Friday, November 21, 2008

ಪ್ರಮೋದನ ಕುಂಚದ ಕಲೆ.....

`ಕಲೆ' ಎಂಬುದು ಹುಟ್ಟಿನಿಂದಲೇ ಬಂದಿರಬೇಕು. ಆಸಕ್ತಿ ಇದ್ದರೂ ಸಿದ್ಧಿಸಿಕೊಳ್ಳುವುದಕ್ಕೆ ಕಷ್ಟ. ನಾನೂ ಚಿತ್ರಕಲೆ ಆಸಕ್ತಿ ಇರುವವನೇ. ಆದರೆನೇನು ಗಣಪತಿ ಬಿಡಿಸಿದರೆ ಹನುಮಂತ ಆಗುತ್ತದೆ ಅಷ್ಟೇ. ನನ್ನ ಓದುಗ ಜೊತೆಗಾರ ಪ್ರಮೋದ್‌ ಒಬ್ಬ ಒಳ್ಳೆಯ ಕಲಾವಿದ. ಈತ ಹೈಸ್ಕೂಲ್‌ ಓದುತ್ತಿರುವಾಗಲೇ ಉತ್ತಮ ಚಿತ್ರಗಳನ್ನು ಬಿಡಿಸುತ್ತಿದ್ದ. ನಮಗೆಲ್ಲ ಆಶ್ಚರ್ಯ `ಎಂತಹ ಚಿತ್ರಗಳು' ಎಂದು. ನಾವು ಪ್ರಯತ್ನ ಮಾಡುತ್ತಿದ್ದೆವು. ಪರಿಣಾಮ ಮಾತ್ರ ಶೂನ್ಯವಾಗಿತ್ತು.
ಪ್ರಮೋದ್‌ ಓದಿನಲ್ಲೂ ಮುಂದೆ ಇದ್ದವನು. ಇಂಜನಿಯರಿಂಗ್‌ ಕಲಿತು ಒಳ್ಳೆ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಒತ್ತಡದ ಬದುಕಿಗೆ ಹೋದಾಗ ಹವ್ಯಾಸಗಳು ಹಿಂದೆ ಬೀಳುತ್ತವೆ. ಆದರೆ ಪ್ರಮೋದ್‌ ಮಾತ್ರ ಹವ್ಯಾಸವನೇ ವೃತ್ತಿಯಂತೆ ಸ್ವೀಕರಿಸಿದವನು. ನಮ್ಮ ಹಿರಿಯರೊಬ್ಬರು ಕೇಳಿದ ಮಾತು `ಏನು ಮಾಡ್ಕೊಂಡಿದಿಯಪ್ಪಾ?' ಅದಕ್ಕೆ ಉತ್ತರ `ಕಲಾವಿದನಾಗಿದ್ದೇನೆ ಸಾರ್‌' ಅದಕ್ಕವರು `ಸರಿ ಹೊಟ್ಟೆಗೆ ಏನು ಮಾಡ್ತೀಯಾ?' ಎಂದು. ಮಿತ್ರ ಪ್ರಮೋದ್‌ ಹಾಗಲ್ಲ. ಹೊಟ್ಟೆಗೆ ಕಂಪನಿಯಲ್ಲಿ ಕೆಲಸ. ಮನಸ್ಸಿನ ಹಸಿವನ್ನು ನಿಗಿಸಿಕೊಳ್ಳಲು ಕುಂಚ ಪ್ರಪಂಚಕ್ಕೆ ಹೋಗುತ್ತಾರೆ.
ಪ್ರಮೋದ್‌ ಒಟ್ಟುವರೆ ಚಿತ್ರ ಬರೆಯಲು ಹೋಗಲಿಲ್ಲ. ಕುಂಚಕ್ಕೊಂದು ವಿಷಯವನ್ನು ಕೊಟ್ಟುಕೊಂಡಿದ್ದಾನೆ. ಇದು ಗಮನಾರ್ಹವಾದದ್ದು.
`ಕಾನಿನ' ಮಿತ್ರನ ಕುಂಚ ಈ ವಿಷಯದ ಕುರಿತು ಕ್ಯಾನವಾಸ್‌ ಮೇಲೆ ಚಿತ್ರ ಬಿಡಿಸುತ್ತದೆ. ಕುಲಹೀನ, ವಿವಾಹ ಪೂರ್ವದ ಸಂಬಂಧದಲ್ಲಿ ಹುಟ್ಟಿದ ಮಕ್ಕಳ ಬದುಕಿನ ಚಿತ್ರಣ ಇದರಲ್ಲಿ ಇರುತ್ತದೆ. ಉದಾಹರಣೆಗೆ ಕರ್ಣನ ಬದುಕುನ್ನು ಗಮನಿಸಿದರೆ ಗೊತ್ತಾಗುತ್ತದೆ. ಒಳ್ಳೆಯದ್ದಾಗಿದ್ದರೆ ತನ್ನ ಮಗ. ಕೆಟ್ಟವನಾದರೆ ಬೀಜ ಬಿತ್ತಿದಂತೆ ಬೆಳೆ. ಎನ್ನುವ ನುಡಿ ಸಮಾಜದಲ್ಲಿ ಕೇಳಿಬರುತ್ತದೆ. ಇಂತಹ ಅದ್ಭುತ ವಿಚಾರಗಳನ್ನು ಇಟ್ಟುಕೊಂಡು ಪ್ರಮೋದ್‌ ಚಿತ್ರ ಬಿಡಿಸುತ್ತಿದ್ದಾನೆ. ಇವನ ಪ್ರತಿಯೊಂದು ಚಿತ್ರಕ್ಕೂ ಪುಟಗಟ್ಟಲೆ ವ್ಯಾಖ್ಯಾನವನ್ನು ನೀಡಬಹುದು.
ಇವನು ತನ್ನ ಮೂಲ ಗುರು, ಕಲೆಯ ಬಗ್ಗೆ ಉತ್ಕಟ ಆಸಕ್ತಿಯನ್ನು ಮೂಡಿಸಿದ ಸತೀಶ್‌ ಯಲ್ಲಾಪುರ ಅವರನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ.
ಪ್ರಮೋದನ ಚಿತ್ರಗಳು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಗೊಂಡಿದೆ. ಸಧ್ಯ ತುಮಕೂರಿನ ದೇವದುರ್ಗದಲ್ಲಿ ನಡೆದ `ಕಾಸರವಳ್ಳಿ ಗೌರವ' ಕಾರ್ಯಕ್ರಮದಲೂ ಪ್ರದರ್ಶನಗೊಂಡಿದೆ. ಇವನು ಬರೆದ ಚಿತ್ರಗಳನ್ನು ನೋಡುತ್ತಿದ್ದರೆ ನೋಡುತ್ತಲೇ ನಿಲ್ಲಬೇಕೆಂಬಷ್ಟು ಖುಶಿಯಾಗುತ್ತದೆ.
ಮಿತ್ರನ ಕುಂಚ ಪ್ರಪಂಚಕ್ಕೆ ಹ್ಯಾಟ್ಸ್‌ ಅಪ್‌ ಹೇಳುವುದಷ್ಟೇ ನಮ್ಮ ಕೆಲಸ.
kunchaprapanca.blogspot.com
ಇದು ಇವನ ಬ್ಲಾಗ್‌. ನೋಡಿ.

Tuesday, November 11, 2008

ಇಲ್ಲಿರಲಾರೆ. . . . . . ಅಲ್ಲಿಗೆ ಹೋಗಲಾರೆ

ಕೈಲ್ಲೊಂದು ಸೂಟ್‌ಕೇಸ್‌. ತಲೆಯ ತುಂಬ ಆಕಾಶದಷ್ಟು ವಿಸ್ತಾರವಾದ ಕನಸು. ಮನೆಯಿಂದ ಬೆಂಗಳೂರಿಗೆ ಹೊರಟಾಗ ಒಂದಷ್ಟು ಕಣ್ಣೀರು. ಮತ್ತೆ ಮನೆಗೆ ನಾವು ಖಾಯಂ ಆಗಿ ಇರಲು ಬರುವುದಿಲ್ಲಾ ಎನ್ನುವ ಭಯ. ಮನೆಯ ಹಿರಿಯರಿಗೆ ಕಾಲ;ಇಗೆ ಬಿದ್ದು ಗಟ್ಟಿ ಮನಸ್ಸು ಮಾಡಿ ಹೊರಟು ಬಿಡುತ್ತೇವೆ. ಹಳ್ಳಿಯಿಂದ ಹೊರಡುವ ಪ್ರತಿಯೊಬ್ಭನ ಮುಗ್ದ ಗುಣ ಇದು.
ಹಳ್ಳಿಯಲ್ಲಿಯೇ ಹುಟ್ಟಿ ಹತ್ತನೇ ತರಗತಿಯವರೆಗೂ ಮನೆಯವರ ಒತ್ತಾಯಕ್ಕೆ ಓದಿ ಅಂತೂ ಇಂತೂ ಪಾಸಾಗಿ ಊರು ಬಿಟ್ಟು ಶಿಕ್ಷಣಕ್ಕಾಗಿ ಬೇರೆ ಊರನ್ನು ಸೇರಿದ ಮೇಲೆ ಡಿಗ್ರಿ, ಡಿಪ್ಲೊಮೊ ಹಾಳು ಮೂಳು ಓದುತ್ತೇವೆ.
ಹತ್ತನೇ ತರಗತಿಯವರೆಗೂ ಗುಡ್ಡೆ ಗೇರಣ್ಣು, ಹಲಿಗೆ ಹಣ್ಣಿನ ಮಟ್ಟಿ, ಸಂಪಿಗೆ ಮರ, ಹೊಳೆದಾಸವಾಳ ಹಣ್ಣು , ಹೊಳೆಗುಂಡಿ, ಬಾಳೆಮರದ ತೆಪ್ಪ, ಗುಡ್ಡ ಅಣೇಯ ಚೌಕದಲ್ಲಿ ಆಡುವ ಕ್ರಿಕೆಟ್‌, ನವರಾತ್ರಿಯ ಟೈಮಿನಲ್ಲಿ ಚಿನ್ನಿದಾಂಡು, ಹುಡುಗಿಯರ ಕೀಟಲೆಗಾಗಿ ಆಡುವ ಲಗೋರಿ ಇವಿಷ್ಟೇ ಪ್ರಪಂಚವಾಗಿತ್ತು.
ಎಂದು ನಾಲ್ಕು ಅಕ್ಷರ ಕಲಿತು ಹೊರ ಬಿದ್ದೇವೋ ಅಮದೆ ನಮ್ಮ ಪ್ರಪಂಚ ವಿಸ್ತಾರವಾಗಿ ಕಾಣ ತೊಡಗಿತು. ಬೆಂಗಳೂರು ಸೇರಿ ನೌಕರಿ ಮಾಡು ಎನ್ನುವ ಬಯಕೆಯು ಪ್ರಾರಂಭವಾಗತ್ತದೆ. (ಮನೆಯಲ್ಲೆ ಇದ್ದು ಜಮೀನು ನೋಡಿ ಕೊಂಡಿರುವ ಎಂದರೆ, ಮನೆಯಲ್ಲಿದ್ದು ಸೆಗಣಿ ತೆಗೆಯುವವನಿ ಹೆಣ್ಣು ಮಕ್ಕಳನ್ನು ಕೊಡುವ ಮಂದಿ ಇಲ್ಲಾ. ಅಂದರೆ ಅವನಿಗೆ ಮದುವೆನು ಇಲ್ಲಾ. ಅನಿವಾಯದ ಬ್ರಹ್ಮಚಾರಿತ್ವದ ಕರ್ಮ) . ಬೆಂಗಳೂರಿಗೆ ಬಂದು ಇಳಿಯುವಾಗಲೇ ನಾವು ಸಾವಿರ ಸಾವಿರ ಜನರ ಮಧ್ಯೆ ಕಳೆದು ಹೋಗಿರುತ್ತೇವೆ. ಬಂದ ಹೊಸತರಲ್ಲಿ ನೆಂಟರ ಮನೆಯಲ್ಲಿ ಆಶ್ರಯ ಪಡೆದು ಎರಡು ತಿಂಗಲ ನಂತರ ಸ್ವಂತ ರೂಮ್‌ ಮಾಡಿ ಯಾವುದೋ ಮುಲೆಯಲ್ಲಿ ಮತ್ತೆ ಕಾಣೆ ಯಾಗಿರುತ್ತೇವೆ.
ದಿನ ಪ್ರಾರಂಭವಾಗುವುದೇ ಓಟದಿಂದ. ಆಂದ್ರದ ಹೊಟೇಲ್‌ನಲ್ಲಿ ತಿಂಡಿ ತಿಂದು, ಮಧ್ಯಾಹ್ನ ಪಾಸ್ಟ್‌ಪುಡ್‌ನಲ್ಲಿ ಮೊಸರನ್ನ ತಿಂದು, ಮನೆಗೆ ಬರುವಾಗ ಸುಸ್ತು. ಹತ್ತಿರದ ಬೇಕರಿಯ ಬನ್ನು. ಗ್ಯಾಸ್‌ ಆಗುತ್ತದೆ ಎಂದು ಒಂದು ಸೋಡಾ ಕುಡಿದು ಮಲಗಿದರೆ , ಮರುದಿನ ಮತ್ತದೇ ಜಂಜಾಟ. ಬಸ್ಸಿನಲ್ಲಿಯೇ ಅರ್ಧ ಆಯುಷ್ಯ ಬರ್ಬಾದ್‌.
ಮನೆಯ ನೆನಪು ಕಾಡುತ್ತದೆ. ಎದ್ದು ಊರಿಗೆ ಹೊರಟು ಬಿಡೋಣ ವೆನಿಸುತ್ತದೆ. ಸಾಧ್ಯವಾಗುವುದಿಲ್ಲ. ಅಪ್ಪ, ಅಮ್ಮ ಮನೆ ಮಂದಿಯೆಲ್ಲ ನೆನಪಾಗುತ್ತಾರೆ. ಆದರೆ ಸುಡಗಾಡು ಪ್ರೇಸ್ಟಿಜ್‌ ನಮ್ಮನ್ನು ಬಿಡೊದಿಲ್ಲ. ಊರಿಗೆ ಹೋದರು, ಏನೋ ಬಾನಗಡಿ ಮಾಡಿಯೇ ಊರಿಗೆ ಸೇರಿದ್ದಾನೆ ಎಂದು ಊರವರ ಎದು ನಾವೊಬ್ಬ ಕ್ರೀಮಿನಲ್‌ ಆಗಿ ಕ್ರೀಮಿ ಆಗಿಬಿಡುತ್ತೇವೆ ಎನ್ನುವ ಭಯ.
ಮಹಾನಗರಕ್ಕೆ ಸೇರಿದ ಮೇಲೆ ನಮ್ಮ ಟ್ಯಾಲೆಂಟ್‌ ಅಂದ್ರ ನಾಟಕ, ಯಕ್ಷಗಾನ, ಸಂಗೀತ ಯಾವಯಾವದು ಇರುತ್ತೋ ಅದನ್ನೇಲ್ಲ ಒಂದು ಹಾಳೆಯಲ್ಲಿ ಬರೆದು ಉರುಟ ಉಂಡೆ ಮಾಡಿ ಮೂಲೆಯಲ್ಲಿರುವ ಕಸದ ಟಬ್‌ಗೆ ಹಾಕ ಬೇಕಾಗುತ್ತದೆ. ಅವುಗಳ ನೆನಪಿನಲ್ಲಿ ಯೇ ವರ್ತಮಾನದ ಬದುಕನ್ನು ಕಳೆಯುತ್ತ ಇರಬೇಕಾಗುತ್ತದೆ.
ಝಿ ಕನ್ನ ವಾಹಿಯಲ್ಲಿ ಒಂದು ಧಾರವಾಹಿ ಬರುತ್ತೀದೆ ಇಲ್ಲಿ ಬಂದೆ ಸುಮ್ಮನೆ ಎಂದು ಅದನ್ನು ನೋಡಿ ಹಳ್ಳಿ ಬಿಟ್ಟು ಬಂದ ನಮ್ಮ ಕತೆಯಂತೆ ಇದೆ. ಅದನ್ನು ನೋಡಿ ನನಗೆಂತು ತುಂಬಾ ಬೇಸರವಾಯಿತು. ಮನೆಯ ನೆನಪು ಕಾಡ ತೊಡದೆ. ಆದರೆ ಪ್ರೇಸ್ಟೆಜು. ಇಲ್ಲಿರಲಾರೇ ಅಲ್ಲಿಗೆ ಹೋಗಲಾರೇ ಎನ್ನುವ ಸ್ಥಿತಿ.

Sunday, November 2, 2008

ಪ್ರಿಯೇ ನಿನ್ನ ಸೌಂಧ­ರ್ಯ­ವನ್ನು...

ಯಾಕೋ ಏನೋ ಇಂಗ್ಲಿಷ್‌ ಥೀಯ­ಟರ್‌ ಪದ್ಧತಿ ಬಂದ ಮೇಲೆ ನಮ್ಮ ಹಳ್ಳಿ ನಾಟ­ಕಕ್ಕೆ ಕುತ್ತು ಬಂದಿ­ರಿ­ವು­ದೆಂತು ಸತ್ಯ. ಉತ್ತರ ಕರ್ನಾ­ಟಕ, ಮತ್ತು ಬೆಂಗ­ಳೂರು, ಚಿರ್ತ­ದುರ್ಗ ಭಾಗ­ದಲ್ಲಿ ಇನ್ನೂ ಪರದೆ ನಾಟ­ಕದ ಸಂಸ್ಕ­­ತಿ­ಯಿ­ರು­ವುದು ಸಂತ­ಸದ ವಿಚಾರ. ಪರದೆ ನಾಟ­ಕ­ಗ­ಳೆಂ­ದರೆ ಚಂದೋಡಿ ಲೀಲಾ ಅವರ ಕಂಪ­ನಿ­ಯಲ್ಲ. ಹಳ್ಳಿ­ಯಲ್ಲಿ ಕಡಿಮೆ ಓದು ಬರಹ ಕಲಿತು, ಕೃಷಿ ಕೆಲ­ಸ­ದಲ್ಲಿ ನಿರ­ತ­ರಾ­ಗಿದ್ದು ಬೇಸಿ­ಗೆಯ ಸಮಯ ಇರುವ ಅವ­ಧಿ­ಯಲ್ಲಿ ಸ್ವಲ್ಪ ಓದಿ, ಆರೆಂಟು ನಾಟ­ಕ­ಗ­ಳನ್ನು ಆಡಿ­ಸಿದ ಅನು­ಭ­ವ­ವಿ­ರುವ ಬುದ್ಧಿ­ವಂ­ತ­ನೊಬ್ಬ ನಾಟ­ಕದ ನಿರ್ದೇ­ಶ­ಕ­ನಾ­ಗು­ತ್ತಾನೆ. ಇಂತಹ ನಾಟ­ಕದ ಗಮ್ಮತ್ತೆ ಬೇರೆ.
ಅದರ ಕೆಲವು ಜಲಕ್‌ ಇಲ್ಲಿದೆ.
ಟ್ರೈಲೆಲ್ಲಾ ಆಗಿ ನಾಟಕ ಪ್ರಾರಂ­ಭ­ವಾ­ಗಿದೆ. ಖಳ ನಾಯ­ಕನ ಪ್ರವೇಶ.ರಂ­ಗ­ದಲ್ಲಿ ಯಾವ ಲೈಟು ಇಲ್ಲಾ. ವಿಕಟ ನಗೆ­ಯನ್ನು ಆಡಿ`ಹ್ಹಾ ಹ್ಹಾ' ಎಂದು ಸಿಗ­ರೇ­ಟನ್ನು ಜೇಜಿಂದ ಸೋಗೆದು ತುಟಿಗೆ ಅಂಟಿಸಿ ಚಕ­ಮು­ಕಿ­ಯನ್ನು ಹಚ್ಚಲು ಪ್ರಯತ್ನ ಮಾಡು­ತ್ತಾನೆ ಆಗು­ವು­ದಿಲ್ಲ ಯಾಕೆಂ­ದರೆ ಅದ­ರ­ಲ್ಲಿ­ರುವ ಗ್ಯಾಸ್‌ ಖಾಲಿ­ಯಾ­ಗಿದೆ. ರಂಗ­ದಲ್ಲಿ ಲೈಟ್‌ ಇಲ್ಲದ ಕಾರಣ ಪ್ರೇಕ್ಷ­ಕ­ನೋ­ರ್ವ­ನಿಗೆ ಖಳ­ನಾ­ಯಕ ಯಾರೆಂದು ತಿಳಿ­ಯುವ ಕುತೂ­ಹಲ. ತನ್ನ­ಹತ್ರ ಇರುವ ಟಾರ್ಚ್‌ನ್ನು ನೇರ­ವಾಗಿ ಅವ­ನಿಗೆ ಬಿಟ್ಟಿ­ದ್ದಾನೆ. ಖಳ­ನಾ­ಯಕ ಯಾರೆಂದು ಗೊತ್ತಾ­ಯಿತು. ತಕ್ಷ­ಣವೇ ತಡ­ಮಾ­ಡದೇ.`ಏ ಗೋಪಾ­ಲ­ಹುಡ್ಗ ಪ್ಯಾಂಟಿನ ಜೀಪ್‌ ಹಾಕ್ಯುಂಡು ಸಾಯಲೇ' ಎಂದು­ಕೂ­ಗಿದ. ಖಳ­ನಾ­ಯ­ಕನ ಗಾಂಭೀ­ರ್ಯ­ವನ್ನೆ ನಾಶ­ವಾಗಿ ಹೋಯಿತು.
ಎರ­ಡನೇ ನಾಟಕ, ಪೌರಾ­ಣಿಕ ಕಥಾ­ನಕ. ಭೀಷ್ಮ­ಪರ್ವ. ಭೀಷ್ಮ ಕುಳಿ­ತಿ­ದ್ದಾನೆ. ಹತ್ತಿರ ಬಂದ ಅರ್ಜುನ ಮಾತು ಮಾತಿಗೆ ` ಹೇತಾತಾ...ಹೇ­ತಾತಾ' ಎಂದು ಸಂಭೋ­ದಿ­ಸು­ತ್ತಾನೆ. ಆಗ ಭೀಷ್ಮನ ಪಾತ್ರ­ದಾರಿ ತಡ­ಪಡ ಮಾಡದೇ` ಬೋಸುಡಿ ಮಗನೇ ಎಷ್ಟ ಸರ್ತಿ ಅನ್ಬಕು. ಹೇತಾತಾ ಹೇತಾತಾ ಅನ್ಬಡ. ಜನ ನಂಗೆ ಮೂಲ­ವ್ಯಾದಿ ಅಂತ ತಿಳ್ಕ­ಬು­ಟಾರು' ಎಂದ.
ಮತ್ತೊಂದು ಪೌರಾ­ಣಿಕ ನಾಟಕ ನಾರ­ದರ ಆಗ­ಮನ ವಾಗು­ತ್ತದೆ. ಎದು­ರಿನ ಪಾತ್ರ­ದಾರಿ ಏನು ಮಾತಾ­ಡ­ಬೇ­ಕೆಂದು ತಿಳಿ­ಯದೆ `ನಾ­ರ­ದರೇ ನಿಮ್ಮ ಹೆಸ­ರೇನು?' ಎಂದು ಕೇಳಿದ ಅದಕ್ಕೆ ನಾರ­ದರು`ವಸ್ತ ನನ್ನ ಹೆಸರು ನಾರದ ಮುನಿ' ಅನ್ನೋದೆ.
ಇದೊಂದು ಸಾಮಾ­ಜಿಕ ನಾಟಕ` ತಾಳಿ ಕಟ್ಟಿ­ದರು ಗಂಡ­ನಲ್ಲ' ಅರ್ಥಾತ್‌ `ಕಾಲು ಕೆದ­ರಿದ ಹುಲಿ' ನಾಟ­ಕದ ದೃಶ್ಯ ಅಂದು­ಕೊ­ಳ್ಳ­ಬ­ಹುದು. ನಾಯಕ ತುಂಬ ಭಾವು­ಕ­ನಾ­ಗಿ­ದ್ದಾನೆ ` ಪ್ರಿಯೆ ಒಡ­ಹು­ಟ್ಟಿದ ಗಂಡ­ನಿಗೆ ಇಸ ಇಕ್ಕ­ದೆಯಾ?'
ಖಳ­ನಾ­ಯಕ ಹುಡು­ಗಿ­ಯೊ­ಬ್ಬ­ಳನ್ನು ನೋಡಿ` ಹೇ ಬಾಲೆ, ಎಂದು ನೀ ಕಾಲೇ­ಜಿಗೆ ಕಣ್ಣಿ­ಟ್ಟೇಯೋ ಅಂದೆ ನಿನ್ನ ಮೇಲೆ ಕಾಲಿಟ್ಟೆ' ಅದು`ಎಂದು ಕಾಲೇ­ಜಿಗೆ ಕಾಲಿ­ಟ್ಟೇಯೋ ಅಂದೆ ನಿನ್ನ ಮೇಲೆ ಕಣ್ಣಿಟ್ಟೆ 'ಎನ್ನ ಬೇಕಾ­ಗಿತ್ತು . ಮತ್ತೊಂದು ದೃಶ್ಯ­ದಲ್ಲಿ ` ಪ್ರಿಯೇ ನಾನು ನಿನ್ನ ಸೌಂಧ­ರ್ಯ­ವನ್ನು ಪ್ರಾಕಿ­ನೊ­ಳಗೆ ಕಂಡೆನು' ಅದು `ಪ್ರಯೆ ನಿನ್ನ­ಸೌಂ­ಧ­ರ್ಯ­ವನ್ನು ಪಾರ್ಕಿ­ನೊ­ಳಗೆ ಕಂಡೆನು' ಎನ್ನ ಬೇಕಿತ್ತು.
ಯಾವುದೋ ಓಡಿ ಹೋಗುವ ಸನ್ನಿ­ವೇಶ. ಆಗ ಬರುವ ಭಾವ­ನಾ­ತ್ಮಕ ಡೈಲಾಗ್‌` ಶಂಕು­ತಲಾ( ಶಕುಂ­ತಲಾ) ನೀನು ಗರ್ಭ­ಣವೇ. ಇನ್ನು ನಾವು ತಡ ಮಾಡ­ಬಾ­ರದು. ನಿನ್ನ ಬಟ್ಟೆ­ಬ­ರೆ­ಯನ್ನು ಕುಟೆ­ಕ್ಷಿ­ನಲ್ಲಿ (ಸೂ­ಟ್‌­ಕೇಸ್‌)ನಲ್ಲಿ ತುಂಬಿ­ಬಿಡು. ನಾಳೆ ಮುಂಜಾಲೆ ನಾನು ಹೋರಟು ಹೋಗಾಣ.
ಇಂತಹ ಸಾವಿ­ರಾರು ಅಪ­ಭ್ರಂ­ಶ­ಗಳು ಹಳ್ಳಿ ನಾಟ­ಕ­ದಲ್ಲಿ ಸಿಗು­ತ್ತದೆ.
ಕೊನೆ­ಯಲ್ಲಿ ನಗ­ರ­ದ­ಲ್ಲಿ­ರು­ವ­ವರು ಊರಿಗೆ ಹೋಗಿ. ಮಾರ್ಚ್‌- ಏಪ್ರಿಲ್‌ ಟೈಮ್‌­ನಲ್ಲೆ ಹೋಗಿ. ಹತ್ತಿ­ರ­ದ­ಲ್ಲೆ­ಲ್ಲಾ­ದರು ನಾಟ­ಕ­ವಾ­ದರೆ ನೋಡಲು ಮರೆ­ಯ­ಬೇಡಿ. ಮರೆತು ನಗೆ ಅಮೃ­ತ­ವನ್ನು ಕಳೆ­ದು­ಕೊ­ಳ್ಳ­ಬೇಡಿ.

FEEDJIT Live Traffic Feed