪಂಚ ಪತಿವೃತೆಯರೊಂದಿಗೆ ಮತ್ತೊಂದು ಪತಿವೃತೆ ಎನ್ನುವ ರೀತಿ ಬಿಂಬಿಸಿದರು. ಅವರ ಸ್ಥಿತಿ ಹ್ಯಾಂಗ್ಯಾಗಿತಪ್ಪಾ ಅಂದರ `ಸ್ಮರೆ ನಿತ್ಯಂ ಷದ ಕನ್ಯಾ ಎನ್ನುವ ಸ್ತಿತಿಗೆ ತಲುಪಿದರು. ಕೊನೆ ಅವಳನ್ನು ದೊಪ್ಪೆಮದು ಕೆಳಕ್ಕೆ ಕೆಡಗಿ ಅವಳನ್ನು ಆರೆಸ್ಸೆಸ್ ಮುಖವಾಣಿ ಎಂಬತೆ ಬಿಂಬಿಸಿದರು, ನಂತರ ಅವಲನ್ನು ಏನೆಲ್ಲಾ ಮಾಡಿದ್ರಪಾ ಕೊಳಕು ಜನ.
ನಮ್ಮ ಕಡಿ ಈಗ ಹ್ಯಾಂಗಾಗೈತಿ ಅಂದ್ರ ನೆರೆ ಸಂತ್ರಸ್ತ ಆಹಾರಕ್ಕೆ ಯಾವ ರೀತಿ ಪರಿ ತಪಿಸುತ್ತಿದ್ದರೆ ಎಂದರೆ ಕರಳು ಚಿವ್ ಅಂತತ್ತೈ. ಈ ಬ್ಲಾಗ್ ಎನ್ನುವುದು ಬೆಂಗಳೂರಿಂದ ನೆಲಮಂಗಲ ದಾಟಾಂಗಿಲ್ಲ. ಯಾರೋ ಬ್ಲಾಗಿಗಳು ಅಂತಿದ್ರಪಾ. ನನ್ನ ಬ್ಲಾಗನ್ನು ಸಾವಿರ ಜನ ನೋಡಿದ್ರು. ಈ ಲೇಖನಕ್ಕೆ ನೂರು ಹಿಟ್ ಆಯಿತು ಅಂತಾರೆ. ಏನೋ ಕಾರ್ಗಿಲ್ ಯುದ್ಧ ಮಾಡಿದ ಯೋಧರ ಹಾಗೆ. ಒಂದು ಅನ್ಯಾವನೋ ಹೇಳಿದ `ದಿನ ಪತ್ರಕೆಯ ಸಾಪ್ತಾಹಿಕ ಎನ್ನುವುದು ಅಪ್ರಸ್ತುತ. ಈಗೆನೀದ್ರು ಬ್ಲಾಗ್ ಮಾತ್ರ' ಅಂತ. ಅಲ್ರಿ ನಮ್ಮ ಆಪೀಸನ್ಯಾಗ್ ಇಪ್ಪತ್ ಮಂದಿ ಇದಾರ ಅದ್ರಾಗ 15 ಮಂದಿಗೆ ಬ್ಲಾಗ್ ಅಂದ್ರನ ಗೊತ್ತಿಲ್ಲ. ನಮ್ಮ ಅಗದಿ ಬೆಸ್ಟ್ ರಿಪೋರ್ಟರ್ಂಗ ಸ್ವಂತ ಮೇಲ್ ಐಡಿ ಇಲ್ಲ. ಯಾರೋ ನಿಮ್ಮ ಮೇಲ್ ಐಡಿ ಕೊಡು ಅಂದ್ರ ಅದೇನೊ www. ....com ಬರಕೊಳ್ರಿ ಅಂದ ಬಂದಾನ. ಇಂತ ಮಕ್ಳ ಇರೋವಾಗ ಈ ಬ್ಲಾಗ್ ಯಾವಾಂಗ ಬೇಕ್ರಿ? ನಮ್ಮಲ್ಲಿ ಒಬ್ಬ ರೈತ ನ್ಯಾಚುರಲ್ ಯೂರ್ಯ ಗೊಬ್ಬರಾ ಮಾಡ್ತಾನ ಅವನ ಬಗ್ಗೆ ಬರ್ದಾಗ ನೂರಾರು ಫೋನ್ ಕಾಲ್ಸ್ ಬಂದಾವ. ಬಾಳಟ ಮಂದಿ ಬಂದ ಹೋಗ್ಯಾರ. ಅಂದ್ರ ನಾವ್ ಏನ್ ಹೇಳ್ಬೇಕಾತ್ರಿ. ನೂರ್ಯಾರ್ ಮಂದಿ ನಮ್ಮ ರೈತನ್ನ ಹಿಟ್ ಮಾಡ್ಯಾರ್ ಅನ್ಬೋಕಾತ.
ನೆರೆ ಸಂತ್ರಸ್ತರಿಗೆ ಈ ಬ್ಲಾಗ್ನ ಮಂದಿಏನ್ ಮಾಡ್ಯಾರ್ರಿ? ಒಟ್ಟು ನಂದ ಹಾಂಗ.. ಇವಂದ ಹಿಂಗ.. ನಮ್ಮ ಬ್ಲಾಗ್ ಅಂತವರು ಬಂದಾರ.. ಇವ್ನ ಬ್ಲಾಗ್ಗೆ ಇಂತವರು ಬಂದ್ಯಾರ್.. ಅಂವ ಚೆಡ್ಡಿ, ಇಂವ ಕಮ್ಯುನಿಸ್ಟ್, ಇಂವ ಜನಿವಾರ ಹಾಕ್ಯುಂಡೆ ಬರ್ಯಾಕ್ ಕುಂತಾನ. ಸೋನಿಯಾ ಗಾಂಧಿನ ಬಿಜೆಪಿ ಸೇರಿಸಿ, ಆಡ್ವಾಣಿನ ಸಿಪಿ ಎಂಗೆ ಸೇರಿಸೋ ಮಂದಿನೆ ಅಲ್ಲಿದಾರ.
ಹೊತ್ತೊಗದ ಮಂದಿ ಹಿಂಗ ಮಾಡ್ತಾರ್. ಅಲ್ಲಿ ಒಂದು ಸ್ವಸ್ತ ಸಮಾಜ ನಿರ್ಮಾಣ ಆಗಬೇಕು. ರಚನಾತ್ಮಕ ವಿಮರ್ಶೆ ಇರಬೇಕು. ಅದಬಿಟ್ಟು ಬ್ಯಾಡದೆ ಹೋದ ಮಾಡಿಕೊಳ್ತಾ. ಬಾವಿಯೊಳಗಿನ ಕಪ್ಪೆ ತರ ಆಡ್ತಾರ. ಎನ್ ಮಂದಿನಪಾ ಇವರು. ಎನ್ನುತ್ತಾ ಮಿತ್ರ ಮಾತಿಗೆ ವಿರಾಮ ನೀಡಿದ ನಾನು ಅಂದೇ ನನ್ನ ಬ್ಲಾಗಿಗೆ ಒಳ್ಳೆ ಬರವಣಿಗೆ ಆತು ನಿನ್ನ ಮಾತು ಅಂತ.
ಸಣ್ಣ ಮಾಹಿತಿ ಉಷೆ ಉದಯ ಬ್ಲಾಗಿನಲ್ಲಿ ನೆರೆಯ ಬಗ್ಗೆ ಬರೆದಿದ್ದಾರೆ ಬ್ಲಾಗಿಗಳು ಸಂತೋಷ ಪಡಬಹುದು
7 comments:
ನಿಮ್ಮ ಮಿತ್ರ ಹೇಳಿದ್ದು ನೂರಕ್ಕೆ ನೂರು ಸರಿ..
ಆ ನಿಮ್ಮ ಮಿತ್ರನಿಗೂ ಒಂದು ಬ್ಲಾಗ್ ತೆಗೆದುಕೊಟ್ಬಿಡಿ. ಎಲ್ಲಾ ಸರಿ ಹೋಗ್ತದೆ . :-)
byabeda maraya ninuondu blog madu ende. peparnyage baraya time salangilla adyavng beko maraya andabidoda....
ಯಾಕೋ ದೋಸ್ತಾ ಅಪರೂಪಕ್ಕೆ ಗಂಭೀರವಾಗ್ಬಿಟಿದಿಯಾ....! ಏನ್ ವಿಷ್ಯಾ? ನೀನು ಶುರು ಹಚ್ಚು ಬ್ಲಾಗ್ ಕಡೆಯಿಂದ ನೆರೆಯವ್ರಿಗೆ ಪರಿಹಾರ!!! ಕ್ಲಬಲ್ಲಿ ಒಂದು ಡಬ್ಬಿ ಇಟ್ಟಿದ್ದರು. ದುಡ್ಡು ಹಾಕಿದ್ಯ ಇಲ್ಲ್ಯಾ ಅದಕ್ಕೆ?!
ಕೋಡ್ಸರ
nimma mitra heliddu noorakke nooru sari:):) aadare avaroo swalpa baavi kappene ansutte:) yaakendre blog loakadalli kelavu olleya prayatnagaloo nadeyuttive. avarige helbidi :)
ನಾಗರಾಜ್
ನಿಮ್ಮ ಮಿತ್ರರು ಹೇಳಿದ್ದರಲ್ಲಿ ಎಲ್ಲವೂ ಸರಿ ಎನ್ನಲು ಸಾಧ್ಯವಿಲ್ಲ. ಆದರೆ ಹಲವಷ್ಟು ಸರಿ ಇದೆ. ಗುಂಪುಗಾರಿಕೆ ಇಲ್ಲಿಯೂ ತಲೆದೋರ್‍ಇದೆ. ಆದರೆ ಎಷ್ಟೋ ಬ್ಲಾಗ್‌ಗಳು ಆರೋಗ್ಯಕರ ಬರವಣಿಗೆಗೆ ಅದರ ಬೆಳವಣಿಗೆಗೆ ಒತ್ತುಕೊಟ್ಟಿವೆ. ಹಾಗೇ ಬರೆಯುತ್ತಲೂ ಇವೆ. ಬ್ಲಾಗ್ ಅಂದ್ರೆ ಎಲ್ಲವೂ ಅಲ್ಲ ಹೇಗೋ ಬ್ಲಾಗ್ ಅಂದ್ರೆ ಎನೂ ಅಲ್ಲ ಎನ್ನುವುದೂ ಸರಿಯಲ್ಲ.
ಲೊ :) ಈ ಲೇಖನ ಓದಿ ಬಿದ್ದು ಬಿದ್ದು ನಕ್ಕಾಯ್ತು :)..
Post a Comment